ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾನೂನು- ಮಾನವ ಹಕ್ಕುಗಳ ಜಿಲ್ಲಾ ಸಮಿತಿ ಪ್ರತಿಭಟನೆ
ಮೈಸೂರು

ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾನೂನು- ಮಾನವ ಹಕ್ಕುಗಳ ಜಿಲ್ಲಾ ಸಮಿತಿ ಪ್ರತಿಭಟನೆ

June 25, 2021

ಮೈಸೂರು, ಜೂ.24(ಎಂಟಿವೈ)- ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್‍ನ ಮೈಸೂರು ಗ್ರಾಮಾಂ ತರ ಜಿಲ್ಲಾ ಕಾನೂನು ಮತ್ತು ಮಾನವ ಹಕ್ಕುಗಳ ಸಮಿತಿ ಕಾರ್ಯಕರ್ತರು ಮೈಸೂ ರಿನಲ್ಲಿ ಕಾಂಗ್ರೆಸ್ ಭವನ ಬಳಿಯ ಪೆಟ್ರೋಲ್ ಬಂಕ್ ಎದುರು ಪ್ರತಿಭಟಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. `ಪೆಟ್ರೋಲ್ ಬೆಲೆ 100 ರೂ. ನಾಟ್ ಔಟ್’ ಫಲಕ ಪ್ರದ ರ್ಶಿಸಿ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರದಲ್ಲಿ 2 ಬಾರಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಳ ವಿರೋಧಿಸಿ ಪ್ರತಿ ಭಟನೆ ಮಾಡಿದ್ದ ಬಿಜೆಪಿ ಕಾರ್ಯ ಕರ್ತರು, ಈಗ ತಮ್ಮದೇ ಪಕ್ಷ ಅಧಿಕಾರ ಅವಧಿಯಲ್ಲಿ ತೈಲ ಬೆಲೆ ಹೆಚ್ಚಾದಾಗ ಬಾಯಿಗೆ ಬೀಗ ಹಾಕಿದ್ದಾರೆ. ಯುಪಿಎ ಸರ್ಕಾರದಲ್ಲಿ ಅಂತಾರಾಷ್ಟ್ರೀಯ ಮಾರು ಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಹೆಚ್ಚಾಗಿದ್ದರೂ, ಜನರಿಗೆ ಹೊರೆಯಾಗದಂತೆ ನೋಡಿ ಕೊಳ್ಳಲಾಗಿತ್ತು. ಆರ್ಥಿಕ ತಜ್ಞರೂ ಆಗಿದ್ದ ಮನಮೋಹನ್ ಸಿಂಗ್ ಜನಸಾಮಾನ್ಯ ರಿಗೆ ಹೊರೆಯಾಗುವುದನ್ನು ತಪ್ಪಿಸಲು ತೈಲಬೆಲೆ ಹೆಚ್ಚಿಸಿರಲಿಲ್ಲ. ಪ್ರಸ್ತುತ ಕಚ್ಚಾತೈಲ ಬೆಲೆ ಕಡಿಮೆ ಇದ್ದರೂ ಸುಂಕ ಹೆಚ್ಚಾಗಿ ವಿಧಿಸುವ ಮೂಲಕ ದುಪ್ಪಟ್ಟು ಬೆಲೆ ನಿಗದಿ ಮಾಡುವ ಮೂಲಕ ಬಡವರು ಹಾಗೂ ಮಧ್ಯಮ ವರ್ಗದವರನ್ನು ಕಷ್ಟಕ್ಕೀಡು ಮಾಡಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಕ್ಕೆ ಬಂದರೆ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸುತ್ತೇವೆ ಎಂದು ಬಿಜೆಪಿ ಯವರು ಆಶ್ವಾಸನೆ ನೀಡಿದ್ದರು. ಅಧಿಕಾರಕ್ಕೆ ಬಂದ ಮೇಲೆ ವರ್ಷ ವರ್ಷ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ತೆರಿಗೆ ಹೆಚ್ಚಿಸು ತ್ತಲೇ ಇದ್ದಾರೆ. ಪೆಟ್ರೋಲ್ ಬೆಲೆ ಪಾಕಿಸ್ತಾನ ದಲ್ಲಿ 51.61 ರೂ., ಶ್ರೀಲಂಕಾದಲ್ಲಿ 59.64 ರೂ. ಇದೆ. ಭಾರತದಲ್ಲಿ 105 ರೂ. ಗೇರಿದೆ. 1 ವರ್ಷದಲ್ಲಿ 30 ರೂ. ಹೆಚ್ಚಾಗಿದೆ. ಬಿಜೆಪಿ ಸರ್ಕಾರದ ಬಡವರ ವಿರೋಧಿ, ಕಾಪೆರ್Ç ರೇಟ್ ಪರ ನಿಲುವುಗಳಿಂದಾಗಿ ದೇಶ ವೇಗ ವಾಗಿ ಬಡತನಕ್ಕೆ ಜಾರುತ್ತಿದೆ. ನಿರುದ್ಯೋಗ ಹೆಚ್ಚುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನ ಕ್ಕೇರಿ ಬಡವರು ಬದುಕಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾ ಕಾರರು ದೂರಿದರು. ಕಾಂಗ್ರೆಸ್ ಕಾನೂನು -ಮಾನವ ಹಕ್ಕುಗಳ ಸಮಿತಿ ರಾಜ್ಯಾಧ್ಯಕ್ಷ ಎ.ಎಸ್.ಪೊನ್ನಣ್ಣ ಸೂಚನೆ ಮೇರೆಗೆ ಮೈಸೂ ರಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‍ಕುಮಾರ್, ಕೆಪಿಸಿಸಿ ಕಾನೂನು, ಮಾನವ ಹಕ್ಕುಗಳು ಆರ್‍ಟಿಐ ಘಟಕದ ರಾಜ್ಯ ಕಾರ್ಯದರ್ಶಿ ಕವಿತಾ ಕಾಳೆ, ಮೈಸೂರು ನಗರ ಅಧ್ಯಕ್ಷ ಪಾಳ್ಯ ಸುರೇಶ್ ಮತ್ತಿತರರಿದ್ದರು.

Translate »