ಪೌರಕಾರ್ಮಿಕರ ಮೇಲೆ ಹಲ್ಲೆ  ಮಾಡಿದವರನ್ನು ಜೈಲಿಗಟ್ಟಿ
ಮೈಸೂರು

ಪೌರಕಾರ್ಮಿಕರ ಮೇಲೆ ಹಲ್ಲೆ ಮಾಡಿದವರನ್ನು ಜೈಲಿಗಟ್ಟಿ

March 16, 2021

ಮೈಸೂರು, ಮಾ. 15(ಆರ್‍ಕೆ)- ಪೌರ ಕಾರ್ಮಿಕರನ್ನು ತುಚ್ಛವಾಗಿ ಕಂಡು, ಅವ ಮಾನಿಸಿ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋ ಗದ ಅಧ್ಯಕ್ಷ ವೆಂಕಟೇಶನ್ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಇಂದು ಅಧಿಕಾರಿಗಳು, ಪೌರ ಕಾರ್ಮಿಕ ಮುಖಂಡರೊಂದಿಗೆ ಸಭೆ ನಡೆ ಸಿದ ಅವರು, ಸ್ವಚ್ಛತೆ, ಒಳಚರಂಡಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಸ್ವಾಭಿ ಮಾನಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಿ. ಒಂದು ವೇಳೆ ಅವರ ಮೇಲೆ ಹಲ್ಲೆ ಮಾಡಿ ದರೆ ಅವರು ಎಷ್ಟೇ ದೊಡ್ಡವರಿದ್ದರೂ ಜೈಲಿಗೆ ಕಳಿಸಿ ಎಂದು ಖಡಕ್ ಸೂಚನೆ ನೀಡಿದರು.

ಪೌರಕಾರ್ಮಿಕ ಮುಖಂಡರ ಅಹ ವಾಲು ಸ್ವೀಕರಿಸಿದ ವೆಂಕಟೇಶನ್, ಸಮಸ್ಯೆ ಗಳಿಗೆ ಶೀಘ್ರ ಪರಿಹಾರ ಸೂಚಿಸಬೇಕು. ಎಲ್ಲಿಯೂ ಅವರು ಸರ್ಕಾರಿ ಸೌಲಭ್ಯ ಗಳಿಂದ ವಂಚಿತರಾಗದಂತೆ ನೋಡಿ ಕೊಳ್ಳಿ ಎಂದು ಸೂಚಿಸಿದರು.

ಈ ವೇಳೆ ಮಾತನಾಡಿದ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಅವರು, ಪೌರಕಾರ್ಮಿಕರು ಕೆಲಸ ಮಾಡುವ ಬೆಂಗಳೂರಿನ 600 ಮತ್ತು ರಿಂಗ್ ಪಾಯಿಂಟ್‍ಗಳಲ್ಲಿ ರೆಸ್ಟ್ ರೂಂ ನಿರ್ಮಿಸಲು ಬಿಬಿಎಂಪಿ ಮುಂದಾಗಿರು ವಂತೆ ಮೈಸೂರು ಸೇರಿ ರಾಜ್ಯದಾದ್ಯಂತ ಸೌಲಭ್ಯ ಕಲ್ಪಿಸಬೇಕೆಂದರು.

ಯುಜಿಡಿ, ಆಟೋ, ಟಿಪ್ಪರ್‍ಗಳಲ್ಲಿ ಕೆಲಸ ಮಾಡುತ್ತಿರುವವರನ್ನೂ ಪೌರಕಾರ್ಮಿಕ ರೆಂದು ಪರಿಗಣಿಸಿ ಅವರ ಸೇವೆಯನ್ನು ಖಾಯಂಗೊಳಿಸಬೇಕು. ಅವರ ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಮನೆ, ಸಾಲ ಸೌಲಭ್ಯ ಗಳನ್ನು ಒದಗಿಸಿ ಎಂದು ತಿಳಿಸಿದರು.

ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಪದ್ಧತಿ ಯನ್ನು ಸಂಪೂರ್ಣವಾಗಿ ನಿರ್ಮೂಲನೆಗೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿ ಸಬೇಕು. ಆ ಬಗ್ಗೆ ಮಾಹಿತಿ ಬಂದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಿ ಎಂದು ಶಿವಣ್ಣ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಖಾಸಗಿ ಶಾಲೆಗಳಲ್ಲಿ ಪೌರಕಾರ್ಮಿಕರ ಮಕ್ಕಳಿಗೆ ಪ್ರವೇಶಾತಿ ನೀಡಲು ಕ್ರಮ ವಹಿಸಿ, ಶಿಕ್ಷಣ ಪಡೆದ ನಂತರ ಅವರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಿ ಉದ್ಯೋಗ ಸೌಲಭ್ಯಕ್ಕೆ ಅವಕಾಶ ಕಲ್ಪಿಸುವಂತೆಯೂ ತಿಳಿಸಿದರು. ಪ್ರಸ್ತುತ ಇರುವ ಪೌರ ಕಾರ್ಮಿಕರ ಡ್ರೆಸ್ ಕೋಡ್ ಅನ್ನು ಬದಲಿ ಸಲು ಚಿಂತನೆ ನಡೆಸಿದ್ದು, ಅವರ ಕೆಲಸದ ಅವಧಿ ಪರಿಷ್ಕರಿಸುವ ಬಗ್ಗೆಯೂ ಸರ್ಕಾ ರಕ್ಕೆ ಆಯೋಗದಿಂದ ಪ್ರಸ್ತಾವನೆ ಸಲ್ಲಿಸ ಲಾಗುತ್ತಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮಾಹಿತಿ ನೀಡುವಂತೆ ಶಿವಣ್ಣ ನುಡಿದರು.

ರಾಜ್ಯದಲ್ಲಿರುವ ಸಫಾಯಿ ಕರ್ಮಚಾರಿ ಗಳ ನಿಖರ ಮಾಹಿತಿಗಾಗಿ ಸಮೀಕ್ಷೆ ನಡೆಸ ಬೇಕಾಗಿದ್ದು, ನಗರ ಪಾಲಿಕೆ, ಪುರಸಭೆ, ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನು ಗುರ್ತಿಸಿ ಮಾಹಿತಿ ಒದಗಿಸುವಂತೆಯೂ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಪೌರಕಾರ್ಮಿಕರಿಗಾಗಿ ಮೀಸಲಿರುವ ಅನುದಾನ ಬಳಸಿ ಸೌಲಭ್ಯ ಒದಗಿಸಿ, ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದಾಗ ಆದ್ಯತೆ ಮೇಲೆ ಪರಿಗಣಿಸುವ ಮೂಲಕ ಅವರು ಎಲ್ಲರಂತೆ ಗೌರವದಿಂದ ಬದುಕುವಂತಹ ವಾತಾವರಣ ನಿರ್ಮಿಸುವಂತೆಯೂ ಹೇಳಿದರು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಜಿಲ್ಲಾ ಪಂಚಾಯ್ತಿ ಸಿಇಓ ಯೋಗೇಶ್, ಉಪವಿಭಾಗಾಧಿಕಾರಿ ವೆಂಕಟಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಾಲತಿ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Translate »