News

ರಾಜಕೀಯ ಮಾತಾಡಿಲ್ಲ,  ಕ್ಷಮೆ ಕೇಳುವುದಿಲ್ಲ
News

ರಾಜಕೀಯ ಮಾತಾಡಿಲ್ಲ, ಕ್ಷಮೆ ಕೇಳುವುದಿಲ್ಲ

July 11, 2021

ಬೆಂಗಳೂರು, ಜು. 10- ನಾನು ಯಾರ ಮನಸ್ಸನ್ನು ನೋಯಿಸುವ ಮನುಷ್ಯನಲ್ಲ, ನನ್ನ ಹೇಳಿಕೆಯಿಂದ ಏನು ತಪ್ಪಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರ ಕಾರ್ಯಕರ್ತರು ನನ್ನ ಮನೆ ಮುಂದೆ ಪ್ರತಿಭಟನೆ ಮಾಡಲು ಬಂದಿದ್ದಾರೆ ಎಂದು ನನಗೆ ಗೊತ್ತಿಲ್ಲ, ಕುಮಾರಸ್ವಾಮಿಯವರ ಬಳಿ ಕ್ಷಮೆ ಕೇಳುವಂತಹ ತಪ್ಪನ್ನು, ಮಾತುಗಳನ್ನು ನಾನು ಆಡಿಲ್ಲ ಎಂದು ಚಿತ್ರ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ತಿಳಿಸಿದ್ದಾರೆ. ನಿನ್ನೆ ಮಾಧ್ಯಮಗಳ ಮುಂದೆ ಅಂಬರೀಷ್ ಸ್ಮಾರಕ, ಆಡಿಯೊ-ವಿಡಿಯೋ ಬಗ್ಗೆ ನೀಡಿದ್ದ ಹೇಳಿಕೆ ನಂತರ ತೀವ್ರ ವಿರೋಧ ವ್ಯಕ್ತವಾಗಿ ಇಂದು…

ಜನರ ಕೊರೊನಾ ಸಂಕಷ್ಟ ಅರಿಯಲು  ಸಿಎಂ, ಸಚಿವರ ರಾಜ್ಯ ಪ್ರವಾಸಕ್ಕೆ ಡಿಕೆಶಿ ಆಗ್ರಹ
News

ಜನರ ಕೊರೊನಾ ಸಂಕಷ್ಟ ಅರಿಯಲು ಸಿಎಂ, ಸಚಿವರ ರಾಜ್ಯ ಪ್ರವಾಸಕ್ಕೆ ಡಿಕೆಶಿ ಆಗ್ರಹ

July 2, 2021

ಬೆಂಗಳೂರು, ಜು. 1(ಕೆಎಂಶಿ)-ಮುಖ್ಯಮಂತ್ರಿಗಳು ಹಾಗೂ ಅವರ ಸಂಪುಟ ಸಹೋದ್ಯೋಗಿಗಳು ಇಡೀ ರಾಜ್ಯ ಸುತ್ತಿ ಜನರ ಸಂಕಷ್ಟ ಆಲಿಸಬೇಕು. ಇಡೀ ರಾಜ್ಯ ಆಗದಿದ್ದರೂ ಕನಿಷ್ಠ ಪಕ್ಷ ಚಾಮರಾಜನಗರ ಆಕ್ಸಿ ಜನ್ ದುರಂತದಲ್ಲಿ ಮೃತಪಟ್ಟ 36 ಮಂದಿಯ ಕುಟುಂಬಗಳನ್ನಾದರೂ ಭೇಟಿ ಮಾಡಿ, ಅವರ ಕಷ್ಟ ಕೇಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಧ್ವನಿ ಸರ್ಕಾರಕ್ಕೆ ಕೇಳಿಸುತ್ತಿಲ್ಲ. ನಮ್ಮ ಜನರ ನೋವು ಅದಕ್ಕೆ ಕಾಣುತ್ತಿಲ್ಲ. ನಮಗೆ ಹಾಗೂ ನ್ಯಾಯಾಲಯಗಳಿಗೆ ಕಾಣುತ್ತಿವೆ. ಈ ನಿಟ್ಟಿನಲ್ಲಿ…

ಕೇರಳದಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರಿಗೆ
News

ಕೇರಳದಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರಿಗೆ

July 2, 2021

ಬೆಂಗಳೂರು,ಜು.1-ನೆರೆ ರಾಜ್ಯ ಕೇರಳದಿಂದ ಕರ್ನಾಟಕಕ್ಕೆ ಬರುವ ಪ್ರಯಾ ಣಿಕರಿಗೆ ಕೊರೊನಾ ಆರ್‍ಟಿ-ಪಿಸಿಆರ್ ನೆಗೆಟಿವ್ ವರದಿ ಅಥವಾ 2 ಲಸಿಕೆ ಪಡೆದಿರುವ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಿ, ಸರ್ಕಾರ ಆದೇಶಿ ಸಿದೆ. ಡೆಲ್ಟಾ ಪ್ಲಸ್ ರೂಪಾಂತರವು ಕೇರಳದ ಕೆಲವು ಜಿಲ್ಲೆಗಳಲ್ಲಿ ವರದಿಯಾಗಿದ್ದು, ರಾಜ್ಯಾದ್ಯಂತ ಜಾರಿ ಯಲ್ಲಿರುವ ಕ್ರಮಗಳ ನಡುವೆ ಗಡಿ ಜಿಲ್ಲೆಗಳಲ್ಲಿ ವಿಶೇಷ ಕಣ್ಗಾವಲು ವಹಿಸಲಾಗಿದೆ. ವಿಮಾನ, ಬಸ್, ರೈಲು, ಟ್ಯಾಕ್ಸಿ ಮತ್ತು ವೈಯಕ್ತಿಕ ಸಾರಿಗೆ ಮೂಲಕ ಕರ್ನಾಟಕವನ್ನು ಪ್ರವೇಶಿಸುವ ಎಲ್ಲಾ ಪ್ರಯಾಣಿಕರು, 72 ಗಂಟೆಯೊಳಗಿನ ಆರ್‍ಟಿ-ಪಿಸಿಆರ್ ನೆಗೆಟಿವ್ ವರದಿ…

ಗೌರಿ ಲಂಕೇಶ್ ಹತ್ಯೆ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ನೋಟಿಸ್
News

ಗೌರಿ ಲಂಕೇಶ್ ಹತ್ಯೆ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ನೋಟಿಸ್

July 1, 2021

ನವದೆಹಲಿ, ಜೂ.30- ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯ ವಿರುದ್ಧ ದಾಖಲಾಗಿದ್ದ ಆರೋಪ ಗಳನ್ನು ರದ್ದುಗೊಳಿಸಿರುವ ರಾಜ್ಯ ಹೈಕೋರ್ಟ್‍ನ ಆದೇಶ ಪ್ರಶ್ನಿಸಲಾದ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಈ ಸಂಬಂಧ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಕರ್ನಾಟಕ ಸಂಘಟಿತ ಅಪರಾಧ ನಿಯಂ ತ್ರಣ ಕಾಯ್ದೆ (ಕೆಸಿಒಸಿಎ) ಅಡಿ ಮೋಹನ್ ನಾಯಕ್ ವಿರುದ್ಧ ದಾಖಲಾಗಿದ್ದ ಆರೋಪಗಳನ್ನು ರದ್ದು ಪಡಿಸಿ ರಾಜ್ಯ ಹೈಕೋರ್ಟ್ ಏಪ್ರಿಲ್ 22ರಂದು ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಗೌರಿ ಸೋದರಿ ಕವಿತಾ…

