ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಉದ್ಯಮಿ ಸಾವು
News

ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಉದ್ಯಮಿ ಸಾವು

March 16, 2021

ಮಡಿಕೇರಿ, ಮಾ.15- ನಿರ್ಮಾಣ ಹಂತದ ಮನೆಯ ಕಟ್ಟಡದಿಂದ ಆಯತಪ್ಪಿ ಬಿದ್ದು ಉದ್ಯಮಿಯೊಬ್ಬರು ಮೃತಪಟ್ಟಿರುವ ಘಟನೆ ಮಡಿಕೇರಿ ಗೌಳಿಬೀದಿಯಲ್ಲಿ ನಡೆದಿದೆ.
ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದ ಬಳಿ ಇರುವ ಶೆಟ್ಟಿ ಸ್ವೀಟ್ಸ್ ಅಂಡ್ ಬೇಕರಿ ಮಾಲೀಕ ಕೃಷ್ಣಶೆಟ್ಟಿ(62) ಮೃತಪಟ್ಟ ವರು. ಮೃತರಿಗೆ ಪತ್ನಿ, ಪುತ್ರ-ಪುತ್ರಿ ಇದ್ದಾರೆ. ಕೃಷ್ಣಶೆಟ್ಟಿ ಅವರು ಗೌಳಿಬೀದಿಯಲ್ಲಿ ಹೊಸ ಮನೆ ಕಟ್ಟಿಸುತ್ತಿದ್ದು, ಎಂದಿನಂತೆ ಸೋಮ ವಾರ ಮಧ್ಯಾಹ್ನ ಮನೆ ಕಾಮಗಾರಿ ವೀಕ್ಷಿಸಲು ತೆರಳಿದ್ದರು. ಈ ಸಂದರ್ಭ ಮನೆಯ ಮೇಲಿನಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮಡಿಕೇರಿ ನಗರ ಠಾಣಾ ಪೊಲೀಸರು ಪರಿಶೀಲಿಸಿ, ಮುಂದಿನ ಕ್ರಮ ಕೈಗೊಂಡರು. ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »