ನಕಲಿ ಸಿಡಿ ಹಿಂದೆ ದೊಡ್ಡ ದೊಡ್ಡ ಕೈಗಳೇ ಇವೆ, ಸೂಕ್ತ ತನಿಖೆ ನಡೆಯಬೇಕು:  ವಿಜಯೇಂದ್ರ  ಸೇರಿ ಹಲವು ಮುಖಂಡರ ಒತ್ತಾಯ
News

ನಕಲಿ ಸಿಡಿ ಹಿಂದೆ ದೊಡ್ಡ ದೊಡ್ಡ ಕೈಗಳೇ ಇವೆ, ಸೂಕ್ತ ತನಿಖೆ ನಡೆಯಬೇಕು: ವಿಜಯೇಂದ್ರ ಸೇರಿ ಹಲವು ಮುಖಂಡರ ಒತ್ತಾಯ

March 10, 2021

ಬೆಂಗಳೂರು, ಮಾ.9- ರಮೇಶ್ ಜಾರಕಿಹೊಳಿ ವಿರುದ್ಧ ಹನಿಟ್ರ್ಯಾಪ್ ಮೂಲಕ ನಕಲಿ ಸಿಡಿ ಕಾರ್ಯಾ ಚರಣೆ ನಡೆಸಿದ್ದವರು ಸಾಮಾನ್ಯರೂ ಅಲ್ಲ ಸಣ್ಣವರೂ ಅಲ್ಲ. ಈ ಷಡ್ಯಂತ್ರದ ಹಿಂದೆ ದೊಡ್ಡದೊಡ್ಡ ಕೈಗಳೇ ಇರು ವುದು ಮೇಲ್ನೋಟಕ್ಕೆ ತಿಳಿಯುತ್ತದೆ ಎಂದು ಬಿಜೆಪಿ ಉಪಾಧ್ಯಕ್ಷ ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಈ ಪ್ರಕರಣ ಕುರಿತು ಜಾರಕಿಹೊಳಿ ಸಹೋದರರು ಮತ್ತೊಮ್ಮೆ ಸಿಎಂ ಭೇಟಿ ಮಾಡಿ ಚರ್ಚೆ ಮಾಡುತ್ತಾರೆ. ನಕಲಿ ಸಿಡಿ ಪ್ರಕರಣ ಬಗ್ಗೆ ರಮೇಶ್ ಜಾರಕಿಹೊಳಿ ಸಹೋದರರ ಅಪೇಕ್ಷೆ ಯಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತನಿಖೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದರು. ಈ ನಡುವೆ ಸಿಡಿ ಪ್ರಕರಣ ಸಂಬಂಧ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್. ಅಶೋಕ್, ಈ ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಅವರಿಗೆ ಮನವಿ ಮಾಡುತ್ತೇವೆ. ಇದು ಸುಳ್ಳು ದಾಖಲೆ ರೀತಿಯಲ್ಲಿದೆ ಎಂದು ತಿಳಿಸಿದರು.

ರಮೇಶ್ ಜಾರಕಿಹೊಳಿ ವಿರುದ್ಧ ನಕಲಿ ಸಿಡಿ ಬಿಡುಗಡೆ ಮಾಡುವ ಮೂಲಕ ರಾಜಕೀಯ ಷಡ್ಯಂತ್ರ ನಡೆಸ ಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲು ಆದೇಶಿಸುವಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿಗೆ ತನಿಖೆಗೆ ಮನವಿ ಮಾಡುವುದಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿರೇಣುಕಾಚಾರ್ಯ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ನಿವಾಸಕ್ಕೆ ರಾಜೂಗೌಡ ಜೊತೆ ಆಗಮಿಸಿ ನೈತಿಕ ಬೆಂಬಲ ನೀಡಿ ಮಾತನಾ ಡಿದ ಅವರು, ರಮೇಶ್ ಜಾರಕಿಹೊಳಿನ ತೇಜೋವಧೆ ಮಾಡುತ್ತಿದ್ದಾರೆ. ಇಂತಹ ಬ್ಲಾಕ್‍ಮೇಲ್ ಮಾಡುವವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿ ಸಿದರು. ಆರೋಪ ಬರುತ್ತಿದ್ದಂತೆ ನೈತಿಕ ಹೊಣೆ ಹೊತ್ತು, ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರವಾಗಬಾರದು ಎಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ನೋಡಿದರೆ ದೂರುದಾರರೇ ದೂರು ವಾಪಸ್ ಪಡೆದಿದ್ದಾರೆ. ಹಾಗಾಗಿ ರಾಜಕೀಯಕ್ಕೆ ಮತ್ತೆ ರಮೇಶ್ ಜಾರಕಿಹೊಳಿ ವಾಪಸ್ ಬರಬೇಕು ಎಂದರು.
ಸದಾಶಿವನಗರದಲ್ಲಿ ರಮೇಶ್ ಜಾರಕಿಹೊಳಿ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಾರಕಿಹೊಳಿ ಕುಟುಂಬದ ಆಪ್ತ, ಮಾಜಿ ಶಾಸಕ ನಾಗರಾಜ್, ನಕಲಿ ಸಿಡಿ ಬಲೆ ಹೆಣೆದಿರುವ ಮಾಹಿತಿ ಬಗ್ಗೆ 4 ತಿಂಗಳ ಮೊದಲೇ ಗೊತ್ತಾಗಿತ್ತು. ಈ ಬಗ್ಗೆ ರಮೇಶ್ ಜಾರಕಿ ಹೊಳಿ ಅವರ ಗಮನಕ್ಕೂ ತರಲಾಗಿತ್ತು ಎಂದರು.

ನನಗೆ ಬಾಲಚಂದ್ರ ಜಾರಕಿಹೊಳಿ ನಾಲ್ಕು ತಿಂಗಳ ಹಿಂದೆ ಹೇಳಿದ್ದರು. ರಮೇಶ್ ಅಣ್ಣನ ಬಳಿ ಹೋಗಿ ಈ ವಿಚಾರ ತಿಳಿಸು ಎಂದಿದ್ದರು. ಆಗ ರಮೇಶ್ ಜಾರಕಿ ಹೊಳಿ ಅವರು ನನ್ನ ಸಿಡಿ ಇರಲು ಸಾಧ್ಯವಿಲ್ಲ. ಸಿಡಿ ಎಲ್ಲಿರುತ್ತೆ ಎಲ್ಲಾ ಸುಳ್ಳು ಎಂದಿದ್ದರು. ನಾನು ಆ ರೀತಿ ಯಲ್ಲಿ ಯಾವ ತಪ್ಪು ಮಾಡಿಲ್ಲ ಎಂದು ಹೇಳಿದ್ದರು. ನನಗೆ ಹೆಚ್ಚಿನ ಮಾಹಿತಿ ಇಲ್ಲ. ಒಟ್ಟಾರೆ ಜಾರಕಿಹೊಳಿ ಅವರ ಮನೆತನದ ಗೌರವ ಉಳಿಯಬೇಕು ಅಷ್ಟೇ ಎಂದರು.

Translate »