ರಾಜ್ಯಪಾಲರನ್ನು ಭೇಟಿಯಾದ ಸಿಎಂ ಬಿಎಸ್‍ವೈ; ಬಿಜೆಪಿ  130 ಸ್ಥಾನ ಗೆಲ್ಲುವ ಸಂಕಲ್ಪ
News

ರಾಜ್ಯಪಾಲರನ್ನು ಭೇಟಿಯಾದ ಸಿಎಂ ಬಿಎಸ್‍ವೈ; ಬಿಜೆಪಿ 130 ಸ್ಥಾನ ಗೆಲ್ಲುವ ಸಂಕಲ್ಪ

July 1, 2021

ಬೆಂಗಳೂರು, ಜೂ. 30- ಇಂದು ಸಂಜೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯಪಾಲ ವಿ.ಆರ್. ವಾಲಾ ಅವರನ್ನು ಭೇಟಿಯಾಗಿ ಉಭಯಕುಶಲೋಪರಿ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ರಾಜ್ಯಪಾಲರ ಕಣ್ಣಿನ ಲೇಸರ್ ಆಪರೇಷನ್ ಆಗಿತ್ತು. ಆರೋಗ್ಯ ವಿಚಾರಿಸಲು ಬಂದಿದ್ದೆ. ಅವರೊಂದಿಗೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದೇನೆ. ಅನೇಕ ವಿಷಯಯಗಳನ್ನು ಸಮಾ ಧಾನವಾಗಿ ತಿಳಿದುಕೊಂಡಿದ್ದಾರೆ. ಯಾವುದೇ ರಾಜಕೀಯ ಮಾತನಾಡಲು ಬಂದಿಲ್ಲ ಎಂದು ಹೇಳಿದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ದೆಹಲಿ ಪ್ರವಾಸ ವಿಚಾರವಾಗಿ ಪ್ರತಿಕ್ರಿಯಿಸಿದ ಯಡಿಯೂರಪ್ಪ…

ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ನಡುವೆ ಮತ್ತೊಮ್ಮೆ ಜಟಾಪಟಿಗೆ ಕಾರಣವಾದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷಗಾದಿ
News

ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ನಡುವೆ ಮತ್ತೊಮ್ಮೆ ಜಟಾಪಟಿಗೆ ಕಾರಣವಾದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷಗಾದಿ

July 1, 2021

ಬೆಂಗಳೂರು, ಜೂ.30-ಮುಂದಿನ ಸಿಎಂ ವಿಚಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ನಡುವಿನ ಮುಸುಕಿನ ಗುದ್ದಾಟ ಸ್ವಲ್ಪ ಮಟ್ಟಿಗೆ ಶಮನವಾಗುತ್ತಿರುವ ಬೆನ್ನಲ್ಲೇ ರಾಜ್ಯ ಯುವ ಕಾಂಗ್ರೆಸ್ (ಕೆಪಿವೈಸಿಸಿ) ಅಧ್ಯಕ್ಷ ಸ್ಥಾನದ ವಿಚಾರವಾಗಿ ಸಿದ್ದ ರಾಮಯ್ಯ ಹಾಗೂ ಡಿ.ಕೆ.ಶಿವ ಕುಮಾರ್ ನಡುವೆ ಜಟಾಪಟಿ ನಡೆದಿದೆ. ವಿವರ: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ಚುನಾವಣೆಯನ್ನು ಶಾಸಕ ಹ್ಯಾರೀಸ್ ಪುತ್ರ ಮಹಮದ್ ನಲಪಾಡ್ ಅತೀ ಹೆಚ್ಚು ಮತ ಪಡೆದು ವಿಜೇತ ರಾಗಿದ್ದರು. ಆದರೆ ಯುಬಿ…

