ವಚನಗಳಲ್ಲಿ ಸರ್ವ  ವಿಚಾರ ಅಡಕವಾಗಿದೆ
ಮೈಸೂರು

ವಚನಗಳಲ್ಲಿ ಸರ್ವ ವಿಚಾರ ಅಡಕವಾಗಿದೆ

June 29, 2021

ಮೈಸೂರು, ಜೂ. 28- ಜೆಎಸ್‍ಎಸ್ ಮಹಾವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ವತಿಯಿಂದ ಏರ್ಪಡಿಸಿದ್ದ 278ನೆಯ ‘ಶಿವಾನುಭವ ದಾಸೋಹ’ ಡಿಜಿಟಲ್ ಕಾರ್ಯಕ್ರಮದಲ್ಲಿ ‘ವಚನ ಗಳಲ್ಲಿ ವೈವಿಧ್ಯತೆ’ ವಿಷಯ ಕುರಿತು ಬೆಂಗಳೂರಿನ ಬಿಎಂಎಸ್ ಮಹಿಳಾ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಡಾ. ಶೀಲಾದೇವಿ ಎಸ್.ಮಳೀಮಠ್ ಉಪನ್ಯಾಸ ನೀಡಿದರು.

ಬಸವಾದಿ ಶರಣರ ವಚನಗಳಲ್ಲಿ ವಿಜ್ಞಾನ, ಸಮಾಜ, ಶಿಕ್ಷಣ, ಧರ್ಮ, ರಾಜಕೀಯ ಎಲ್ಲ ವಿಚಾರಗಳನ್ನು ಕಾಣ ಬಹುದಾಗಿದೆ. ಕಾಲಕಾಲಕ್ಕೆ ಸಮಾಜ ಸುಧಾರಣೆಗೆ ಬೇಕಾದ ವಿಚಾರಗಳನ್ನು ವಚನಗಳಲ್ಲಿ ತಿಳಿಯಬಹುದು. ಅನುಭವ ಮಂಟಪದಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿತ್ತು. ಆದುದರಿಂದ ವಿಚಾರಗಳನ್ನು ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲಾಗುತ್ತಿತ್ತು. ವಚನಕಾರರಲ್ಲಿ ದೂರದೃಷ್ಟಿ ಇತ್ತು. ಆದ್ದರಿಂದ ವಚನಗಳಲ್ಲಿ ವೈವಿಧ್ಯತೆಯನ್ನು ಕಾಣುತ್ತೇವೆ. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಜೇಡರ ದಾಸಿಮಯ್ಯ, ಅಕ್ಕನಾಗಮ್ಮ, ಸೂಳೆ ಸಂಕವ್ವೆ, ಹಡಪದ ಅಪ್ಪಣ್ಣ, ಕಾಳವ್ವೆ ಹೀಗೆ ಶರಣ ಶರಣೆಯರ ವಚನಗಳನ್ನು ಉಲ್ಲೇಖಿಸಿ, ಅಲ್ಲಿ ಕಂಡುಬರುವ ಸತ್ಯಶುದ್ಧ, ಕಾಯಕದ ವೈವಿಧ್ಯತೆಗಳನ್ನು ವಿಶ್ಲೇಷಿಸಿದರು. ಗುರುಲಿಂಗಜಂಗಮರ ಮಹತ್ವವÀನ್ನು ವಚನಗಳಲ್ಲಿ ನೋಡುತ್ತೇವೆ. ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಹನ್ನೆರಡನೆಯ ಶತಮಾನದಲ್ಲಿಯೇ ಶರಣರು ಕಂಡುಕೊಂಡಿದ್ದರು. ಇಂದಿನ ಸಂವಿಧಾನದಲ್ಲಿ ಬಸ ವಾದಿ ಶರಣರ ಆಶಯಗಳನ್ನು ಕಾಣುತ್ತೇವೆ. ಮೂಢನಂಬಿಕೆ, ಅಜ್ಞಾನ, ಅಂಧಕಾರ ವನ್ನು ಹೋಗಲಾಡಿಸಲು ಒಂಬೈನೂರು ವರುಷಗಳ ಹಿಂದೆಯೇ ಶ್ರಮಿಸಿದವರು ವಚನಕಾರರು, ನುಡಿದಂತೆ ನಡೆದು ವಚನಗಳನ್ನು ರಚಿಸಿದ ಶರಣರ ವಚನಗಳಲ್ಲಿ ಬಹುಮುಖಿ ವೈವಿಧ್ಯತೆಗಳನ್ನು ಕಾಣಬಹುದಾಗಿದೆ ಎಂದರು.

Translate »