ಕೊರೊನಾ ಸೋಂಕು ಹೆಚ್ಚಳ: ಪುಣೆಗೆ ಅಗ್ರಸ್ಥಾನ, ಬೆಂಗಳೂರಿಗೆ 5ನೇ ಸ್ಥಾನ!
News

ಕೊರೊನಾ ಸೋಂಕು ಹೆಚ್ಚಳ: ಪುಣೆಗೆ ಅಗ್ರಸ್ಥಾನ, ಬೆಂಗಳೂರಿಗೆ 5ನೇ ಸ್ಥಾನ!

March 16, 2021

ನವದೆಹಲಿ,ಮಾ.15-ದೇಶದಲ್ಲಿ ಮಾರಕ ಕೊರೊನಾ ವೈರಸ್ ಆರ್ಭಟ ಮತ್ತೆ ಜೋರಾಗುತ್ತಿದ್ದು, ಆತೀ ಹೆಚ್ಚು ಸೋಂಕಿತರನ್ನು ಹೊಂದಿರುವ ಜಿಲ್ಲೆ ಗಳ ಪಟ್ಟಿಯಲ್ಲಿ ರಾಜಧಾನಿ ಬೆಂಗಳೂರು 5ನೇ ಸ್ಥಾನದಲ್ಲಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ‘ಮಹಾ ರಾಷ್ಟ್ರ, ಕೇರಳ, ಪಂಜಾಬ್, ಕರ್ನಾಟಕ, ಗುಜ ರಾತ್, ತಮಿಳುನಾಡು ಮತ್ತು ಮಧ್ಯಪ್ರದೇಶ ದಂತಹ ರಾಜ್ಯಗಳಲ್ಲಿ ದಾಖಲೆಯ ಪ್ರಮಾಣ ದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಿವೆ. ಈ ನಡುವೆ, ದೇಶದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರಿ ರುವ ಜಿಲ್ಲೆಗಳಲ್ಲಿ ಬೆಂಗಳೂರು ನಗರ ಜಿಲ್ಲೆಗೆ 5ನೇ ಸ್ಥಾನದ ಪಟ್ಟ ದೊರಕಿದೆ.!

ಒಂದು ದಿನದಲ್ಲಿ ವರದಿಯಾದ ಪ್ರಕರಣಗಳು ಶೇ 87.73ರಷ್ಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ ಮತ್ತೆ ಕೊರೊನಾ ಆರ್ಭಟ ಮುಂದುವರೆದಿದ್ದು, ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 6,107 ಸಕ್ರಿಯ ಪ್ರಕರಣಗಳಿವೆ. 18,474 ಸಕ್ರಿಯ ಸೋಂಕಿತರಿರುವ ಪುಣೆ ಮೊದಲ ಸ್ಥಾನದಲ್ಲಿದೆ. ನಾಗಪುರ 12,724 ಸಕ್ರಿಯ ಪ್ರಕರಣಗಳೊಂದಿಗೆ 2ನೇ ಸ್ಥಾನದಲ್ಲಿದೆ. ಥಾಣೆಯಲ್ಲಿ 10,460 ಸಕ್ರಿಯ ಸೋಂಕಿತರಿದ್ದು 3ನೇ ಸ್ಥಾನದಲ್ಲಿದ್ದರೆ, ಮುಂಬೈ 9,973 ಸಕ್ರಿಯ ಪ್ರಕರಣಗಳ ಮೂಲಕ 4ನೇ ಸ್ಥಾನದಲ್ಲಿದೆ ಎಂದು ಸಚಿವಾಲಯದ ಹೊಸ ಮಾಹಿತಿ ಹೇಳಿದೆ.

Translate »