`ಸೇವೆ’ ಎಂಬುದು ಅತ್ಯಂತ ಶ್ರೇಷ್ಠ ಎಂದು ನಂಬಿದ ಭಾರತೀಯರು
ಮೈಸೂರು

`ಸೇವೆ’ ಎಂಬುದು ಅತ್ಯಂತ ಶ್ರೇಷ್ಠ ಎಂದು ನಂಬಿದ ಭಾರತೀಯರು

March 10, 2021

ಮೈಸೂರು, ಮಾ.9 (ಎಸ್‍ಪಿಎನ್)- `ತ್ಯಾಗ’ ಮತ್ತು `ಸೇವೆ’ ಭರತಖಂಡದ ಆದರ್ಶ ಎಂದು ಸ್ವಾಮಿ ವಿವೇಕಾ ನಂದರು ನಂಬಿದ್ದರು ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘ(ಆರ್‍ಎಸ್‍ಎಸ್)ದ ದಕ್ಷಿಣ ಪ್ರಾಂತ ಸೇವಾ ಪ್ರಮುಖ್ ಸುಬ್ರಾಯ ನಂದೋಡಿ ನೆನಪಿಸಿದರು.
ಮೈಸೂರಿನ ಜೆಎಸ್‍ಎಸ್ ಮಹಾ ವಿದ್ಯಾ ಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಜ್ಞಾನ ವಾರಿಧಿ-14 ಡಿಜಿಟಲ್ ಸಾಪ್ತಾಹಿಕ ಕಾರ್ಯ ಕ್ರಮದಲ್ಲಿ `ಸಮಾಜ ಸೇವೆ’ ಕುರಿತು ನಂದೋಡಿ ಮಾತನಾಡಿದರು.

ಪ್ರತಿಯೊಬ್ಬರು ಪ್ರಚಾರಕ್ಕಾಗಿ ಸೇವೆ ಮಾಡದೇ ಸಮರ್ಪಣಾ ಮನೋ ಭಾವದಿಂದ ಸೇವೆ ಸಲ್ಲಿಸಬೇಕು. ಎಲ್ಲಾ ಸೇವೆಗಿಂತ ಸಮಾಜ ಸೇವೆ ಭಿನ್ನ. ಇಡೀ ಜಗತ್ತೇ ನನ್ನ ಕುಟುಂಬ ಎಂದು ಭಾವಿಸಬೇಕು. ಆಗ ಮಾತ್ರ ಪ್ರತಿಯೊಬ್ಬರು ಸಮ ರ್ಪಣಾ ಮನೋಭಾವದಿಂದ ಸೇವೆ ಮಾಡಲು ಸಾಧ್ಯ ಎಂದರು.
ಭಾರತದಲ್ಲಿರುವ ನಾವು-ನೀವು ಸರ್ವ ಧರ್ಮ ಸಮಭಾವದಿಂದ ಬಾಳುತ್ತಿದ್ದೇವೆ. ಸೇವಾ ಹೀ ಪರಮೋ ಧರ್ಮಃ ಎಂಬಂತೆ ಸೇವೆಯನ್ನು ಅತ್ಯಂತ ಶ್ರೇಷ್ಠ ಎಂದು ನಂಬಿದ್ದೇವೆ. ಇದನ್ನು ಉಪಕಾರ, ಸಹಾಯ ಮತ್ತು ಸಂಪಾದನೆಗೆ ಇರುವ ಮಾರ್ಗ ಎಂದು ಭಾವಿಸಬಾರದು. ಪ್ರಕೃತಿಯೊಂದಿಗೆ ಬೆರೆತು ಸೇವಾ ಮನೋಭಾವ ರೂಢಿಸಿಕೊಳ್ಳ ಬೇಕು ಎಂದು ತಿಳಿಸಿದರು.

