ಬಿಟ್ ಕಾಯಿನ್ ಹಗರಣ ಇಡಿಗೆ ವಹಿಸಲು ಸರ್ಕಾರ  ಬರೆದಿರುವ ಪತ್ರ ಬಿಡುಗಡೆ ಮಾಡಲಿ: ಡಿಕೆಶಿ ಆಗ್ರಹ
News

ಬಿಟ್ ಕಾಯಿನ್ ಹಗರಣ ಇಡಿಗೆ ವಹಿಸಲು ಸರ್ಕಾರ ಬರೆದಿರುವ ಪತ್ರ ಬಿಡುಗಡೆ ಮಾಡಲಿ: ಡಿಕೆಶಿ ಆಗ್ರಹ

November 4, 2021

ಬೆಂಗಳೂರು,ನ.3-ಅಂತಾರಾಷ್ಟ್ರೀಯ ಮಟ್ಟದ ಬಿಟ್ ಕಾಯಿನ್ ಹಗರಣ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿದ್ದು, ಪ್ರಕರಣದ ತನಿಖೆಗೆ ಇಡಿಗೆ ಬರೆದಿರುವ ಪತ್ರವನ್ನು ಬಹಿ ರಂಗಪಡಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವ ಕುಮಾರ್ ರಾಜ್ಯ ಸರ್ಕಾರ ವನ್ನು ಆಗ್ರಹಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶಿವಕುಮಾರ್, ರಾಜ್ಯ ಸರ್ಕಾರ ಈ ಪ್ರಕರಣ ಕುರಿತು ಆರೋಪಪಟ್ಟಿ ಸಲ್ಲಿಸಿರುವುದಾಗಿ ಹೇಳಿದೆ. ಆರೋಪ ಪಟ್ಟಿ ಸಲ್ಲಿಸಿದ್ದರೆ, ಈ ಪ್ರಕರಣದ ತನಿಖೆಯನ್ನು ಇಡಿಗೆ ನೀಡುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು.
ಬಿಟ್ ಕಾಯಿನ್ ವಿಚಾರವಾಗಿ ಸರ್ಕಾರ ಗೊಂದಲದ ಹೇಳಿಕೆ ನೀಡುತ್ತಿದೆ. ವಿರೋಧ ಪಕ್ಷವಾಗಿ ನೀವು ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಮಾಧ್ಯಮಗಳು ಪ್ರಸ್ತಾಪಿಸಿ ದಾಗ, ಈ ಪ್ರಕರಣವನ್ನು ಇಡಿ ತನಿಖೆಗೆ ನೀಡಲಾಗಿದೆ ಎಂದು ಸಿಎಂ ಹೇಳಿಕೆ ಕೊಟ್ಟಿದ್ದನ್ನು ನಾನು ಮಾಧ್ಯಮ ಗಳಲ್ಲಿ ನೋಡಿದ್ದೇನೆ. ಸರ್ಕಾರ ಕಳೆದ 15 ದಿನಗಳಲ್ಲಿ ಈ ಪ್ರಕರಣದ ತನಿಖೆ ಮಾಡುವಂತೆ ತನಿಖಾ ಸಂಸ್ಥೆಗೆ ಬರೆದಿರುವ ಪತ್ರವನ್ನು ಬಹಿರಂಗಪಡಿಸಲಿ. ಮುಖ್ಯಮಂತ್ರಿಗಳು ಹೇಳಿದ ಮಾತ್ರಕ್ಕೆ ನಂಬಲು ಸಾಧ್ಯವಿಲ್ಲ. ಅವರು ದಾಖಲೆ ಬಿಡುಗಡೆ ಮಾಡಲಿ. ಜತೆಗೆ ಈ ಪ್ರಕರಣದ ಬಗ್ಗೆ ಈ ಹಿಂದೆ ಯಾವ ತನಿಖಾ ಸಂಸ್ಥೆ ತನಿಖೆ ಮಾಡಿತ್ತು, ಯಾವ ಹಂತದಲ್ಲಿ ತನಿಖೆ ಇತ್ತು, ಯಾರನ್ನು ವಿಚಾರಣೆಗೆ ಒಳ ಪಡಿಸಲಾಗಿತ್ತು, ಎಷ್ಟು ಜನರನ್ನು ಬಂಧಿಸಲಾಗಿದೆ, ತನಿಖೆ ಮಾಡಿದ ಅಧಿಕಾರಿಗಳು ಯಾರು? ಯಾವ ವರದಿ ನೀಡ ಲಾಗಿತ್ತು, ಆ ತನಿಖೆಯಲ್ಲಿ ಸಿಕ್ಕ ಮಾಹಿತಿ ಏನು? ಯಾರ್ಯಾರು ಭಾಗಿಯಾಗಿದ್ದಾರೆ ಎಂಬ ದಾಖಲೆಗಳನ್ನು ಸಿಎಂ ಬಿಡುಗಡೆ ಮಾಡಲಿ ಎಂದು ಆಗ್ರಹಿಸುವುದಾಗಿ ಹೇಳಿದ್ದಾರೆ.

