ಡಿಸಿಗೆ ನಗರ ಪಾಲಿಕೆ ಸದಸ್ಯರ ಮನವಿ
ಮೈಸೂರು

ಡಿಸಿಗೆ ನಗರ ಪಾಲಿಕೆ ಸದಸ್ಯರ ಮನವಿ

January 13, 2022

ಮೈಸೂರು,ಜ.12(ಎಂಕೆ)- ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆ ಯಿಂದ ಹಾನಿಗೊಳಗಾದ ರಸ್ತೆಗಳ ರಿಪೇರಿ ಗಾಗಿ ಬಿಡುಗಡೆಯಾಗಿರುವ 25 ಕೋಟಿ ರೂ., ಎಸ್‍ಎಫ್‍ಸಿ ವಿಶೇಷ ಅನುದಾನದ ಕ್ರಿಯಾಯೋಜನೆಯನ್ನು ರದ್ದುಪಡಿಸು ವಂತೆ 30ಕ್ಕೂ ಹೆಚ್ಚ್ಚು ಮಂದಿ ಪಾಲಿಕೆ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಕಳೆದ ಬಾರಿ ಸುರಿದ ಧಾರಾಕಾರ ಮಳೆ ಯಿಂದಾಗಿ ಮೈಸೂರು ನಗರ ಪಾಲಿಕೆ ವ್ಯಾಪ್ತಿ ಯಲ್ಲಿನ ಪ್ರಮುಖ ರಸ್ತೆಗಳು ಹಾಳಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗು ತ್ತಿದೆ. ಆದ್ದರಿಂದ ಹಾಳಾಗಿರುವ ರಸ್ತೆಗಳನ್ನು ದುರಸ್ತಿ ಮತ್ತು ಅಭಿವೃದ್ಧಿಪಡಿಸಲು ಸರ್ಕಾರ ದಿಂದ 50 ಕೋಟಿ ರೂ. ಅನುದಾನ ನೀಡು ವಂತೆ ಮೇಯರ್ ಸುನಂದಾ ಪಾಲನೇತ್ರ, ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ 25 ಕೋಟಿ ರೂ. ವಿಶೇಷ ಅನುದಾನ ಬಿಡು ಗಡೆಯಾಗಿದ್ದು, ಮೂಲ ಉದ್ದೇಶ ಬಿಟ್ಟು ಅನ್ಯ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ರಸ್ತೆಗಳ ಅಭಿವೃದ್ಧಿಗೆ ಬಿಡುಗಡೆಯಾಗಿ ರುವ ಅನುದಾನವನ್ನು ಪಾಲಿಕೆ ಎಲ್ಲಾ 65 ವಾರ್ಡ್‍ಗಳಿಗೂ ಸಮಾನವಾಗಿ ಹಂಚಿಕೆ ಮಾಡದೆ, ಪ್ರಭಾವಿ ಸದಸ್ಯರಿಗೆ ಹಂಚಿಕೆ ಮಾಡಿಕೊಂಡು ಟೆಂಡರ್ ಆಹ್ವಾನಿಸು ವಂತೆಯೂ ಸೂಚಿಸಲಾಗಿದೆ. ಇದರಿಂದ ಬೇರೆ ವಾರ್ಡಿನ ತೆರಿಗೆದಾರ ಮತದಾರರಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ಈಗಾ ಗಲೇ ಸಿದ್ಧಪಡಿಸಿರುವ ಕ್ರಿಯಾಯೋಜನೆ ಯನ್ನು ರದ್ದುಪಡಿಸಿ, ಹೊಸದಾಗಿ ನಿಯಮಾ ನುಸಾರ ಎಲ್ಲಾ 65 ವಾರ್ಡ್‍ಗಳಿಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ರಸ್ತೆಗಳಿಗೆ ಮಾತ್ರವೇ ಆದ್ಯತೆ: ಹಾಳಾಗಿ ರುವ ರಸ್ತೆಗಳ ಅಭಿವೃದ್ಧಿಗಾಗಿ ಪಡೆದಿರುವ ಅನುದಾನವನ್ನು ತಮ್ಮಿಷ್ಟದಂತೆ ಹಂಚಿಕೆ ಮಾಡಿಕೊಂಡಿದ್ದಾರೆ. ಪಾರ್ಕ್‍ಗಳು, ವೃತ್ತ ಮತ್ತು ಚರಂಡಿಗಳ ಅಭಿವೃದ್ಧಿ ಸೇರಿ ಮೂಲ ಉದ್ದೇಶದ ಬದಲು ಅನ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿದ್ದಾರೆ. ಮೈಸೂರು ನಗರದ ಎಲ್ಲಾ ರಸ್ತೆಗಳು ಹಾಳಾಗಿದ್ದು, ಸಂಪೂರ್ಣ ವಾಗಿ ರಸ್ತೆಗಳ ಅಭಿವೃದ್ಧಿ ಮಾಡ ಬೇಕಾಗಿದೆ. ಕೆಲವು ವಾರ್ಡ್ ಗಳ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿ, ಬಹುತೇಕ ವಾರ್ಡ್ ಗಳನ್ನು ಕಡೆಗಣಿಸಿದ್ದಾರೆ ಎಂದು ಕೆಲ ಪಾಲಿಕೆ ಸದಸ್ಯರು ‘ಮೈಸೂರು ಮಿತ್ರ’ನಲ್ಲಿ ದೂರಿದರು.

