ರಾಜ್ಯ ಕಾಂಗ್ರೆಸ್‍ನಲ್ಲಿ ಬಿರುಸಿನ ಬೆಳವಣಿಗೆ
News

ರಾಜ್ಯ ಕಾಂಗ್ರೆಸ್‍ನಲ್ಲಿ ಬಿರುಸಿನ ಬೆಳವಣಿಗೆ

June 30, 2021

ಬೆಂಗಳೂರು, ಜೂ. 29- ಮುಂದಿನ ಮುಖ್ಯಮಂತ್ರಿ ಸಂಬಂಧ ಕಾಂಗ್ರೆಸ್‍ನಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು, ಹಾಲಿ ರಾಜ ಕೀಯ ಬೆಳವಣಿಗೆಗಳು ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದೆ. ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂಬ ಕೆಲವು ಶಾಸಕರ ಹೇಳಿಕೆಯಿಂದ ರಾಜ್ಯ ಕಾಂಗ್ರೆಸ್ ಈಗ ಒಡೆದ ಮನೆಯಾಗಿದೆ. ಬಣ ರಾಜಕೀಯ ಆರಂಭವಾಗಿದ್ದು, ಪ್ರತಿನಿತ್ಯ ಶಾಸಕರು ತಮ್ಮ ತಮ್ಮ ನೆಚ್ಚಿನ ನಾಯಕರ ಭೇಟಿಗೆ ಎಡತಾಕುತ್ತಿದ್ದಾರೆ. ಭವಿಷ್ಯದ ಮುಖ್ಯಮಂತ್ರಿ ವಿಷಯದಲ್ಲಿ ಇದುವರೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಶೀತಲ ಸಮರ ಏರ್ಪಟ್ಟಿತ್ತು. ಆದರೆ, ಇತ್ತೀಚೆಗೆ ಮಾಜಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ನಿವಾಸದಲ್ಲಿ ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸಭೆ ನಡೆಸಿದ ನಂತರ ರಾಜ್ಯ ಕಾಂಗ್ರೆಸ್‍ನಲ್ಲಿ ಮೂರನೇ ಬಣವೂ ಹೊರ ಹೊಮ್ಮಿದೆ. ಹಾಗಾಗಿ ಈ ಬಣಗಳ ನಾಯಕರ ಮ£ Éಯಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರ ಗೊಂಡಿವೆ. ಪ್ರತಿನಿತ್ಯ ಅವರ ಬೆಂಬಲಿಗರು ಹಾಗೂ ಪಕ್ಷ ನಾಯಕರು ಭೇಟಿ ನೀಡಿ, ಬೆಂಬಲಿಸುವುದರೊಂದಿಗೆ ಚರ್ಚೆ ಆರಂ ಭಿಸಿದ್ದಾರೆ. ಇಂದು ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ಶಾಸಕ ನಾಗೇಂದ್ರ, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಮಾಜಿ ಎಂಎಲ್‍ಸಿ ಐವಾನ್ ಡಿಸೋಜ, ಶಾಸಕ ಯಶವಂತ ರಾಯಗೌಡ ಪಾಟೀಲ್, ಮಾಜಿ ಶಾಸಕ ಅಪ್ಪಾಜಿ ನಾಡಗೌಡ, ಎಂಎಲ್‍ಸಿ ಶ್ರೀನಿವಾಸ್ ಮಾನೆ, ಮಾಜಿ ಎಂಎಲ್‍ಸಿ ಎಂ.ಡಿ. ಲಕ್ಷ್ಮೀನಾರಾಯಣ ಭೇಟಿ ನೀಡಿ, ನಾಗರಾಜ್ ಮಾತುಕತೆ ನಡೆಸಿದರು. ಪಕ್ಷದಲ್ಲಿನ ಹಾಲಿ ವಿದ್ಯಮಾನಗಳು ಹಾಗೂ ರಾಜಕೀಯ ನಾಯಕರ ಮನೆಯಂಗಳ ದಲ್ಲಿ ನಡೆಯುತ್ತಿರುವ ರಾಜಕೀಯ ಚಟು ವಟಿಕೆಗಳು ತೀವ್ರ ಕುತೂಹಲಕ್ಕೆ ಕಾರಣ ವಾಗಿದೆ. ಈಗಾಗಲೇ ಮಾಜಿ ಕೇಂದ್ರ ಸಚಿವ ಮುನಿಯಪ್ಪ ಹಾಗೂ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಒಟ್ಟಾರೆ ರಾಜ್ಯ ಕಾಂಗ್ರೆಸ್‍ನಲ್ಲಿ ಉಂಟಾಗಿರುವ ಗೊಂದಲ ಯಾವಾಗ ನಿವಾರಣೆಯಾಗುವುದೋ ಎಂಬ ಚಿಂತೆ ಯಲ್ಲಿ ಕಾರ್ಯಕರ್ತರಿದ್ದಾರೆ.

Translate »