ಮೈಸೂರಲ್ಲಿ ರಸ್ತೆಗಿಳಿದ ಸಾರಿಗೆ ಬಸ್‍ಗಳು
ಮೈಸೂರು

ಮೈಸೂರಲ್ಲಿ ರಸ್ತೆಗಿಳಿದ ಸಾರಿಗೆ ಬಸ್‍ಗಳು

June 29, 2021

ಮೈಸೂರು,ಜೂ.28(ಎಂಟಿವೈ)- ಕೊರೊನಾ 2ನೇ ಅಲೆ ಪ್ರಖರತೆಯಿಂದಾಗಿ ಸಂಚಾರ ಸ್ಥಗಿತಗೊಳಿಸಿದ್ದ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳು ಮೈಸೂರಲ್ಲಿ 2 ತಿಂಗಳ ಬಳಿಕ ಇಂದು ರಸ್ತೆಗಿಳಿದವು. ಮೈಸೂರು ನಗರ ಹಾಗೂ ಗ್ರಾಮಾಂತರ ವಿಭಾಗದ ಬಸ್‍ಗಳು ಪ್ರಯಾಣಿಕರ ಸಂಖ್ಯೆಗೆ ಅನು ಗುಣವಾಗಿ ವಿವಿಧೆಡೆ ಪ್ರಯಾಣ ಬೆಳೆಸಿದವು.

ಎರಡನೇ ಅಲೆಯಲ್ಲಿ ಸಾವು-ನೋವಿನ ಪ್ರಕರಣ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಏ.28 ರಂದು ಬಸ್‍ಗಳ ಸಂಚಾರ ಸ್ಥಗಿತಗೊಳಿಸ ಲಾಗಿತ್ತು. ಎರಡು ತಿಂಗಳಿಂದ ಡಿಪೋ ದಲ್ಲಿಯೇ ಬೀಡು ಬಿಟ್ಟಿದ್ದ ಬಸ್‍ಗಳು ಇಂದಿನಿಂದ ರಸ್ತೆಗಿಳಿದವು.

ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಈಗ ಇಳಿಮುಖ ವಾಗುತ್ತಿರುವುದರಿಂದ ರಾಜ್ಯ ಸರ್ಕಾರ ಮೈಸೂರು ಜಿಲ್ಲೆಯನ್ನು ಕ್ಯಾಟಗರಿ-3ರಿಂದ ಕ್ಯಾಟಗರಿ-2ಕ್ಕೆ ಸೇರಿಸಿ ಕೆಲವು ಚಟುವಟಿಕೆಗೆ ವಿನಾಯಿತಿ ನೀಡಿರುವ ಹಿನ್ನೆಲೆ ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಸಾರಿಗೆ ಸಂಸ್ಥೆಯ ಮೈಸೂರು ನಗರ ಹಾಗೂ ಗ್ರಾಮಾಂತರ ವಿಭಾಗಗಳ ಬಸ್‍ಗಳು ಪ್ರಯಾ ಣಿಕರ ಸೇವೆ ಆರಂಭಿಸಿದವು. ಎಲ್ಲಾ ಬಸ್ ಗಳನ್ನು ಸ್ಯಾನಿಟೈಸ್ ಮಾಡಿ, ಸ್ವಚ್ಛಗೊಳಿ ಸಲಾಗಿದೆ. ಅಲ್ಲದೆ ನಗರ ಹಾಗೂ ಗ್ರಾಮಾಂ ತರ ಬಸ್ ನಿಲ್ದಾಣವನ್ನು ಸ್ಯಾನಿಟೈಸ್ ಮಾಡಲಾಗಿತ್ತು. ಇಂದು ಮುಂಜಾನೆ ಯಿಂದಲೇ ಎರಡೂ ವಿಭಾಗಗಳ ಬಸ್ ಗಳು ಬಸ್ ನಿಲ್ದಾಣಕ್ಕೆ ಆಗಮಿಸಿದ್ದವು.