ಈ ಬಿಟ್ ಕಾಯಿನ್ ಅಂದರೆ ಏನು? ಇದರ ಮಾಲೀ ಕರು ಯಾರು? ಯಾವ ಕಾಯ್ದೆ, ಸೆಕ್ಷನ್ ಅಡಿ ಪ್ರಕರಣ ವನ್ನು ತನಿಖಾ ಸಂಸ್ಥೆಗೆ ನೀಡಲಾಗಿದೆ ಎಂಬ ಮಾಹಿತಿ ನೀಡಲಿ. ಈ ಪ್ರಕರಣದ ಬಗ್ಗೆ ಆರೋಪಪಟ್ಟಿ ಸಲ್ಲಿಸಿದ್ದೇವೆ ಎಂದು ಹೇಳುತ್ತಾರೆ. ಆರೋಪಪಟ್ಟಿ ಸಲ್ಲಿಸಿದ ಮೇಲೆ ಇಡಿಗೆ ಯಾಕೆ ಹೋಗಬೇಕು. ಹೀಗಾಗಿ ಈ ಬಗ್ಗೆ ಜನರಿಗೆ ಸ್ಪಷ್ಟ ಚಿತ್ರಣ ನೀಡಬೇಕು. ಯಾರು ಡ್ರಗ್ ನಲ್ಲಿ, ಬಿಟ್ ಕಾಯಿನ್ ನಲ್ಲಿ ಈಜಿದ್ದಾರೋ ಗೊತ್ತಿಲ್ಲ. ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಈ ಪ್ರಕರಣ ಇರುವುದರಿಂದ ಈ ಕುರಿತ ಮಾಹಿತಿಯನ್ನು ಸರ್ಕಾರವೇ ನೀಡಬೇಕು. ವಿರೋಧ ಪಕ್ಷದ ಕೆಲಸ ತನಿಖೆ ಮಾಡಿ ಎಂದು ಆಗ್ರಹಿಸುವುದಾಗಿದೆ. ಮೊದಲು ಅವರು ತನಿಖೆಗೆ ಕೊಟ್ಟಿರುವ ವಿವರಗಳನ್ನು ಬಹಿರಂಗಪಡಿಸಲಿ, ಆ ಮೇಲೆ ವಿರೋಧ ಪಕ್ಷವಾಗಿ ಏನು ಮಾಡಬೇಕು ಎಂದು ನಮಗೆ ಗೊತ್ತಿದೆ ಎಂದು ಉತ್ತರಿಸಿದರು. 2018ರಲ್ಲಿ ಈ ಪ್ರಕರಣ ದಾಖಲಾಗಿದ್ದು, ಆಗ ಯಾರು ಮುಖ್ಯಮಂತ್ರಿಗಳಿ ದ್ದರು, ಆಗ ಶಿವಕುಮಾರ್ ಅವರು ಯಾವ ಸಚಿವರಾಗಿದ್ದರು ಎಂದು ಬಿಜೆಪಿ ನಾಯಕರು ಕೇಳಿರುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಅವರು ನನ್ನ ಹೆಸರು ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ನನ್ನ ಹೆಸರನ್ನೂ ಸೇರಿಸಿ ತನಿಖೆಗೆ ಆದೇಶಿಸಲಿ. ನಾನು ತಪ್ಪು ಮಾಡಿದ್ದರೆ ನನ್ನ ತನಿಖೆಯೂ ಆಗಬೇಕಲ್ಲವೇ. ನನ್ನ ಮೇಲೆ ಕೇಸ್ ದಾಖಲಿಸು ವಾಗ ಆದಾಯ ಇಲಾಖೆ ಪತ್ರ ಪಡೆದು, ಜಾರಿ ನಿರ್ದೇ ಶನಾಲಯದ ಮಾಹಿತಿ ಪಡೆದು ನಂತರ ಸಿಬಿಐಗೆ ಸರ್ಕಾರ ಪ್ರಕರಣವನ್ನು ವಹಿಸಿತ್ತು. ಅದೇ ರೀತಿ ಈಗಲೂ ಇಡಿಗೆ ತನಿಖೆಗೆ ಆದೇಶಿಸಿರುವ ಪತ್ರ ಅಥವಾ ದಾಖಲೆ ನೀಡಲಿ ಎಂದರು.

ದೀಪಾವಳಿ ಶುಭಾಶಯಗಳು: ಪುನೀತ್ ರಾಜಕುಮಾರ್ ನಿಧನದಿಂದ ರಾಜ್ಯ ಈ ಬಾರಿ ಬಹಳ ಕೆಟ್ಟ ಕನ್ನಡ ರಾಜ್ಯೋ ತ್ಸವ ಕಂಡಿದೆ. ಬೆಳಕಿನ ಹಬ್ಬ ದೀಪಾವಳಿ ಆಗಮಿಸುತ್ತಿದ್ದು, ಕಳೆದ ಒಂದೂವರೆ ವರ್ಷದಿಂದ ಕೋವಿಡ್ ಪರಿಣಾಮ ರಾಜ್ಯ ಹಾಗೂ ದೇಶ ಕತ್ತಲೆಯಲ್ಲಿ ಮುಳುಗಿದ್ದು, ಈ ಹಬ್ಬದ ಮೂಲಕ ಎಲ್ಲರೂ ಬೆಳಕು ಪಡೆಯಲಿ ಎಂದು ಭಗವಂತ ನಲ್ಲಿ ಪ್ರಾರ್ಥಿಸುತ್ತೇನೆ. ಈ ಹಬ್ಬವನ್ನು ಅಮೆರಿಕದ ಶ್ವೇತಭವನ ದಲ್ಲೂ ಆಚರಣೆ ಮಾಡಲಾಗುತ್ತದೆ. ಈ ಹಬ್ಬವನ್ನು ಲಕ್ಷ್ಮಿ ಪೂಜೆಯಿಂದ ಬಲಿಪಾಡ್ಯಮಿವರೆಗೂ ಆಚರಿಸುತ್ತೇವೆ. ಈ ವೇಳೆ ಎಲ್ಲರಿಗೂ ಶುಭಾಶಯ ಕೋರುತ್ತೇನೆ ಎಂದರು.

Translate »