ಬೆಂಗಳೂರು,ಮಾ.16-ಕೋವಿಡ್-19 ಸೋಂಕು ನಿಯಂತ್ರಣ ಉದ್ದೇಶದಿಂದ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದರೆ ಕಠಿಣ ಕ್ರಮ ಅನಿವಾರ್ಯ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ನಾಗರಿಕರಿಗೆ ಸ್ಪಷ್ಟವಾದ ಸಂದೇಶ ಕೊಟ್ಟಿದ್ದಾರೆ. ರಾಜ್ಯದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಾಗುತ್ತಿದೆ. ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಕೇರಳದಲ್ಲಿ ಕೂಡ ಏರಿಕೆಯಾಗುತ್ತಿದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಇಲ್ಲದಿದ್ದರೆ ಕಠಿಣ ಕ್ರಮಕ್ಕೆ ಮುಂದಾಗ ಬೇಕಾಗುತ್ತದೆ ಎಂದು ನೀಡಿರುವ ಎಚ್ಚರಿಕೆ ಸಮಂಜಸ ವಾಗಿದೆ…
ಕೊರೊನಾ ಸೋಂಕು ಹೆಚ್ಚಳ: ಪುಣೆಗೆ ಅಗ್ರಸ್ಥಾನ, ಬೆಂಗಳೂರಿಗೆ 5ನೇ ಸ್ಥಾನ!
March 16, 2021ನವದೆಹಲಿ,ಮಾ.15-ದೇಶದಲ್ಲಿ ಮಾರಕ ಕೊರೊನಾ ವೈರಸ್ ಆರ್ಭಟ ಮತ್ತೆ ಜೋರಾಗುತ್ತಿದ್ದು, ಆತೀ ಹೆಚ್ಚು ಸೋಂಕಿತರನ್ನು ಹೊಂದಿರುವ ಜಿಲ್ಲೆ ಗಳ ಪಟ್ಟಿಯಲ್ಲಿ ರಾಜಧಾನಿ ಬೆಂಗಳೂರು 5ನೇ ಸ್ಥಾನದಲ್ಲಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ‘ಮಹಾ ರಾಷ್ಟ್ರ, ಕೇರಳ, ಪಂಜಾಬ್, ಕರ್ನಾಟಕ, ಗುಜ ರಾತ್, ತಮಿಳುನಾಡು ಮತ್ತು ಮಧ್ಯಪ್ರದೇಶ ದಂತಹ ರಾಜ್ಯಗಳಲ್ಲಿ ದಾಖಲೆಯ ಪ್ರಮಾಣ ದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಿವೆ. ಈ ನಡುವೆ, ದೇಶದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರಿ ರುವ ಜಿಲ್ಲೆಗಳಲ್ಲಿ ಬೆಂಗಳೂರು ನಗರ…
ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಉದ್ಯಮಿ ಸಾವು
