ವಿದ್ಯುತ್ ಸ್ಪರ್ಶ: ಕಾರ್ಮಿಕ ಸಾವು
News

ವಿದ್ಯುತ್ ಸ್ಪರ್ಶ: ಕಾರ್ಮಿಕ ಸಾವು

March 16, 2021

ವಿರಾಜಪೇಟೆ, ಮಾ.15-ಕಾಫಿ ತೋಟದಲ್ಲಿ ಕಾಳು ಮೆಣಸು ಕುಯ್ಯುವ ವೇಳೆ ಅಲ್ಯುಮಿನಿಯಂ ಏಣಿಗೆ ವಿದ್ಯುತ್ ಸ್ಪರ್ಶಿಸಿ ಕೂಲಿ ಕಾರ್ಮಿಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ವಿರಾಜಪೇಟೆ ಬಳಿಯ ಆರ್ಜಿ ಗ್ರಾಮದಲ್ಲಿ ನಡೆದಿದೆ. ಸಬಾಸ್ಟೀನ್ ಲೊಬೋ(62) ಮೃತಪಟ್ಟ ಕೂಲಿ ಕಾರ್ಮಿಕ. ಇವರು ಕುಟುಂಬ ಸಮೇತ ಹಲವು ವರ್ಷದಿಂದ ಸಮೀಪದ ಆರ್ಜಿ ಗ್ರಾಪಂ ವ್ಯಾಪ್ತಿಯ ಸಂತ ಅನ್ನಮ್ಮ ದೇವಾಲಯಕ್ಕೆ ಸೇರಿದ ಕಾಫಿ ತೋಟದ ಲೈನ್‍ಮನೆಯಲ್ಲಿ ವಾಸವಿದ್ದರು. ಸೋಮವಾರ ಬೆಳಗ್ಗೆ ಕಾಳು ಮೆಣಸು ಕುಯ್ಯುಲು ತೋಟಕ್ಕೆ ಹೋಗಿದ್ದ ಅವರು, ಮರದಿಂದ ಮರಕ್ಕೆ ಏಣಿ ಇಡುವ ಸಂದರ್ಭ ತೋಟದಲ್ಲಿ ಹಾದು ಹೋಗಿದ್ದ 11 ಕೆ.ವಿ. ಲೈನ್ ತಗುಲಿ ವಿದ್ಯುತ್ ಪ್ರವಹಿಸಿದೆ. ಪರಿಣಾಮ ಸಬಾಸ್ಟೀನ್ ಲೋಬೊ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈ ಸಂದರ್ಭ ಸ್ಥಳದಲ್ಲಿದ್ದ ಪತ್ನಿ ಹಾಗೂ ಇತರ ಕಾರ್ಮಿಕರು ನಗರ ಪೊಲೀಸ್ ಠಾಣೆಗೆ ಮಾಹಿತಿ ಮುಟ್ಟಿಸಿದ್ದಾರೆ. ಠಾಣಾಧಿಕಾರಿ ಜಗದೀಶ್ ಧೂಳ್‍ಶೆಟ್ಟಿ, ಮಡಿಕೇರಿಯ ಉಪವಿದ್ಯುತ್ ಪರಿವೀಕ್ಷಕ ಅಮಿತ್, ವಿರಾಜಪೇಟೆ ವಿಭಾಗದ ಸೆಸ್ಕ್‍ನ ಎಇಇ ಸುರೇಶ್ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲಿಸಿದರು. ಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಮೃತದೇಹ ಹಸ್ತಾಂತರಿಸಲಾಯಿತು. ಮೃತರ ಪತ್ನಿ ಸಿಸಲೀಯಾ ಲೋಬೊ ಅವರ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Translate »