ಜಿಎಸ್‍ಟಿ ವ್ಯಾಪ್ತಿಗೆ ತೈಲ ಬೆಲೆ ತರುವುದೂ ಸೇರಿ ವಿವಿಧ ಬೇಡಿಕೆ ಈಡೇರಿಸಿ
ಮೈಸೂರು

ಜಿಎಸ್‍ಟಿ ವ್ಯಾಪ್ತಿಗೆ ತೈಲ ಬೆಲೆ ತರುವುದೂ ಸೇರಿ ವಿವಿಧ ಬೇಡಿಕೆ ಈಡೇರಿಸಿ

June 29, 2021

ಮೈಸೂರು,ಜೂ.28(ಪಿಎಂ)-ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಜಿಎಸ್‍ಟಿ ವ್ಯಾಪ್ತಿಗೆ ತರಬೇಕೆಂಬುದೂ ಸೇರಿ ದಂತೆ ವಿವಿಧ ಬೇಡಿಕೆಗಳನ್ನು ಈಡೇ ರಿಸಲು ಆಗ್ರಹಿಸಿ `ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‍ಪೋರ್ಟ್ ಕಾಂಗ್ರೆಸ್’ನ ಕರೆ ಮೇರೆಗೆ ಲಾರಿ, ಟ್ರಕ್ಕರ್ ಸೇರಿದಂತೆ ಎಲ್ಲಾ ರೀತಿಯ ಸರಕು-ಸಾಗಣೆ ವಾಹನ ಮಾಲೀಕರ ಸಂಘಟನೆಗಳ ವತಿಯಿಂದ ಸೋಮವಾರ ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸುವ ಮೂಲಕ ದೇಶಾ ದ್ಯಂತ ಕರಾಳ ದಿನ ಆಚರಿಸಲಾಯಿತು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ರಾಜ್ಯ ಉಪಾ ಧ್ಯಕ್ಷರೂ ಆದ ಮೈಸೂರು ಡಿಸ್ಟ್ರಿಕ್ಟ್ ಟ್ರಕ್ಕರ್ಸ್ ಅಸೋಸಿಯೇಷನ್‍ನ ಅಧ್ಯಕ್ಷ ಎನ್.ಶ್ರೀನಿ ವಾಸರಾವ್ ಈ ವಿಷಯ ತಿಳಿಸಿದರಲ್ಲದೆ, ತಮ್ಮ ಪದಾಧಿಕಾರಿಗಳೊಂದಿಗೆ ಕಪ್ಪುಪಟ್ಟಿ ಧರಿಸಿ ಸುದ್ದಿಗೋಷ್ಠಿ ನಡೆಸಿ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಿದರು.

ಬೆಂಗಳೂರು ಸೇರಿದಂತೆ ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಲಾಗಿದೆ. ಆದರೆ ಮೈಸೂ ರಿನಲ್ಲಿ ಕೋವಿಡ್ ತೀವ್ರತೆ ಇನ್ನೂ ಕಡಿಮೆ ಯಾಗದ ಕಾರಣ ಯಾವುದೇ ಪ್ರತಿ ಭಟನೆಗೆ ಮುಂದಾಗಲಿಲ್ಲ ಎಂದರು.

ಪೆಟ್ರೋಲ್ ಮತ್ತು ಡೀಸೆಲ್ ದರ ದುಬಾರಿಯಾಗಿದ್ದು, ಇದರಿಂದ ಸಾಮಾನ್ಯ ಜನತೆಯ ದಿನನಿತ್ಯ ಬಳಕೆಯ ಅಗತ್ಯ ವಸ್ತು ಗಳ ಸಾಗಣಿಕೆಗೆ ದೊಡ್ಡ ಹೊಡೆತ ಬಿದ್ದಿದೆ. ಅಲ್ಲದೆ, ತೈಲ ಬೆಲೆ ಏರಿಕೆ ಲಾರಿ ಮಾಲೀ ಕರಿಗೆ ಗಾಯದ ಮೇಲೆ ಬರೆ ಎಳೆದಂತಾ ಗಿದೆ. ಕೋವಿಡ್ ಮೊದಲ ಅಲೆಯಿಂದ ಮೂರ್ನಾಲ್ಕು ತಿಂಗಳು ನಮ್ಮ ವಹಿವಾಟು ಸ್ಥಗಿತಗೊಂಡು ಆರ್ಥಿಕ ಸಂಕಷ್ಟ ಎದುರಿಸ ಬೇಕಾಯಿತು. ಇದೀಗ 2ನೇ ಅಲೆಯಲ್ಲಿ ಲಾಕ್‍ಡೌನ್‍ನಿಂದ ಸಾಕಷ್ಟು ಸಂಕಷ್ಟ ಎದು ರಿಸುವ ಜೊತೆಗೆ ಡೀಸೆಲ್ ಬೆಲೆ ಏರಿಕೆ ಯಿಂದ ದೊಡ್ಡ ಹೊರೆ ನಮ್ಮ ಮೇಲೆ ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಡೀಸೆಲ್ ಬೆಲೆ ಹೆಚ್ಚಾಗುತ್ತಿದ್ದಂತೆ ಲಾರಿ ಬಾಡಿಗೆ ಹೆಚ್ಚು ಕೇಳಿದರೆ ಯಾರೂ ಕೊಡಲು ಮುಂದೆ ಬರುವುದಿಲ್ಲ. ಹೀಗಾಗಿ ತೈಲ ದರ ವನ್ನು ಜಿಎಸ್‍ಟಿ ವ್ಯಾಪ್ತಿಗೆ ತರಬೇಕೆಂ ಬುದು ನಮ್ಮ ಮೊಟ್ಟ ಮೊದಲ ಬೇಡಿಕೆ. ಇದಾದಲ್ಲಿ ಕನಿಷ್ಠ 20 ರೂ.ವರೆಗೆ ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಮೋಟಾರ್ ವಾಹನ ಕಾಯ್ದೆ 1988ರ ಸೆಕ್ಷನ್ 67 (1)ರ ಪ್ರಕಾರ ಸರಕು ಮತ್ತು ಸಾಗಣೆ ವಾಹನಗಳ ಬಾಡಿಗೆ ಶುಲ್ಕವನ್ನು ರಾಜ್ಯ ಸರ್ಕಾರ ನಿಗದಿಗೊಳಿಸಲು ಅವ ಕಾಶವಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

2ನೇ ಅಲೆಯ ಲಾಕ್‍ಡೌನ್‍ನಲ್ಲಿ ಸರಕು ಸಾಗಣೆ ವಾಹನಗಳು ಸಂಚರಿಸಲು ಅವ ಕಾಶ ಇದ್ದರೂ ಶೇ.10ರಷ್ಟು ಮಾತ್ರವೇ ಸಾಗಣೆ ಮಾಡಲು ಸಾಧ್ಯವಾಗಿದೆ. ಅಂಗಡಿ -ಮುಂಗಟ್ಟುಗಳು ಮುಚ್ಚಿದ್ದ ಕಾರಣ ಸರಕು ಸಾಗಣೆ ಸಹಜವಾಗಿ ಇರಲಿಲ್ಲ. ಹೀಗಾಗಿ ಶೇ.90ರಷ್ಟು ವಹಿವಾಟು ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕಿನಿಂದ ಪಡೆದ ವಾಹನ ಸಾಲದ ಇಎಂಐ ಕಂತುಗಳನ್ನು ಪಾವತಿ ಮಾಡಲಾಗದ ಪರಿಸ್ಥಿತಿ ಉದ್ಭವಿ ಸಿದೆ. ಈ ಹಿನ್ನೆಲೆಯಲ್ಲಿ ಕಂತುಗಳ ಪಾವತಿಗೆ 6 ತಿಂಗಳ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ವ್ಯಾಟ್ ಇದ್ದ ಸಂದರ್ಭದಲ್ಲಿ ಸರಕು ಪೂರೈಕೆಗೆ ಕಾಲದ ಮಿತಿ ಇರಲಿಲ್ಲ. ಆದರೆ ಜಿಎಸ್‍ಟಿ ಜಾರಿ ಬಳಿಕ `ಜಿಎಸ್‍ಟಿ ಇ-ವೇ ಬಿಲ್ಲಿಂಗ್’ ವ್ಯವಸ್ಥೆ ಯಡಿ ಕಾಲಮಿತಿ ನಿಗದಿಗೊಳಿಸಲಾಗಿದೆ. ನಿಗದಿತ ಸಮಯದಲ್ಲಿ ವಾಹನ ತಲುಪಿಲ್ಲ ಎಂದರೆ ಇ-ವೇ ಬಿಲ್‍ನ ಕಾಲಮಿತಿ ಮೀರಿದೆ ಎಂದು ದಂಡ ವಿಧಿಸಲಾಗುತ್ತದೆ. ಈ ರೀತಿ ದಂಡ ವಿಧಿಸುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು. ಮೈಸೂರು ಡಿಸ್ಟ್ರಿಕ್ಟ್ ಟ್ರಕ್ಕರ್ಸ್ ಅಸೋಸಿಯೇಷನ್‍ನ ಉಪಾಧ್ಯಕ್ಷ ವಿಶ್ವನಾಥ್, ಜಂಟಿ ಕಾರ್ಯದರ್ಶಿ ರಾಜ ಶೇಖರ್, ಪದಾಧಿಕಾರಿಗಳಾದ ಮಹೇಶ್, ಗುರು ಸುದ್ದಿಗೋಷ್ಠಿಯಲ್ಲಿದ್ದರು.

Translate »