ರಾಜ್ಯ ಕಾಂಗ್ರೆಸ್‍ನಲ್ಲಿ ಬಿರುಸಿನ ಬೆಳವಣಿಗೆ
News

ರಾಜ್ಯ ಕಾಂಗ್ರೆಸ್‍ನಲ್ಲಿ ಬಿರುಸಿನ ಬೆಳವಣಿಗೆ

June 30, 2021

ಬೆಂಗಳೂರು, ಜೂ. 29- ಮುಂದಿನ ಮುಖ್ಯಮಂತ್ರಿ ಸಂಬಂಧ ಕಾಂಗ್ರೆಸ್‍ನಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು, ಹಾಲಿ ರಾಜ ಕೀಯ ಬೆಳವಣಿಗೆಗಳು ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದೆ. ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂಬ ಕೆಲವು ಶಾಸಕರ ಹೇಳಿಕೆಯಿಂದ ರಾಜ್ಯ ಕಾಂಗ್ರೆಸ್ ಈಗ ಒಡೆದ ಮನೆಯಾಗಿದೆ. ಬಣ ರಾಜಕೀಯ ಆರಂಭವಾಗಿದ್ದು, ಪ್ರತಿನಿತ್ಯ ಶಾಸಕರು ತಮ್ಮ ತಮ್ಮ ನೆಚ್ಚಿನ ನಾಯಕರ ಭೇಟಿಗೆ ಎಡತಾಕುತ್ತಿದ್ದಾರೆ. ಭವಿಷ್ಯದ ಮುಖ್ಯಮಂತ್ರಿ ವಿಷಯದಲ್ಲಿ ಇದುವರೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಶೀತಲ ಸಮರ…

ಕೆಂಪೇಗೌಡರ ಅಂಚೆ ಚೀಟಿ ಬಿಡುಗಡೆಗೊಳಿಸಿದ ಸಿಎಂ
News

ಕೆಂಪೇಗೌಡರ ಅಂಚೆ ಚೀಟಿ ಬಿಡುಗಡೆಗೊಳಿಸಿದ ಸಿಎಂ

June 28, 2021

ಬೆಂಗಳೂರು, ಜೂ.27- ನಾಡಪ್ರಭು ಕೆಂಪೇಗೌಡರ 512ನೇ ಜಯಂತಿ ಪ್ರಯುಕ್ತ ಮುಖ್ಯಮಂತ್ರಿ ಬಿ.ಎಸ್.ಯುಡಿಯೂರಪ್ಪ ಅವರು ಭಾನುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ನಾಡ ಪ್ರಭುಗಳ ಜಯಂತಿ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಅಂಚೆ ಚೀಟಿ ಲೋಕಾ ರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಗಳಾದ ಡಾ.ಸಿ.ಎನ್.ಅಶ್ವಥ್ ನಾರಾ ಯಣ, ಗೋವಿಂದ ಕಾರಜೋಳ, ಸಚಿವ ಗೋಪಾಲಯ್ಯ, ಶಾಸಕ ಮುನಿರತ್ನ, ಶಾಸಕ ಮಂಜುನಾಥ್, ಸಂಸದ ಪಿ.ಸಿ. ಮೋಹನ್, ಶಾಸಕ ರಿಜ್ವಾನ್ ಅರ್ಷದ್, ಹೆಚ್.ಆರ್.ವಿಶ್ವನಾಥ್, ಆದಿ ಚುಂಚನ ಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ದಗಂಗಾ ಮಠದ ಸಿದ್ದ ಲಿಂಗ…