March 16, 2021ಮಡಿಕೇರಿ, ಮಾ.15- ನಿರ್ಮಾಣ ಹಂತದ ಮನೆಯ ಕಟ್ಟಡದಿಂದ ಆಯತಪ್ಪಿ ಬಿದ್ದು ಉದ್ಯಮಿಯೊಬ್ಬರು ಮೃತಪಟ್ಟಿರುವ ಘಟನೆ ಮಡಿಕೇರಿ ಗೌಳಿಬೀದಿಯಲ್ಲಿ ನಡೆದಿದೆ. ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದ ಬಳಿ ಇರುವ ಶೆಟ್ಟಿ ಸ್ವೀಟ್ಸ್ ಅಂಡ್ ಬೇಕರಿ ಮಾಲೀಕ ಕೃಷ್ಣಶೆಟ್ಟಿ(62) ಮೃತಪಟ್ಟ ವರು. ಮೃತರಿಗೆ ಪತ್ನಿ, ಪುತ್ರ-ಪುತ್ರಿ ಇದ್ದಾರೆ. ಕೃಷ್ಣಶೆಟ್ಟಿ ಅವರು ಗೌಳಿಬೀದಿಯಲ್ಲಿ ಹೊಸ ಮನೆ ಕಟ್ಟಿಸುತ್ತಿದ್ದು, ಎಂದಿನಂತೆ ಸೋಮ ವಾರ ಮಧ್ಯಾಹ್ನ ಮನೆ ಕಾಮಗಾರಿ ವೀಕ್ಷಿಸಲು ತೆರಳಿದ್ದರು. ಈ ಸಂದರ್ಭ ಮನೆಯ ಮೇಲಿನಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ. ವಿಷಯ ತಿಳಿದು…
ವಿದ್ಯುತ್ ಸ್ಪರ್ಶ: ಕಾರ್ಮಿಕ ಸಾವು
March 16, 2021ವಿರಾಜಪೇಟೆ, ಮಾ.15-ಕಾಫಿ ತೋಟದಲ್ಲಿ ಕಾಳು ಮೆಣಸು ಕುಯ್ಯುವ ವೇಳೆ ಅಲ್ಯುಮಿನಿಯಂ ಏಣಿಗೆ ವಿದ್ಯುತ್ ಸ್ಪರ್ಶಿಸಿ ಕೂಲಿ ಕಾರ್ಮಿಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ವಿರಾಜಪೇಟೆ ಬಳಿಯ ಆರ್ಜಿ ಗ್ರಾಮದಲ್ಲಿ ನಡೆದಿದೆ. ಸಬಾಸ್ಟೀನ್ ಲೊಬೋ(62) ಮೃತಪಟ್ಟ ಕೂಲಿ ಕಾರ್ಮಿಕ. ಇವರು ಕುಟುಂಬ ಸಮೇತ ಹಲವು ವರ್ಷದಿಂದ ಸಮೀಪದ ಆರ್ಜಿ ಗ್ರಾಪಂ ವ್ಯಾಪ್ತಿಯ ಸಂತ ಅನ್ನಮ್ಮ ದೇವಾಲಯಕ್ಕೆ ಸೇರಿದ ಕಾಫಿ ತೋಟದ ಲೈನ್‍ಮನೆಯಲ್ಲಿ ವಾಸವಿದ್ದರು. ಸೋಮವಾರ ಬೆಳಗ್ಗೆ ಕಾಳು ಮೆಣಸು ಕುಯ್ಯುಲು ತೋಟಕ್ಕೆ ಹೋಗಿದ್ದ ಅವರು, ಮರದಿಂದ ಮರಕ್ಕೆ ಏಣಿ ಇಡುವ…
ಕೋವಿಡ್ ಸೋಂಕು ಹೆಚ್ಚಳ ಅಧಿಕಾರಿಗಳು, ಆರೋಗ್ಯ ತಜ್ಞರೊಂದಿಗೆ ಇಂದು ಸಿಎಂ ಸಭೆ
March 15, 2021ಬೆಂಗಳೂರು,ಮಾ.14-ಇತ್ತೀಚೆಗೆ ರಾಜ್ಯದಲ್ಲಿ ಮತ್ತೆ ಕೊರೊನಾ ಪ್ರಕರಣ ಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಅಧಿಕಾರಿಗಳು ಮತ್ತು ಆರೋಗ್ಯ ತಜ್ಞರ ಸಭೆ ಕರೆದಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ. ಸಂಜೆ 5 ಗಂಟೆಗೆ ರಾಜ್ಯ ವಿಧಾನಸಭೆ ಮತ್ತು ಕಾರ್ಯದರ್ಶಿಗಳ ಸ್ಥಾನವಾಗಿರುವ ವಿಧಾನಸೌಧದಲ್ಲಿ ಸಭೆ ನಡೆಯಲಿದೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕ ಟಣೆಯಲ್ಲಿ ತಿಳಿಸಿದೆ. ಜನವರಿ 22ರ ನಂತರ ಮೊದಲ ಬಾರಿಗೆ ರಾಜ್ಯದಲ್ಲಿ ಒಂದೇ ದಿನ 900ಕ್ಕಿಂತ ಹೆಚ್ಚಿನ ಕೋವಿಡ್ ಪ್ರಕರಣಗಳು ದಾಖಲಾಗಿವೆ. ನಿನ್ನೆ ರಾಜ್ಯದಲ್ಲಿ ಒಟ್ಟೂ…
