ರಾತ್ರಿ ಕರ್ಫ್ಯೂ ಜಾರಿಗೆ ರಾಜ್ಯಕ್ಕೆ ಕೇಂದ್ರ ಸೂಚನೆ
ಮೈಸೂರು

ರಾತ್ರಿ ಕರ್ಫ್ಯೂ ಜಾರಿಗೆ ರಾಜ್ಯಕ್ಕೆ ಕೇಂದ್ರ ಸೂಚನೆ

December 12, 2021

ಜನಜಂಗುಳಿ ನಿಯಂತ್ರಿಸಿ
ಸಭೆ-ಸಮಾರAಭ, ಮದುವೆಗಳ ಮೇಲೆ ನಿರ್ಬಂಧ ಹಾಕಿ
ಡಿಸೆಂಬರ್ ಅಂತ್ಯ ಇಲ್ಲವೇ ಜನವರಿಗೆಮೂರನೇ ಅಲೆ ಎಚ್ಚರಿಕೆ

ಬೆಂಗಳೂರು, ಡಿ. ೧೧(ಕೆಎಂಶಿ)-ರಾಷ್ಟçದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸುವುದೂ ಸೇರಿದಂತೆ ಜನಜಂಗುಳಿಯನ್ನು ನಿಯಂತ್ರಿಸಿ ಎಂದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಕಳೆದ ಎರಡು ವಾರಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿರುವುದನ್ನು ಗಮನಿಸಿರುವ ಕೇಂದ್ರ ಸರ್ಕಾರ ಇದನ್ನು ನಿಯಂತ್ರಿಸಲು ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್, ಸರ್ಕಾರಕ್ಕೆ ಇಂದು ಪತ್ರ ಬರೆದು, ಸಾಂಕ್ರಾಮಿಕ ರೋಗ ಉಲ್ಬಣಗೊಳ್ಳುತ್ತಿರುವ ಮಾಹಿತಿ ಯನ್ನು ನೀಡಿದ್ದಾರೆ. ಕೋವಿಡ್-೧೯ಕ್ಕೆ ಸಂಬAಧಿಸಿದAತೆ ಕೇಂದ್ರದ ಮಾರ್ಗಸೂಚಿಗಳನ್ನು ಯಥಾವತ್ತಾಗಿ ಪಾಲಿಸಬೇಕು. ಎಲ್ಲರಿಗೂ ೨ ಬಾರಿ ಲಸಿಕೆ ನೀಡಲು ಕ್ರಮ ಜರುಗಿಸಬೇಕು. ಇದಲ್ಲದೆ, ಕ್ರಿಸ್‌ಮಸ್ ಮತ್ತು ಹೊಸ ವರ್ಷ ಸಂದರ್ಭದಲ್ಲಿ ಜನಜಂಗುಳಿ ಸೇರುತ್ತದೆ. ಇದನ್ನು ನಿಯಂತ್ರಿಸಲು ರಾತ್ರಿ ಕರ್ಫ್ಯೂ ರಾಜ್ಯಾದ್ಯಂತ ಜಾರಿಗೊಳಿಸಿ. ಸಭೆ, ಸಮಾರಂಭ, ಅಂತ್ಯ ಸಂಸ್ಕಾರ, ಮದುವೆ ಸಮಾರಂಭಗಳಲ್ಲಿ ಜನಜಂಗುಳಿ ಯಾಗದಂತೆ ನಿಯಂತ್ರಿಸಬೇಕು. ಹೊಸ ನಿಯಮಾವಳಿ ಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಿ, ಪಾಲನೆ ಮಾಡ ಬೇಕೆಂದು ತಿಳಿಸಿದ್ದಾರೆ. ಡಿಸೆಂಬರ್ ಅಂತ್ಯ ಹಾಗೂ ಜನವರಿ ಯಲ್ಲಿ ೩ನೇ ಅಲೆಗೆ ಸಂಬAಧಿಸಿದAತೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ತಜ್ಞರ ಸಲಹೆ ಪಡೆದು, ಕೋವಿಡ್ ನಿಯಂತ್ರಿ ಸಲು ಕ್ರಮ ಕೈಗೊಳ್ಳಿ ಎಂದು ಕೇಂದ್ರ ಸೂಚಿಸಿದೆ.

 

Translate »