ಅವಸರದ ಅನ್‍ಲಾಕ್ ಬೇಡ
News

ಅವಸರದ ಅನ್‍ಲಾಕ್ ಬೇಡ

June 28, 2021

ಬೆಂಗಳೂರು, ಜೂ.27- ಕೋವಿಡ್ ಡೆಲ್ಟಾ-ಪ್ಲಸ್ ಪ್ರಕ ರಣಗಳ ಸಂಖ್ಯೆ ಹೆಚ್ಚಳ ಮತ್ತು ಮಹಾರಾಷ್ಟ್ರ ಅನ್‍ಲಾಕ್ ನಿಂದಾಗಿ ರಾಜ್ಯದಲ್ಲಿ ಮತ್ತೆ ನಿಧಾನವಾಗಿ ಪರಿಸ್ಥಿತಿ ಗಂಭೀರ ವಾಗುತ್ತಿದ್ದು, ಈ ನಿಟ್ಟಿನಲ್ಲಿ ಕರ್ನಾಟಕದ ತಾಂತ್ರಿಕ ಸಲಹಾ ಸಮಿತಿ (ಟಿಎಸಿ)ರಾಜ್ಯ ಸರ್ಕಾರ ತಕ್ಷಣ ತೆಗೆದುಕೊಳ್ಳ ಬೇಕಾದ ಕ್ರಮಗಳ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಲಾಕ್‍ಡೌನ್ ಮಾರ್ಗಸೂಚಿಗಳನ್ನು ಸಡಿಲಿಸು ವುದು ಬೇಡ ಎಂದು ಸರ್ಕಾರಕ್ಕೆ ಸೂಚಿಸಿದೆ. ಡೆಲ್ಟಾ-ಪ್ಲಸ್‍ನ ಎರಡು ಪ್ರಕರಣಗಳು ರಾಜ್ಯದಲ್ಲಿ ಕಾಣಿಸಿದ್ದು ರಾಜ್ಯಕ್ಕೆ ಕೇಂದ್ರ ಕೂಡ ಜಾಗೃತವಾಗಿರು ವುದಕ್ಕೆ ಒತ್ತಾಯಿಸಿದೆ. ತಕ್ಷಣ ನಿಯಂತ್ರಣ…

ಜು.31ರೊಳಗೆ ಮೌಲ್ಯಮಾಪನ ಫಲಿತಾಂಶ  ಪ್ರಕಟಿಸಿ: ರಾಜ್ಯಗಳಿಗೆ ಸುಪ್ರೀಂ ಸೂಚನೆ
News

ಜು.31ರೊಳಗೆ ಮೌಲ್ಯಮಾಪನ ಫಲಿತಾಂಶ ಪ್ರಕಟಿಸಿ: ರಾಜ್ಯಗಳಿಗೆ ಸುಪ್ರೀಂ ಸೂಚನೆ

June 25, 2021

ನವದೆಹಲಿ,ಜೂ.24-ಇಂದಿನಿಂದ 10 ದಿನಗಳಲ್ಲಿ ಮೌಲ್ಯಮಾಪನದ ಯೋಜನೆ ಯನ್ನು ರೂಪಿಸಿ ತಿಳಿಸಬೇಕು ಮತ್ತು ಆಂತ ರಿಕ ಮೌಲ್ಯಮಾಪನ ಫಲಿತಾಂಶಗಳನ್ನು ಜು.31ರೊಳಗೆ ಘೋಷಿಸಬೇಕು ಎಂದು ಸುಪ್ರೀಂಕೋರ್ಟ್ ಎಲ್ಲಾ ರಾಜ್ಯಗಳ ಶಿಕ್ಷಣ ಮಂಡಳಿಗಳಿಗೆ ನಿರ್ದೇಶಿಸಿದೆ. ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್, ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಒಳಗೊಂಡ ವಿಭಾಗೀಯ ನ್ಯಾಯಪೀಠ, ಪ್ರತಿ ಮಂಡಳಿಯು ಸ್ವಾಯತ್ತ ಮತ್ತು ವಿದ್ಯಾರ್ಥಿಗಳಿಗೆ ತನ್ನದೇ ಆದ ಮೌಲ್ಯ ಮಾಪನ ವಿಧಾನವನ್ನು ರೂಪಿಸಲು ಮುಕ್ತ ವಾಗಿದೆ ಎಂದು ಸ್ಪಷ್ಟಪಡಿಸಿದೆ. ಎಲ್ಲಾ ರಾಜ್ಯ ಗಳಲ್ಲಿಯೂ ಒಂದೇ ಬಗೆಯ ಮೌಲ್ಯ ಮಾಪನ ಯೋಜನೆ ಇರಬೇಕು ಎಂದು…

1 61 62 63 64 65 73
Translate »