22.27 ಕೋಟಿ ರೂ., ವೆಚ್ಚದ ಕ್ರಿಯಾ ಯೋಜನೆ: ಮಳೆಯಿಂದ ಹಾನಿಗೊಳ ಗಾದ ರಸ್ತೆಗಳ ಅಭಿವೃದ್ಧಿಗಾಗಿ ಬಿಡುಗಡೆ ಯಾಗಿರುವ 25 ಕೋಟಿ ರೂ., ಎಸ್‍ಎಫ್‍ಸಿ ವಿಶೇಷ ಅನುದಾನದದಲ್ಲಿ 22.27 ಕೋಟಿ ರೂ. ವೆಚ್ಚಕ್ಕೆ ಕ್ರಿಯಾಯೋಜನೆ ಮಾಡ ಲಾಗಿದೆ. ಕೃಷ್ಣರಾಜ ಬುಲೇವಾರ್ಡ್ ರಸ್ತೆ ಯಿಂದ ಜೆಎಲ್‍ಬಿ ರಸ್ತೆಯವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ 1 ಕೋಟಿ ರೂ., ನಾರಾಯಣ ಶಾಸ್ತ್ರಿ(ಎಂಜಿ ರಸ್ತೆ ಸಿದ್ದಪ್ಪ ವೃತ್ತದಿಂದ ನ್ಯೂ ಕಾಂತರಾಜ ರಸ್ತೆವರೆಗೆ) ರಾಮಾನುಜ ರಸ್ತೆ 12ನೇ ಅಡ್ಡ ರಸ್ತೆ ಯಿಂದ ಎಂಜಿ ರಸ್ತೆವರೆಗೆ 90 ಲಕ್ಷ ರೂ., ನ್ಯೂ ಸಯ್ಯಾಜಿರಾವ್ ರಸ್ತೆ(ಅಗ್ರಹಾರ ವೃತ್ತ ದಿಂದ ಚಾಮರಾಜ ಜೋಡಿ ರಸ್ತೆವರೆಗೆ) ಮತ್ತು ರೇಸ್‍ಕೋರ್ಸ್ ಹಿಂಭಾಗದ ರಸ್ತೆ(ಲಾರಿ ಟರ್ಮಿನಲ್ ಜಂಕ್ಷನ್‍ನಿಂದ ಮಹಾರಾಣ ಪ್ರತಾಪ ಸಿಂಗ್ ರಸ್ತೆಯವ ರೆಗೆ) ಅಭಿವೃದ್ಧಿ 60 ಲಕ್ಷ ರೂ., ವಿವೇಕಾ ನಂದ ವೃತ್ತದ ಅಭಿವೃದ್ಧಿಗೆ 3.50 ಕೋಟಿ ರೂ. ನೀಡಲಾಗಿದೆ.

