ಸಾಮಾಜಿಕ ಪ್ರಗತಿಗೆ ವೈಚಾರಿಕತೆ ಪೂರಕ
ಮೈಸೂರು

ಸಾಮಾಜಿಕ ಪ್ರಗತಿಗೆ ವೈಚಾರಿಕತೆ ಪೂರಕ

March 16, 2021

ಮೈಸೂರು,ಮಾ.15-ವೈಚಾರಿಕ ಮಾತು ಗಳು ಸಾಮಾಜಿಕ ಬೆಳವಣಿಗೆಗೆ ಪೂರಕ ಎಂದು ಹಿರಿಯ ಸಾಹಿತಿ ಪ್ರೊ.ಅರ ವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.

ಕರ್ನಾಟಕ ಮುಕ್ತ ವಿಶ್ವವಿದ್ಯಾ ಲಯ(ಕೆಎಸ್‍ಒಯು) ಹಾಗೂ ಸ್ನೇಹ ಸಿಂಚನ ಟ್ರಸ್ಟ್ ವತಿಯಿಂದ ಕರಾಮುವಿ ಕಾವೇರಿ ಸಭಾಂಗಣದಲ್ಲಿ ಸೋಮ ವಾರ ನಡೆದ ಕಾರ್ಯಕ್ರಮದಲ್ಲಿ ಲೇಖಕ ಡಾ.ಅವರೆಕಾಡು ವಿಜಯಕುಮಾರ್ ಅವರ `ಭಾಷೆ ಸಮಾಜ ಸಂಸ್ಕøತಿ’ ಹಾಗೂ `ನಮ್ಮ ಮೇಷ್ಟ್ರು’ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಕಾಲ ಬದಲಾದಂತೆ ನಮ್ಮ ವೈಚಾರಿಕ ಮಾತು ಗಳು ಬದಲಾಗಬೇಕು. ಇಲ್ಲವಾದರೆ ಸಾಮಾಜಿಕ ಅಭಿವೃದ್ಧಿ ಸಾರ್ಥಕವಾಗುವು ದಿಲ್ಲ. ಈ ನಿಟ್ಟಿನಲ್ಲಿ ವರ್ತಮಾನ ಸಂಗತಿ ಗಳನ್ನೊಳಗೊಂಡ ಲೇಖನಗಳು ಹೆಚ್ಚು ಬೆಳಕಿಗೆ ಬರಬೇಕು ಎಂದು ತಿಳಿಸಿದರು.

ಡಾ.ಅವರೆಕಾಡು ವಿಜಯಕುಮಾರ್, `ಭಾಷೆ ಸಮಾಜ ಸಂಸ್ಕøತಿ’ ಕೃತಿಯಲ್ಲಿ ವರ್ತಮಾನದ ವಿಚಾರಗಳನ್ನು ಚಿತ್ರಿಸುವ ಜೊತೆಗೆ, ಪ್ರಜಾಪ್ರಭುತ್ವಕ್ಕೆ ಅನಾಥಪ್ರಜ್ಞೆ ಕಾಡಬಾರದು ಎಂದು ತಿಳಿಸಿಕೊಟ್ಟಿದ್ದಾರೆ. ಈ ಕೃತಿ ರೈತರ ಹೋರಾಟ, ಇದಕ್ಕೆ ಸಮಾಜ ಹೇಗೆ ಒತ್ತಾಸೆಯಾಗಿ ನಿಲ್ಲಬೇಕು ಎಂಬು ದನ್ನು ಕಟ್ಟಿಕೊಟ್ಟಿದೆ. ಹಳ್ಳಿಗಳಲ್ಲಿ ಮಾತ ನಾಡುವ ಭಾಷೆಯೇ ಕಾವ್ಯಾತ್ಮಕವಾಗಿ ರುತ್ತದೆ. ಸಂವಹನವನ್ನು ಮೀರಿದ ಭಾಷೆ ಯಾಗಿರುತ್ತದೆ. ಈ ಆಡು ಭಾಷೆಯ ಮಹತ್ವ ವನ್ನೂ ಈ ಪುಸ್ತಕದಲ್ಲಿ ತಿಳಿಸುವ ಪ್ರಯತ್ನ ಮಾಡಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಶಾಸ್ತ್ರೀಯ ಅಧ್ಯ ಯನ ಕೇಂದ್ರದ ಕಾರ್ಯಚಟುವಟಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಅಲ್ಲಿ ಯಾವ ರೀತಿಯ ಯೋಜನೆಗಳು ರೂಪು ಗೊಳ್ಳಬೇಕಿತ್ತೋ, ಗ್ರಂಥಗಳು ಮುದ್ರಿತ ಗೊಳ್ಳಬೇಕಿತ್ತೋ ಅದು ಸಾಕಾರವಾಗಿಲ್ಲ ಎಂದರು. ಕರಾಮುವಿ ಕುಲಪತಿ ಪ್ರೊ.ವಿದ್ಯಾ ಶಂಕರ್ ಕಾರ್ಯಕ್ರಮ ಉದ್ಘಾಟಿಸಿ, ಮಾತ ನಾಡಿದರು. ಪರೀಕ್ಷಾಂಗ ಕುಲಸಚಿವ ಪ್ರೊ. ಕೆ.ಎಂ.ಮಹದೇವನ್, ಸಾಹಿತಿ ಪ್ರೊ.ಸಿ. ನಾಗಣ್ಣ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಲೇಖಕ ಡಾ.ಅವರೆಕಾಡು ವಿಜಯ ಕುಮಾರ್, ಸ್ನೇಹ ಸಿಂಚನ ಟ್ರಸ್ಟ್ ಅಧ್ಯಕ್ಷೆ ಮ.ನ. ಲತಾ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

Translate »