ನಜರಬಾದ್ ಸರ್ಕಾರಿ ಪಿಯು ಕಾಲೇಜು ಹೆಚ್ಚುವರಿ  ಕೊಠಡಿ ನಿರ್ಮಾಣ ಕಾಮಗಾರಿಗೆ ಶಾಸಕ ನಾಗೇಂದ್ರ ಚಾಲನೆ
ಮೈಸೂರು

ನಜರಬಾದ್ ಸರ್ಕಾರಿ ಪಿಯು ಕಾಲೇಜು ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಗೆ ಶಾಸಕ ನಾಗೇಂದ್ರ ಚಾಲನೆ

June 25, 2021

ಮೈಸೂರು, ಜೂ. 24 (ಆರ್‍ಕೆ)-ಮೈಸೂರಿನ ಎರಡು ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಹೆಚ್ಚುವರಿ ತರಗತಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಗುರುವಾರ ಗುದ್ದಲಿಪೂಜೆ ನೆರವೇರಿಸಿದರು.

ಕಾಲೇಜು ಶಿಕ್ಷಣ ಇಲಾಖೆಯಿಂದ ಬಿಡುಗಡೆಯಾಗಿ ರುವ ಅನುದಾನದಲ್ಲಿ ಮೈಸೂರಿನ ನಜರಬಾದ್‍ನ ಮಹಾ ರಾಜ ವಿಭಜಿತ ಜೂನಿಯರ್ ಕಾಲೇಜಿನಲ್ಲಿ 7 ಹೆಚ್ಚುವರಿ ಕೊಠಡಿ ಕಟ್ಟಡವನ್ನು 70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸ ಲಾಗುತ್ತಿದೆ. ಅದೇ ರೀತಿ ಪೀಪಲ್ಸ್ ಪಾರ್ಕ್‍ನಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ 7 ಕೊಠಡಿ ಹಾಗೂ ಶೌಚಾಲಯವನ್ನು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಎಲ್.ನಾಗೇಂದ್ರ, ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗಳಿಗೆ ಚಾಲನೆ ನೀಡಿದರು. ಪದವಿ ಪೂರ್ವ ಶಿಕ್ಷಣ ಹಾಗೂ ವೃತ್ತಿ ತರ ಬೇತಿ ಇಲಾಖೆ ಉಪನಿರ್ದೇಶಕ ಡಿ.ಕೆ.ಶ್ರೀನಿವಾಸಮೂರ್ತಿ, ಕಾಲೇಜು ಪ್ರಾಂಶುಪಾಲರಾದ ಸಿ.ಪುಟ್ಟರಾಜು, ನಾಗಮ್ಮ, ಪಾಲಿಕೆ ಸದಸ್ಯ ಸತೀಶ್, ಗುತ್ತಿಗೆದಾರ ಉಮೇಶ್, ಪಂಚಾಯತ್ ರಾಜ್ ಇಲಾಖೆ ಇಂಜಿನಿಯರ್ ಸಂಗಮೇಶ್, ರವಿ, ಅನೂಜ್, ಪರಮೇಶ್ ಈ ಸಂದರ್ಭ ಉಪಸ್ಥಿತರಿದ್ದರು.

Translate »