ನಗರ ವ್ಯಾಪ್ತಿಯಲ್ಲಿ ನೀರಸ: ಮೈಸೂರು ನಗರದ ವಿವಿಧ ಬಡಾವಣೆಗಳಿಗೆ ನಗರ ಸಾರಿಗೆ ವಿಭಾಗದ ವತಿಯಿಂದ 100ಕ್ಕೂ ಹೆಚ್ಚು ಬಸ್‍ಗಳ ಸೇವೆ ಆರಂಭವಾಗಿದೆ. ಮುಂಜಾನೆ 5.30ರಿಂದಲೇ ನಗರ ಸಾರಿಗೆ ಬಸ್‍ಗಳು ನಗರ ಬಸ್ ನಿಲ್ದಾಣಕ್ಕೆ ಬಂದ ವಾದರೂ ಪ್ರಯಾಣಿಕರು ಮಾತ್ರ ಬಸ್ ನಿಲ್ದಾಣದತ್ತ ಸುಳಿಯಲಿಲ್ಲ. ವಿವಿಧ ಮಾರ್ಗ ದಲ್ಲಿ ಬೆರಳೆಣಿಕೆಯಷ್ಟು ಮಂದಿ ಆಗಮಿ ಸಿದ್ದರು. ಆದರೂ ಕೆಲವು ಮಾರ್ಗದಲ್ಲಿ 10-15 ಮಂದಿ ಪ್ರಯಾಣಿಕರಿಗೂ ಬಸ್ ಸೇವೆ ಒದಗಿಸಲಾಯಿತು. ಮೈಸೂರು ತಾಲೂಕಿನ ವಿವಿಧ ಗ್ರಾಮಗಳಿಗೆ ಬಸ್ ಸೇವೆ ಇನ್ನು ಪುನರಾರಂಭಿಸದೆ ಇದ್ದರೂ, ನಾಲ್ಕು ದಿಕ್ಕುಗಳ ಮುಖ್ಯ ರಸ್ತೆಯಲ್ಲಿ ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಆದರೂ ಬೆಳಗ್ಗಿನಿಂದ ಸಂಜೆವರೆಗೂ ಪ್ರಯಾಣಿಕರ ಸಂಖ್ಯೆ ಸೀಮಿತವಾಗಿತ್ತು ನಗರದ ವಿಭಾಗದಲ್ಲಿ ಕುವೆಂಪುನಗರ, ಬನ್ನಿಮಂಟಪ, ಸಾತಗಳ್ಳಿ ಹಾಗೂ ವಿಜಯ ನಗರ ಬಸ್ ಡಿಪೋಗಳಿಂದ ಒಟ್ಟು 432 ಬಸ್‍ಗಳಿದ್ದು, ಪ್ರತಿದಿನ 375 ಮಾರ್ಗ ಗಳಲ್ಲಿ 6 ಸಾವಿರ ಟ್ರಿಪ್‍ನಲ್ಲಿ ಸಂಚರಿಸು ತ್ತಿದ್ದವು. ಆದರೆ ಇಂದು ಕೇವಲ 100 ಬಸ್ ಗಳನ್ನಷ್ಟೇ ಬಿಡಲಾಗಿತ್ತು. ಎರಡು ಡೋಸ್ ಲಸಿಕೆ ಪಡೆದಿರುವ 45 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ಆದ್ಯತೆ. ಆ ನಂತರ ಮೊದಲ ಡೋಸ್ ಪಡೆದಿರುವ 18 ವರ್ಷ ಮೇಲ್ಪಟ್ಟ ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ.

ಬೆಂಗಳೂರಿಗೆ ಬೇಡಿಕೆ: ಮೈಸೂರಿನ ಗ್ರಾಮಾಂತರ ವಿಭಾಗದಲ್ಲಿ 650 ಬಸ್ ಗಳಿದ್ದು, ವಿವಿಧ ಜಿಲ್ಲೆ, ಹೊರ ರಾಜ್ಯಗಳಿಗೆ 600 ಮಾರ್ಗಗಳಲ್ಲಿ 2500 ಟ್ರಿಪ್ ಸಂಚ ರಿಸುತ್ತಿದ್ದವು. ಅನ್‍ಲಾಕ್ ನಿಯಮ ಜಾರಿ ಗೊಂಡಿರುವುದರಿಂದ ಶೇ.50ರಷ್ಟು ಪ್ರಯಾ ಣಿಕರಿಗೆ ಮಾತ್ರ ಅವಕಾಶ ನೀಡಿ, ಇಂದು ಶೇ.30ರಷ್ಟು ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಮೈಸೂರಿನ ಗ್ರಾಮಾಂ ತರ ಬಸ್ ನಿಲ್ದಾಣದಿಂದ ಬೆಂಗಳೂರು, ಚಾಮರಾಜನಗರ, ಮಂಡ್ಯ, ಶಿವಮೊಗ್ಗ, ಹಾಸನ, ತುಮಕೂರು ಸೇರಿದಂತೆ ವಿವಿ ಧೆಡೆಗೆ ಬಸ್ ಸಂಚರಿಸಿದವು. ಅದರಲ್ಲೂ ಬೆಂಗಳೂರಿಗೆ ತೆರಳಲು ಹೆಚ್ಚಿನ ಪ್ರಯಾ ಣಿಕರು ಆಗಮಿಸಿದ್ದರೂ, ಬೇರೆ ಜಿಲ್ಲೆ, ನಗರ ಗಳಿಗೆ ಪ್ರಯಾಣಿಕರ ಸಂಖ್ಯೆ ವಿರಳ ವಾಗಿತ್ತು. ಬೆಂಗಳೂರಿಗೆ ಸುವರ್ಣ ಸಾರಿಗೆ, ರಾಜಹಂಸ, ಐರಾವತ ಬಸ್‍ಗಳು ಶೇ.50ರಷ್ಟು ಪ್ರಯಾಣಿಕರನ್ನು ಹೊತ್ತು ಪ್ರಯಾಣ ಬೆಳೆಸಿದವು.

ಮಾಸ್ಕ್ ಧರಿಸಿದವರಿಗೆ ಮಾತ್ರ ಅವ ಕಾಶ: ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅನಗತ್ಯ ವಾಗಿ ಗುಂಪುಗೂಡಬಾರದು. ನಿಯಮ ಪಾಲಿಸದವರಿಗೆ ಪ್ರಯಾಣಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಧ್ವನಿವರ್ಧ ಕದ ಮೂಲಕ ಪ್ರಕಟಿಸಲಾಗುತ್ತಿತ್ತು. ಅಲ್ಲದೆ ಮಾಸ್ಕ್ ಧರಿಸದ ಪ್ರಯಾಣಿಕರನ್ನು ಬಸ್ ಹತ್ತಲು ಬಿಡುತ್ತಿರಲಿಲ್ಲ.

Translate »