ಜು.31ರೊಳಗೆ ಮೌಲ್ಯಮಾಪನ ಫಲಿತಾಂಶ  ಪ್ರಕಟಿಸಿ: ರಾಜ್ಯಗಳಿಗೆ ಸುಪ್ರೀಂ ಸೂಚನೆ
News

ಜು.31ರೊಳಗೆ ಮೌಲ್ಯಮಾಪನ ಫಲಿತಾಂಶ ಪ್ರಕಟಿಸಿ: ರಾಜ್ಯಗಳಿಗೆ ಸುಪ್ರೀಂ ಸೂಚನೆ

June 25, 2021

ನವದೆಹಲಿ,ಜೂ.24-ಇಂದಿನಿಂದ 10 ದಿನಗಳಲ್ಲಿ ಮೌಲ್ಯಮಾಪನದ ಯೋಜನೆ ಯನ್ನು ರೂಪಿಸಿ ತಿಳಿಸಬೇಕು ಮತ್ತು ಆಂತ ರಿಕ ಮೌಲ್ಯಮಾಪನ ಫಲಿತಾಂಶಗಳನ್ನು ಜು.31ರೊಳಗೆ ಘೋಷಿಸಬೇಕು ಎಂದು ಸುಪ್ರೀಂಕೋರ್ಟ್ ಎಲ್ಲಾ ರಾಜ್ಯಗಳ ಶಿಕ್ಷಣ ಮಂಡಳಿಗಳಿಗೆ ನಿರ್ದೇಶಿಸಿದೆ.
ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್, ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಒಳಗೊಂಡ ವಿಭಾಗೀಯ ನ್ಯಾಯಪೀಠ, ಪ್ರತಿ ಮಂಡಳಿಯು ಸ್ವಾಯತ್ತ ಮತ್ತು ವಿದ್ಯಾರ್ಥಿಗಳಿಗೆ ತನ್ನದೇ ಆದ ಮೌಲ್ಯ ಮಾಪನ ವಿಧಾನವನ್ನು ರೂಪಿಸಲು ಮುಕ್ತ ವಾಗಿದೆ ಎಂದು ಸ್ಪಷ್ಟಪಡಿಸಿದೆ. ಎಲ್ಲಾ ರಾಜ್ಯ ಗಳಲ್ಲಿಯೂ ಒಂದೇ ಬಗೆಯ ಮೌಲ್ಯ ಮಾಪನ ಯೋಜನೆ ಇರಬೇಕು ಎಂದು ಆದೇಶಿಸುವುದಿಲ್ಲ. ಪ್ರತಿ ಮಂಡಳಿಯು ತಮ್ಮದೇ ಆದ ಯೋಜನೆ ರೂಪಿಸಿಕೊಳ್ಳ ಬೇಕಾಗುತ್ತದೆ ಎಂದೂ ಸ್ಪಷ್ಟಪಡಿಸಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಬೋರ್ಡ್ ಪರೀಕ್ಷೆಗಳನ್ನು ನಡೆಸದಂತೆ ರಾಜ್ಯಗಳಿಗೆ ನಿರ್ದೇಶನ ಕೋರಿರುವ ಮನವಿಗಳ ಕುರಿತಂತೆ ವಿಚಾ ರಣೆ ನಡೆಸಿದ ಉನ್ನತ ನ್ಯಾಯಾಲಯ ಈ ಆದೇಶ ನೀಡಿದೆ. ವಿಡಿಯೋ-ಕಾನ್ಫ ರೆನ್ಸಿಂಗ್ ಮೂಲಕ ನಡೆಸಿದ ವಿಚಾ ರಣೆಯ ಸಮಯದಲ್ಲಿ, ಸಾಂಕ್ರಾಮಿಕ ರೋಗದ ಮಧ್ಯೆ 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿದ ರಾಜ್ಯ ಮಂಡಳಿಗಳು ವಿದ್ಯಾರ್ಥಿ ಗಳನ್ನು ಮೌಲ್ಯಮಾಪನ ಮಾಡಲು ಏಕರೂಪದ ಯೋಜನೆಯನ್ನು ಹೊಂದಲು ಕೇಳಿಕೊಳ್ಳಬಹುದು ಎಂದು ನ್ಯಾಯಪೀಠಕ್ಕೆ ಹಾಜರಾದ ವಕೀಲರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯ ಪೀಠ, `ಅದು ಸ್ವೀಕಾರಾರ್ಹವಲ್ಲ. ಏಕೆಂದರೆ, ಪ್ರತಿ ರಾಜ್ಯ ಮಂಡಳಿಯು ತಮ್ಮದೇ ಆದ ಯೋಜನೆಯನ್ನು ಹೊಂದಿದೆ. ಇದು ಏಕ ರೂಪವಾಗಿರಲು ಸಾಧ್ಯವಿಲ್ಲ. ನಾವು ಏಕ ರೂಪದ ಯೋಜನೆಗಾಗಿ ನಿರ್ದೇಶಿಸಲು ಹೋಗುವುದಿಲ್ಲ. ಪ್ರತಿಯೊಂದು ಮಂಡಳಿಯು ತಮ್ಮದೇ ಆದ ಯೋಜನೆಯನ್ನು ರೂಪಿಸಿ ಕೊಳ್ಳಬೇಕಾಗುತ್ತದೆ’ ಎಂದು ಹೇಳಿದೆ, ಪ್ರತಿ ಮಂಡಳಿಯು ವಿಭಿನ್ನ ಮತ್ತು ಸ್ವಾಯತ್ತ ವಾಗಿದೆ ಎಂದು ಸ್ಪಷ್ಟಪಡಿಸಿದೆ.

Translate »