ವ್ಯಾಪಾರ ವಹಿವಾಟು ನಡೆಸಲು ತಮಗೂ ಅವಕಾಶ  ನೀಡುವಂತೆ ಕೆ.ಟಿ.ಸ್ಟ್ರೀಟ್ ವರ್ತಕರ ಆಗ್ರಹ
ಮೈಸೂರು

ವ್ಯಾಪಾರ ವಹಿವಾಟು ನಡೆಸಲು ತಮಗೂ ಅವಕಾಶ ನೀಡುವಂತೆ ಕೆ.ಟಿ.ಸ್ಟ್ರೀಟ್ ವರ್ತಕರ ಆಗ್ರಹ

June 29, 2021

ಮೈಸೂರು, ಜೂ. 28(ಆರ್‍ಕೆ)- ತಮಗೂ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡುವಂತೆ ಮೈಸೂರಿನ ಕೆ.ಟಿ.ಸ್ಟ್ರೀಟ್ ವರ್ತಕರು ಆಗ್ರಹಪಡಿಸಿದ್ದಾರೆ.

ಹೋಟೆಲ್ ದಾಸ್‍ಪ್ರಕಾಶ್ ವೃತ್ತದಲ್ಲಿ ಸೋಮವಾರ ಬೆಳಗ್ಗೆ ಏಕಾಏಕಿ ಜಮಾಯಿಸಿದ ಕೆ.ಟಿ. ಸ್ಟ್ರೀಟ್ ಓಲ್ಡ್ ಬ್ಯಾಂಕ್ ರಸ್ತೆ, ಗಾಂಧಿ ಸ್ಕ್ವೇರ್ ಸುತ್ತಮುತ್ತಲಿನ ಬಟ್ಟೆ ಅಂಗಡಿ, ಎಲೆಕ್ಟ್ರಾನಿಕ್ಸ್ ಗೃಹೋ ಪಯೋಗಿ ವಸ್ತು, ಮೊಬೈಲ್ ಶಾಪ್ ಸೇರಿದಂತೆ ಇನ್ನಿತರ ಅಂಗಡಿ ಗಳ ಮಾಲೀಕರು, ಲಾಕ್‍ಡೌನ್ ನಿರ್ಬಂಧ ವಿಧಿಸಿರುವುದರಿಂದ ತಮಗೆ ವ್ಯಾಪಾರವಿಲ್ಲದೆ ತೊಂದರೆಯಾಗಿದೆ ಎಂದು ತಿಳಿಸಿದರು.

ದಿನಸಿ, ಹಾಲು, ತರಕಾರಿ, ಕಟ್ಟಡ ಸಾಮಗ್ರಿಗಳು, ಮದ್ಯ ಮಾರಾಟ ಮಳಿಗೆಗಳು ಸೇರಿದಂತೆ ಬಹುತೇಕ ಎಲ್ಲಾ ಅಂಗಡಿಗಳನ್ನು ತೆರೆ ಯಲು ಅವಕಾಶ ನೀಡಲಾಗಿದೆ. ನಮಗೆ ಮಾತ್ರ ನಿರ್ಬಂಧ ವಿಧಿ ಸುವ ಮೂಲಕ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸು ತ್ತಿದ್ದರು. ನಮಗೂ ಅಂಗಡಿ ತೆರೆಯಲು ಅವಕಾಶ ನೀಡಬೇಕು, ನಾವೂ ಸಹ ಮಧ್ಯಾಹ್ನ 2 ಗಂಟೆವರೆಗೆ ವ್ಯಾಪಾರ ಮಾಡುತ್ತೇವೆ ಎಂದು ಹೇಳುತ್ತಿದ್ದ ಅವರು ಗುಂಪು ಕಟ್ಟಿಕೊಂಡು ಪ್ರತಿಭಟನೆಗೆ ಮುಂದಾಗುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಲಷ್ಕರ್ ಠಾಣೆ ಇನ್ ಸ್ಪೆಕ್ಟರ್ ಸುರೇಶ್‍ಕುಮಾರ್, ದೇವರಾಜ ಠಾಣೆಯ ದಿವಾಕರ್, ದೇವರಾಜ ಸಂಚಾರ ಠಾಣೆ ಇನ್‍ಸ್ಪೆಕ್ಟರ್ ಮುನಿಯಪ್ಪ, ಲಾಕ್‍ಡೌನ್ ನಿರ್ಬಂಧ ವಿಧಿಸಿರುವುದು ಸರ್ಕಾರ. ಅದನ್ನು ಜಾರಿಗೆ ತರುವು ದಷ್ಟೇ ನಮ್ಮ ಜವಾಬ್ದಾರಿಯಾಗಿದ್ದು, ಈ ವಿಷಯದಲ್ಲಿ ತಾವು ಏನೇ ಬೇಡಿಕೆ ಇದ್ದರೂ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ತಿಳಿಸಿದರು. ಲಾಕ್‍ಡೌನ್ ವೇಳೆ ಕೋವಿಡ್-19 ಮಾರ್ಗಸೂಚಿ ಉಲ್ಲಂಘಿಸಿ ಪ್ರತಿಭಟನೆ ಮಾಡು ವುದು ಸರಿಯಲ್ಲ ಎಂದು ತಿಳುವಳಿಕೆ ಹೇಳಿದ ಪೊಲೀಸ್ ಅಧಿಕಾರಿ ಗಳು, ಅಂಗಡಿ ಮಾಲೀಕರನ್ನು ಸ್ಥಳದಿಂದ ಚದುರಿಸಿದರು.

Translate »