ಐಶ್ವರ್ಯ ನಗರದ ಅಡ್ಡರಸ್ತೆ ಗಳು ಮತ್ತು ಪ್ರಮುಖ ರಸ್ತೆಗಳ ಅಭಿವೃದ್ಧಿಗೆ 2.30 ಕೋಟಿ ರೂ., ಕುವೆಂಪುನಗರ ಆದಿ ಚುಂಚನಗಿರಿ ರಸ್ತೆಯಿಂದ ಪೂಜಾ ಬೇಕರಿಯವರೆಗೆ ಮತ್ತು ಶ್ರೀರಾಂಪುರದ ನಾಯ್ಡು ಸ್ಟೋರ್‍ನಿಂದ ಮಾನಂದವಾಡಿ ಮುಖ್ಯ ರಸ್ತೆ ಅಭಿವೃದ್ಧಿಗೆ 95 ಲಕ್ಷ ರೂ., ವಾರ್ಡ್ ನಂ.59ರ ವಿವೇಕಾನಂದ ನಗರ ಪೆಟ್ರೋಲ್ ಬಂಕ್‍ನಿಂದ ಕೆಹೆಚ್‍ಬಿ 4ನೇ ಹಂತದವರೆಗೆ ರಸ್ತೆ ಅಭಿವೃದ್ಧಿಗೆ 1 ಕೋಟಿ ರೂ., ವಿವೇಕಾನಂದ ನಗರ ವೃತ್ತದಿಂದ ಕೆಎಸ್‍ಆರ್‍ಟಿಸಿ ಡಿಪೋ ಜಂಕ್ಷನ್ ಮತ್ತು ಡಿಪೋ ಜಂಕ್ಷನ್‍ನಿಂದ ಕುವೆಂಪುನಗರ ಕಾಂಪ್ಲೆಕ್ಸ್‍ವರೆಗಿನ ನೃಪತುಂಗ-ಉದಯ ರವಿ ರಸ್ತೆವರೆಗಿನ ರಸ್ತೆ ಅಭಿವೃದ್ಧಿ ಕಾಮ ಗಾರಿಗೆ 2 ಕೋಟಿ ರೂ., ಪಂಚಮಂತ್ರ ರಸ್ತೆ (ನ್ಯೂ ಕಾಂತರಾಜ ರಸ್ತೆಯಿಂದ ಉದಯಗಿರಿ ರಸ್ತೆವರೆಗೆ) ಅಭಿವೃದ್ಧಿಗೆ 1 ಕೋಟಿ ರೂ., ನ್ಯೂ ಕಾಂತರಾಜ ಅರಸು ರಸ್ತೆಯಿಂದ ವಿಜಯ ಬ್ಯಾಂಕ್ ಸರ್ಕಲ್‍ನಿಂದ ಅಪೋಲೋ ಆಸ್ಪತ್ರೆ ವೃತ್ತದವರೆಗೆ 1 ಕೋಟಿ ರೂ., ಚಿತ್ರಭಾನು ರಸ್ತೆ(ಉದಯರವಿ ರಸ್ತೆಯಿಂದ ಕುವೆಂಪು ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಸಿದ್ದಗಂಗಾ ವೃತ್ತದವರೆಗೆ) ಮತ್ತು ಕುವೆಂಪು ನಗರದ ಪ್ರಮತಿ ಶಾಲೆಯ ಪಶ್ಚಿಮ ಭಾಗದ ರಸ್ತೆಗಳ ಅಭಿವೃದ್ಧಿಗೆ 70 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಇಎಸ್‍ಐ ಆಸ್ಪತ್ರೆ ಪಕ್ಕದ ರಸ್ತೆ ಮತ್ತು ಗೋಕುಲಂ 7ನೇ ಮುಖ್ಯ ರಸ್ತೆ ಅಭಿ ವೃದ್ಧಿಗೆ 80 ಲಕ್ಷ ರೂ., ಸರಸ್ವತಿಪುರಂನ ಫೈರ್ ಬ್ರಿಗೇಡ್ ಮುಂಭಾಗದಿಂದ ಗದ್ದಿಗೆ ರಸ್ತೆಯವರೆಗೆ 70 ಲಕ್ಷ ರೂ., ಆರ್.ಎಸ್. ನಾಯ್ಡುನಗರದ ಮುಖ್ಯ ರಸ್ತೆ ಅಭಿವೃದ್ಧಿಗೆ 1.20 ಕೋಟಿ ರೂ., ಗಾಯತ್ರಿಪುರಂ ಮುಖ್ಯ ರಸ್ತೆ(ಸಂದೇಶ್ ನಾಗರಾಜ್ ಬಸ್ ನಿಲ್ದಾಣದಿಂದ ಎಂಸಿಸಿ ಪೌರಕಾರ್ಮಿಕರ ಕಾಲೋನಿಯವರೆಗೆ) ಅಭಿವೃದ್ಧಿಗೆ 50 ಲಕ್ಷ ರೂ., ಸಿದ್ದಾರ್ಥ ಬಡಾವಣೆಯ ಗೀತಾ ಶಾಲೆಯಿಂದ ಎವಿ ಆಸ್ಪತ್ರೆಯವರೆಗೆ ಹಾಗೂ ಲಲಿತಮಹಲ್ ಆರ್ಚ್‍ನಿಂದ ಫಾರೆಸ್ಟ್ ಪಾರ್ಕ್ ಮುಖಾಂತರ ಬನ್ನೂರು ಮುಖ್ಯರಸ್ತೆವರೆಗಿನ ರಸ್ತೆ ಅಭಿ ವೃದ್ಧಿಗೆ 1.30 ಕೋಟಿ ರೂ., ವಿದ್ಯಾರಣ್ಯ ಪುರಂ ಲಿಂಗಾಯಿತರ ಸ್ಮಶಾನ ಅಭಿ ವೃದ್ಧಿಗೆ 90 ಲಕ್ಷ ರೂ., ಆಲ್‍ಬದರ್ ವೃತ್ತ ಅಭಿವೃದ್ಧಿಗೆ 80 ಲಕ್ಷ ರೂ., ಬನ್ನಿ ಮಂಟಪದ 4ನೇ ಮೇನ್, 4ನೇ ಕ್ರಾಸ್ ನಲ್ಲಿರುವ ಪಾರ್ಕ್ ಅಭಿವೃದ್ಧಿಗೆ 50 ಲಕ್ಷ ರೂ. ಹಾಗೂ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಬೋಗಾದಿ ರಸ್ತೆಯಲ್ಲಿ ಮಳೆ ನೀರು ಚರಂಡಿ ಅಭಿವೃದ್ಧಿ ಕಾಮಗಾರಿಗೆ 62 ಲಕ್ಷ ರೂ. ಸೇರಿ ಒಟ್ಟು 22.27 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದ್ದು, ಅನುಮೋದನೆ ಯನ್ನು ನೀಡಲಾಗಿದೆ.

Translate »