ಒಂದು ಪ್ರದೇಶದಲ್ಲಿ ಹರಿ ಯುವ ನದಿಯು ತಾನು ಸಾಗುವ ಮಾರ್ಗದಲ್ಲಿ ಕೃಷಿ ಭೂಮಿ ಮತ್ತು ಗ್ರಾಮ ಗಳಿಗೆ ಯಾವ ಪ್ರತಿಫಲವನ್ನೂ ಬಯ ಸದೇ ನೀರು ನೀಡುತ್ತ ಹೋಗುತ್ತದೆಯೋ ಆ ರೀತಿ ಸೇವೆಯಲ್ಲಿ ನಾವು ತೊಡಗ ಬೇಕು. ಪರೋಪಕಾರ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದರು.

ವ್ಯಕ್ತಿ ಬಾಲ್ಯದಿಂದಲೇ ಸಂಸ್ಕಾರಗಳನ್ನು ರೂಢಿಸಿಕೊಂಡರೆ ಯೌವನದಲ್ಲಿ ದಾರಿ ತಪ್ಪುವುದಿಲ್ಲ. ಇಂದು ಮಠ-ಮಂದಿರ, ಸಂಘ-ಸಂಸ್ಥೆಗಳು ಸಂಸ್ಕಾರವನ್ನು ನೀಡುವ ಕೆಲಸವನ್ನು ಇಂದಿಗೂ ಅನುಸರಿಸುತ್ತಿವೆ. ಸಮಾಜದಲ್ಲಿ ಉತ್ತಮ ಚಾರಿತ್ರ್ಯವುಳ್ಳ ವ್ಯಕ್ತಿಗಳ ಸಂಖ್ಯೆ ಹೆಚ್ಚುವುದರಿಂದ ಬಲಿಷ್ಠ ಸಮಾಜ ನಿರ್ಮಾಣವಾಗಲು ಸಾಧ್ಯ. ಇದ ರಿಂದ ಬಲಿಷ್ಟ ಸಮಾಜ ನಿರ್ಮಾಣ ವಾಗಲು ಸಾಧ್ಯ ಎಂದು ಅವರು ಹೇಳಿದರು.

ಪ್ರತಿಯೊಬ್ಬರೂ ಜವಾಬ್ದಾರಿ ಅರಿತು ಸಮಾಜದಲ್ಲಿ ಸೇವಾ ಜಾಗೃತಿ ಮೂಡಿಸ ಬೇಕು. ಯಾವುದೇ ಭೇದ-ಭಾವವಿಲ್ಲದೇ ಸೇವಾ ಕೈಂಕರ್ಯ ಕೈಗೊಳ್ಳಬೇಕು. ಕೊರೊನಾ ಸಂದರ್ಭ ಅನೇಕ ಸಂಘ-ಸಂಸ್ಥೆಗಳು ನಿಸ್ವಾರ್ಥ ಸೇವೆ ಮಾಡಿವೆ. ಅದರಿಂದ ಸ್ಪಂದನೆ, ಪರಹಿತ ಚಿಂತನೆ, ಕೊಡುವ ಮನೋಭಾವ, ನಾಯಕತ್ವ, ಸಮರ್ಪಣಾ ಮನೋಭಾವದಂತಹ ಗುಣಗಳು ನಮ್ಮಲ್ಲಿ ಬೆಳೆಯುತ್ತವೆ ಎಂದು ಸುಬ್ರಾಯ ನಂದೋಡಿ ನುಡಿದರು.
ಆನ್‍ಲೈನ್ ಕಾರ್ಯಕ್ರಮದಲ್ಲಿ ಆಧ್ಯಾ ತ್ಮಿಕ ಜಿಜ್ಞಾಸುಗಳು, ಸಾರ್ವಜನಿಕರು ಭಾಗ ವಹಿಸಿದ್ದರು. ಡಿಎಂ ಸಿದ್ಧಲಿಂಗ ಸ್ವಾಮಿ, ಪ್ರಭುಸ್ವಾಮಿ ಕಟ್ನವಾಡಿ ಇದ್ದರು.

Translate »