ಮೈಸೂರು,ನ.4(ಎಂಟಿವೈ)-ಬೆಂಗಳೂರಿನ ರಾಜ ರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳÀ ಉಪಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ ಬೇರೊಬ್ಬರನ್ನು ಸಿಎಂ ಮಾಡುವ ಹುನ್ನಾರ ನಡೆದಿದೆ ಎಂದು ವಿಪಕ್ಷ ನಾಯಕ ಸಿದ್ದ ರಾಮಯ್ಯ ಭವಿಷ್ಯ ನುಡಿದಿದ್ದಾರೆÉ.
2 ದಿನದ ಪ್ರವಾಸಕ್ಕೆ ಬುಧವಾರ ಮೈಸೂರಿಗೆ ಆಗಮಿ ಸಿದ ಬಳಿಕ ರಾಮಕೃಷ್ಣನಗರದ ತಮ್ಮ ನಿವಾಸದ ಬಳಿ ಪತ್ರಕರ್ತರೊಂದಿಗೆ ಮಾತನಾಡಿದ ಮಾಜಿ ಸಿಎಂ, ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಹೆಚ್ಚು ದಿನ ಮುಂದು ವರೆಯುವುದಿಲ್ಲ. ಮುಖ್ಯಮಂತ್ರಿ ಬದಲಾಯಿಸಬೇಕೆಂದು ಬಿಜೆಪಿಯಲ್ಲಿ ಮೊದಲಿನಿಂದಲೂ ಒತ್ತಾಯವಿದೆ. ದೆಹಲಿ ಯಿಂದ ಬಂದ ಮಾಹಿತಿ ಆಧರಿಸಿಯೇ ಈ ಮಾತು ಹೇಳುತ್ತಿz್ದÉೀನೆ ಎಂದರು. ಸಿಎಂ ಬದಲಾವಣೆಗೆ ಕಾರಣ ವೇನಿರಬಹುದು? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಸಿಎಂ ಸ್ಥಾನ ದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ವೇದಿಕೆ ನಿರ್ಮಾಣವಾಗುತ್ತಿದೆ. ಭ್ರಷ್ಟಾಚಾರದ ಆರೋಪವೂ ಒಂದು ಕಾರಣವಾಗಿರಬಹುದು. ಹಲವು ದಿನದಿಂದ ಸಿಎಂ ಬದ ಲಾವಣೆ ಮಾಡುವ ಚಿಂತನೆಯಲ್ಲಿ ಬಿಜೆಪಿ ಹೈಕಮಾಂಡ್ ಇದೆ. ಹಾಗಾಗಿ ಉಪ ಚುನಾವಣೆ ಫಲಿತಾಂಶದ ನಂತರ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸು ತ್ತಾರೆ ಎಂದು ಬಿಜೆಪಿ ದೆಹಲಿ ಮೂಲಗಳು ತಿಳಿಸಿವೆ. ಬಿಜೆಪಿ ನಾಯಕರು ಹೇಳಿದ್ದನ್ನು ನಾನು ನಿಮಗೆ ತಿಳಿಸಿದ್ದೇನೆ ಎಂದರು.
ಮೋದಿ ಹೆಸರು ನಡೆಯೋದಿಲ್ಲ: ಅಮೆರಿಕ ಚುನಾವಣೆ ಯಲ್ಲಿ ಮೋದಿ ಹೆಸರು ಹೇಳಿಕೊಂಡು ಟ್ರಂಪ್ ಮತ ಕೇಳಿ ದ್ದರು. ಅಮೆರಿಕಾ ಚುನಾವಣೆಯೇ ಬೇರೆ. ಅಲ್ಲಿನ ಅನಿವಾಸಿ ಭಾರತೀಯರು ಮೋದಿ ಮುಖ ನೋಡಿಕೊಂಡು ವೋಟು ಕೊಡುವುದಿಲ್ಲ. ಭಾರತದ¯್ಲÉೀ ಮೋದಿ ವಿರುದ್ಧ ಜನಾಭಿಪ್ರಾಯ ಶುರುವಾಗಿದೆ. ಅವರು ದೇಶದ ಅರ್ಥ ವ್ಯವಸ್ಥೆ ಹಾಳು ಮಾಡಿz್ದÁರೆ. ಜಿಡಿಪಿ ಪಾತಾಳಕ್ಕೆ ಕುಸಿದಿದೆ. ಹೀಗಾಗಿ ಯುವಜನರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿಟ್ಟು ಹೊರಹಾಕುತ್ತಿz್ದÁರೆ ಎಂದರು.
ಎರಡರಲ್ಲೂ ಕಾಂಗ್ರೆಸ್ ಗೆಲುವು: ಶಿರಾ ಮತ್ತು ಆರ್.ಆರ್.ನಗರ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ. ಎರಡೂ ಕಡೆ ಆಡಳಿತ ವಿರೋಧಿ ಅಲೆ ಇತ್ತು. ಜನ ನಮ್ಮ ಸರ್ಕಾರ ಮತ್ತು ಈಗಿನ ಸರ್ಕಾರವನ್ನು ಹೋಲಿಕೆ ಮಾಡಿ ನೋಡುತ್ತಿz್ದÁರೆ. ಇದು ಕಾಂಗ್ರೆಸ್ ಪರವಾದ ಮತಗಳಾಗಿವೆ. ಶಿರಾದಲ್ಲಿ ಕಳೆದ ಬಾರಿ ಅಪಪ್ರಚಾರ ನಡೆದ ಕಾರಣ ಕಾಂಗ್ರೆಸ್ ಸೋತಿತ್ತು. ಆರ್.ಆರ್.ನಗರದಲ್ಲಿ ಕಳೆದ ಬಾರಿಯೂ ಕಾಂಗ್ರೆಸ್ ಗೆದ್ದಿತ್ತು. ಈ ಬಾರಿಯೂ ಜನ ಕಾಂಗ್ರೆಸ್ ಪರ ಒಲವು ತೋರಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ರಾಷ್ಟ್ರ ಹಾಗೂ ರಾಜ್ಯ ಮಟ್ಟದ ನಾಯಕರು ವಿದ್ಯುನ್ಮಾನ ಮತಯಂತ್ರದ ಮೇಲೆ ಅನುಮಾನ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಇವಿಎಂ ಬಗ್ಗೆ ಮೊದ ಲಿಂದಲೂ ಚರ್ಚೆ ನಡೆಯುತ್ತಿದೆ. ಅಲ್ಲದೆ ಅವುಗಳ ನಿಖರತೆಯ ಬಗ್ಗೆಯೂ ಸಂಶಯ ಗಳಿವೆ. ಈ ಉಪ ಚುನಾವಣೆಯಲ್ಲಿ ಮಾತ್ರ ಸಂಶಯ ವ್ಯಕ್ತವಾಗಿಲ್ಲ ