ಸೋಮವಾರ ಮೈಸೂರಲ್ಲಿ 46 ಮಂದಿಗೆ ಸೋಂಕು
ಮೈಸೂರು

ಸೋಮವಾರ ಮೈಸೂರಲ್ಲಿ 46 ಮಂದಿಗೆ ಸೋಂಕು

March 16, 2021

ಮೈಸೂರು,ಮಾ.15(ಎಸ್‍ಪಿಎನ್)- ಮೈಸೂರು ಜಿಲ್ಲೆಯಲ್ಲಿ ಸೋಮವಾರ 46 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 44 ಮಂದಿ ಗುಣಮುಖ ರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 54,491 ಮಂದಿಗೆ ಸೋಂಕು ತಗುಲಿದಂತಾಗಿದೆ. 53,228 ಸೋಂಕಿತರು ಗುಣಮುಖರಾಗಿ ದ್ದಾರೆ. ಇಂದು ವ್ಯಕ್ತಿಯೋರ್ವ ಸಾವನ್ನ ಪ್ಪಿದ್ದಾರೆ. ಇದುವರೆಗೆ 1,037 ಮಂದಿ ಸೋಂಕಿತರು ಬಲಿಯಾಗಿದ್ದಾರೆ. ಜಿಲ್ಲೆಯ ಲ್ಲಿನ್ನೂ 226 ಮಂದಿ ಚಿಕಿತ್ಸೆ ಪಡೆಯು ತ್ತಿದ್ದು, ಅವರಲ್ಲಿ 67 ಮಂದಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆ -ನಿಗಾ ಕೇಂದ್ರಗಳಲ್ಲಿ 37, ಖಾಸಗಿ ಆಸ್ಪತ್ರೆ ಗಳು-ನಿಗಾ ಕೇಂದ್ರಗಳಲ್ಲಿ 113 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಖಾಸಗಿ ಲ್ಯಾಬ್‍ಗಳಲ್ಲಿ ಪರೀಕ್ಷೆ ಮಾಡಿಸಿ ರುವ 72,379 ಮಂದಿ ಸೇರಿ, ಒಟ್ಟು 9,11,451 ಮಂದಿ ಕೋವಿಡ್ ಪರೀಕ್ಷೆಗೊಳಗಾಗಿದ್ದಾರೆ.

ರಾಜ್ಯದ ವಿವರ: ಬಳ್ಳಾರಿ 18, ಬೆಳಗಾವಿ 3, ಬೆಂಗಳೂರು ಗ್ರಾಮಾಂತರ 7, ಬೆಂಗ ಳೂರು ನಗರ 550, ಬೀದರ್ 33, ಚಾಮ ರಾಜನಗರ 7, ಚಿಕ್ಕಬಳ್ಳಾಪುರ 12, ಚಿಕ್ಕಮಗ ಳೂರು 2, ಚಿತ್ರದುರ್ಗ 8, ದಕ್ಷಿಣಕನ್ನಡ 65, ಧಾರವಾಡ 11, ಗದಗ 2, ಹಾಸನ 16, ಹಾವೇರಿ 1, ಕಲಬುರಗಿ 43, ಕೊಡಗು 4, ಕೋಲಾರ 8, ಕೊಪ್ಪಳ 2, ಮಂಡ್ಯ 13, ಮೈಸೂರು 46, ರಾಯಚÀೂರು 2, ರಾಮ ನಗರ 2, ಶಿವಮೊಗ್ಗ 5, ತುಮಕೂರು 40, ಉಡುಪಿ 24, ಉತ್ತರಕನ್ನಡ 6, ಯಾದಗಿರಿ 2 ಸೇರಿದಂತೆ ರಾಜ್ಯದಲ್ಲಿ ಒಟ್ಟು 932 ಪ್ರಕ ರಣಗಳು ಪತ್ತೆಯಾಗಿವೆ. ಬಾಗಲಕೋಟೆ, ದಾವಣಗೆರೆ, ವಿಜಯಪುರ ಜಿಲ್ಲೆಗಳಲ್ಲಿ ಒಂದು ಪ್ರಕರಣಗಳು ಪತ್ತೆಯಾಗಿಲ್ಲ. 429 ಸೋಂಕಿತರು ಗುಣಮುಖರಾಗಿ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 9,61,204ಕ್ಕೆ ಏರಿಕೆಯಾಗಿದ್ದು, 9,39,928 ಸೋಂಕಿತರು ಗುಣಮುಖರಾದಂತಾಗಿದೆ. ಇಂದು ವರದಿಯಾದ 7 ಮಂದಿ ಸಾವಿನ ಪ್ರಕರಣ ಸೇರಿ ಇದುವರೆಗೆ 12,397 ಮಂದಿ ಮೃತಪಟ್ಟಂತಾಗಿದೆ. ಇನ್ನು 8,860 ಸಕ್ರಿಯ ಪ್ರಕರಣಗಳಿವೆ.

Translate »