ಕಾಂಗ್ರೆಸ್, ಬಿಜೆಪಿ ನಾಯಕರ ಕೈವಾಡ: ಶಾಸಕ ಯತ್ನಾಳ್ ಹೊಸ ಬಾಂಬ್
March 15, 2021ವಿಜಯಪುರ, ಮಾ.14-ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ವಿರುದ್ಧ ವ್ಯವಸ್ಥಿತ ಷಡ್ಯಂತರ ನಡೆಯುತ್ತಿದೆ. ಸಿಡಿ ಪ್ರಕರಣದ ಹಿಂದೆ ಬಿಜೆಪಿಯ ಓರ್ವ ಉನ್ನತ ನಾಯಕ ಮತ್ತು ಕಾಂಗ್ರೆಸ್‍ನ ಓರ್ವ ಉನ್ನತ ನಾಯಕನ ಕೈವಾಡವಿದೆ. ಇವರಿಬ್ಬರೂ ಸೇರಿಕೊಂಡು ರಮೇಶ್ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ರೂಪಿಸಿ ದ್ದಾರೆ ಎಂದು…
ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಂದ ಯುವತಿಗೆ ನೋಟಿಸ್
March 15, 2021ಬೆಂಗಳೂರು, ಮಾ.14-ಸಾಮಾಜಿಕ ಕಾರ್ಯ ಕರ್ತ ದಿನೇಶ್ ಕಲ್ಲಹಳ್ಳಿ ನೀಡಿದ್ದ ದೂರು ಆಧರಿಸಿ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಯಲ್ಲಿದ್ದಳೆನ್ನಲಾದ ಯುವತಿಗೆ ನೋಟಿಸ್ ಜಾರಿ ಮಾಡಿದ್ದರೆ, ಎಸ್‍ಐಟಿ ತಂಡ ರಮೇಶ್ ಜಾರಕಿಹೊಳಿ ನೀಡಿದ್ದ ದೂರನ್ನು ಆಧರಿಸಿ ನಾಲ್ವರಿಗೆ ನೋಟಿಸ್ ಜಾರಿ ಮಾಡಿದೆ. ಸಿಡಿಯಲ್ಲಿದ್ದ ಯುವತಿ ಶನಿವಾರ ವೀಡಿಯೋ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ಆರೋಪ ಮಾಡಿ, ತನ್ನ ಹಾಗೂ ತನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಗೃಹ ಸಚಿವ ರನ್ನು ಕೋರಿದ್ದರು. ಇದರ…
ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ
March 10, 2021ಡೆಹ್ರಾಡೂನ್,ಮಾ.9-ಉತ್ತರಾಖಂಡ್‍ನ ಆಡಳಿತರೂಢ ಪಕ್ಷ ಬಿಜೆಪಿ ನಾಯಕತ್ವ ದಲ್ಲಿ ಮಹತ್ವದ ಬದಲಾವಣೆಗೆ ದಾರಿ ಮಾಡಿಕೊಡುವುದಕ್ಕಾಗಿ ಹಾಲಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ನೀಡಿದ್ದಾರೆ. ಮಾ.7ರಂದು ಗೈರ್ಸೇನ್‍ನಲ್ಲಿ ಬಜೆಟ್ ಅಧಿವೇಶನದ ಸಮಯದಲ್ಲಿ ಬಿಜೆಪಿ ದಿಢೀರ್ ಕೋರ್ ಕಮಿಟಿ ಸಭೆ ನಡೆಸಿದ್ದು ಸರ್ಕಾರದಲ್ಲಿ ಮಹತ್ವದ ಬದಲಾವಣೆಯ ಸುಳಿವು ನೀಡಿತ್ತು. ಈ ಬೆನ್ನಲ್ಲೇ ತ್ರಿವೇಂದ್ರ ಸಿಂಗ್ ರಾವತ್ ಮಾ.9 ರಂದು ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ. ಉತ್ತರಾಖಂಡ್‍ನಲ್ಲಿ ಬಿಜೆಪಿ ಸರ್ಕಾರ ಅಧಿಕಾರಾವಧಿ ಪೂರ್ಣ ಗೊಳಿಸುವುದಕ್ಕೆ ಇನ್ನೂ 1 ವರ್ಷ ಬಾಕಿ…
ನಕಲಿ ಸಿಡಿ ಹಿಂದೆ ದೊಡ್ಡ ದೊಡ್ಡ ಕೈಗಳೇ ಇವೆ, ಸೂಕ್ತ ತನಿಖೆ ನಡೆಯಬೇಕು: ವಿಜಯೇಂದ್ರ ಸೇರಿ ಹಲವು ಮುಖಂಡರ ಒತ್ತಾಯ
March 10, 2021ಬೆಂಗಳೂರು, ಮಾ.9- ರಮೇಶ್ ಜಾರಕಿಹೊಳಿ ವಿರುದ್ಧ ಹನಿಟ್ರ್ಯಾಪ್ ಮೂಲಕ ನಕಲಿ ಸಿಡಿ ಕಾರ್ಯಾ ಚರಣೆ ನಡೆಸಿದ್ದವರು ಸಾಮಾನ್ಯರೂ ಅಲ್ಲ ಸಣ್ಣವರೂ ಅಲ್ಲ. ಈ ಷಡ್ಯಂತ್ರದ ಹಿಂದೆ ದೊಡ್ಡದೊಡ್ಡ ಕೈಗಳೇ ಇರು ವುದು ಮೇಲ್ನೋಟಕ್ಕೆ ತಿಳಿಯುತ್ತದೆ ಎಂದು ಬಿಜೆಪಿ ಉಪಾಧ್ಯಕ್ಷ ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಈ ಪ್ರಕರಣ ಕುರಿತು ಜಾರಕಿಹೊಳಿ ಸಹೋದರರು ಮತ್ತೊಮ್ಮೆ ಸಿಎಂ ಭೇಟಿ ಮಾಡಿ ಚರ್ಚೆ ಮಾಡುತ್ತಾರೆ. ನಕಲಿ ಸಿಡಿ ಪ್ರಕರಣ ಬಗ್ಗೆ ರಮೇಶ್ ಜಾರಕಿಹೊಳಿ ಸಹೋದರರ ಅಪೇಕ್ಷೆ…
ಮೇಲ್ಮನೆಯಲ್ಲಿ ಸಿಡಿ ಸದ್ದು: ಚರ್ಚೆಗೆ ಅವಕಾಶ ನೀಡದ ಬಸವರಾಜ ಹೊರಟ್ಟಿ
March 10, 2021ಬೆಂಗಳೂರು,ಮಾ.9-ಹನಿಟ್ರ್ಯಾಪ್ ಸಿಡಿ ಪ್ರಕರಣ ಮೇಲ್ಮನೆಯಲ್ಲಿ ಸದ್ದು ಮಾಡಿದ್ದು, ವಿಧಾನಪರಿ ಷತ್ತಿನಲ್ಲಿ ಮಾನಹಾನಿ ಮಾಡದಂತೆ ಕೋರ್ಟ್ ಮೊರೆ ಹೋಗಿರುವ ಸಚಿವರ ವಿರುದ್ಧ ಚರ್ಚೆಗೆ ಅವಕಾಶ ನೀಡಲು ಸಭಾಪತಿ ಬಸವರಾಜ ಹೊರಟ್ಟಿ ನಿರಾಕರಿಸಿದ್ದಾರೆ. ಇದರಿಂದ ಸದನದಲ್ಲಿ ಕೆಲಕಾಲ ಕೋಲಾಹಲ ಗದ್ದಲಕ್ಕೆ ಕಾರಣವಾಯಿತು. ಸದನ ಸಮಾವೇಶಗೊಂಡಾಗ ಕಾಂಗ್ರೆಸ್ ಸದಸ್ಯ ಪ್ರಸನ್ನ ಕುಮಾರ್ ಪ್ರಶ್ನೋತ್ತರ ಅವಧಿಯಲ್ಲಿ ತಾವು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‍ಗೆ ಪ್ರಶ್ನೆ ಕೇಳುವುದಿಲ್ಲ. ಆರು ಸಚಿವರು ಸಿಡಿ ವಿಚಾರವಾಗಿ ನ್ಯಾಯಾಲಯ ಮೊರೆ ಹೋಗಿದ್ದಾರೆ. ಇಂತಹ ಸಚಿವರಿಗೆ ನಾನು ಪ್ರಶ್ನೆ ಕೇಳುವುದಿಲ್ಲ…