ಲಾಕ್‍ಡೌನ್ ವೇಳೆ ಹೆಚ್ಚಿನ ಮಹಿಳಾ ಪರ ಸಾಹಿತ್ಯ ರಚನೆ
ಮೈಸೂರು

ಲಾಕ್‍ಡೌನ್ ವೇಳೆ ಹೆಚ್ಚಿನ ಮಹಿಳಾ ಪರ ಸಾಹಿತ್ಯ ರಚನೆ

March 16, 2021

ಮೈಸೂರು, ಮಾ.15(ಎಸ್‍ಪಿಎನ್)- ಲಾಕ್‍ಡೌನ್ ವೇಳೆ ಮಹಿಳಾ ಪರ ಬರ ವಣಿಗೆಗಳು ಹೆಚ್ಚು ಸೃಷ್ಟಿಯಾಗಿವೆ. ಈ ಬರಹಗಳು ವಿವಿಧ ಪ್ರಕಾಶನದ ಮೂಲಕ ಪ್ರಕಟಗೊಂಡಿವೆ ಎಂದು ಮಹಿಳಾ ಬರಹ ಗಾರ್ತಿ ಸುಮನಾ ಕಿತ್ತೂರು ಅಭಿಪ್ರಾಯಪಟ್ಟರು.

ಮೈಸೂರು ರಾಮಕೃಷ್ಣನಗರದ ಇ ಅಂಡ್ ಎಫ್ ಬ್ಲಾಕ್‍ನಲ್ಲಿರುವ ರಮಾಗೋವಿಂದ ರಂಗಮಂದಿರದಲ್ಲಿ ಗ್ರೀನ್‍ತಾರಾ ಅರ್ಥ್ ಸೇಫ್‍ಕಾಟನ್ ಬ್ಯಾಗ್ಸ್ ಮತ್ತು ಕಾರ್ತಿಕ್ ಮಹೇಶ್ ಅರ್ಪಿಸುವ `ಮ್ಯಾಜಿಕ್ ಶೋ’ ಮತ್ತು ಲೇಖಕ ಉದಯ್ ಜಾದೂಗಾರ್ ರಚಿತ `ಹಣ-ಝಣ-ಮನ’, ಲೇಖಕಿ ಉಷಾ ನರಸಿಂಹನ್ ರಚಿತ `ಸಂತೆಯ ಸರಕು’, ಗಾಯತ್ರಿರಾಜ್, ಉದಯ್ ಜಾದೂಗಾರ್ ಮತ್ತು ಉಷಾ ನರಸಿಂಹನ್ ರಚಿತÀ ಮೂರು ನೀಳ್ಗತೆಗಳು ಮತ್ತು 15 ಸಣ್ಣ ಕತೆಗಳ ಪುಸ್ತಕ ಸೇರಿದಂತೆ ಒಟ್ಟು 4 ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಕಳೆದ ಲಾಕ್‍ಡೌನ್ ಸಮಯದಲ್ಲಿ ಎಲ್ಲರೂ ಸಾಹಿತ್ಯ ಕ್ಷೇತ್ರಕ್ಕೆ ಹಿನ್ನಡೆಯಾಗಿದೆ ಅಂದುಕೊಂಡಿದ್ದೆವು. ಆದರೆ, ಹಿರಿಯ ಸಾಹಿತಿ ಪ್ರೊ.ಸಿದ್ದರಾಮಯ್ಯನವರ ಬಳಿ ಈ ಸಂಬಂಧ ಚರ್ಚಿಸಿದಾಗ ಲಾಕ್‍ಡೌನ್ ಸಮಯದ ಸತ್ಯಾಂಶ ತಿಳಿಸಿದರು. ಲಾಕ್ ಸಮಯದಲ್ಲಿ ಅತೀ ಹೆಚ್ಚು ಮಹಿಳಾ ಲೇಖಕರು ಸಾಹಿತ್ಯವನ್ನು ರಚಿಸಿದ್ದಾರೆ. ಅಲ್ಲದೆ, ಈ ಪುಸ್ತಕಗಳು ಲಾಕ್‍ಡೌನ್ ನಂತರ ವಿವಿಧ ಪ್ರಕಾಶನಗಳ ಮೂಲಕ ಪ್ರಕಟ ಗೊಳ್ಳುತ್ತಿವೆ. ಈ ಮಾತುಗಳು ಯಾವ ಕ್ಷೇತ್ರವೂ ನಿಂತ ನೀರಾಗುವುದಿಲ್ಲ ಎಂಬು ದನ್ನು ಸೂಚಿಸುತ್ತವೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾ ರಂಭಗಳು ಕೇವಲ ವಾರದ ದಿನ ಇಲ್ಲವೇ ರಜಾದಿನಗಳಲ್ಲಿ ಆಯೋಜನೆಗೊಳ್ಳುತ್ತವೆ. ಆದರೆ, ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ದಿನನಿತ್ಯ ಒಂದಿಲ್ಲೊಂದು ಪುಸ್ತಕ ಬಿಡು ಗಡೆ ಸಮಾರಂಭ ನಡೆಯುತ್ತಲೇ ಇರು ತ್ತವೆ. ಇದರಿಂದ ಪುಸ್ತಕ ಕ್ಷೇತ್ರ ನಿಂತ ನೀರಾ ಗಿಲ್ಲ ಎಂದು ಅಭಿಪ್ರಾಯಪಟ್ಟರಲ್ಲದೆ, ಸಾಹಿತ್ಯ ಕ್ಷೇತ್ರಕ್ಕೆ ಮಾಧ್ಯಮಗಳ ಹೆಚ್ಚು ಪ್ರಚಾರ ಸಿಗುತ್ತಿಲ್ಲ ಎಂದು ಕೊರಗುವ ಬದಲು ಡಿಜಿಟಲ್ ವೇದಿಕೆಗಳನ್ನು ಸಮರ್ಥವಾಗಿ ಬಳಕೆ ಮಾಡುವುದನ್ನು ಸಾಹಿತ್ಯಾಸಕ್ತರು ಕಲಿತುಕೊಳ್ಳಬೇಕು. ಲಾಕ್‍ಡೌನ್ ಸಮಯದಲ್ಲಾದ ಅನುಭವ ಎಂದು ಸಲಹೆ ನೀಡಿದರು.
`ಸಂತೆಯ ಸರಕು, `ಹಣ-ಝಣ-ಮನ’, ಪುಸ್ತಕ ಕುರಿತು ವಿಮರ್ಶಕಿ ನಿವೇ ದಿತಾ ಮಾತನಾಡಿದರು. 3 ನೀಳ್ಗತೆಗಳು, 15 ಸಣ್ಣಕತೆಗಳು ಕುರಿತು ಹಿರಿಯ ಲೇಖಕ ರಂಗನಾಥ್ ಮೈಸೂರು ಮಾತನಾಡಿ ದರು. ಈ ವೇಳೆ ಭರತ ನಾಟ್ಯಕಲಾವಿದೆ ಚೇತನಾ ರಾಧಕೃಷ್ಣ ಅವರನ್ನು ಸನ್ಮಾನಿಸ ಲಾಯಿತು. ನಂತರ ಯಕ್ಷಿಣಿಗಾರ ಉದಯ್ ಜಾದೂಗಾರ್ ಮತ್ತು ಶಕ್ತಿ ಶೆಣೈ ಅವ ರಿಂದ `ಮ್ಯಾಜಿಕ್ ಶೋ’ ನಡೆಸಿಕೊಟ್ಟರು. ವೇದಿಕೆಯಲ್ಲಿ ಉದ್ಯಮಿ ಡಾ.ಜಗನ್ನಾಥ್ ಶೆಣೈ, ಬಿ.ಸ್ವಾತಿ, ಪ್ರೀತಿ ಶೆಣೈ ಉಪಸ್ಥಿತರಿದ್ದರು.

Translate »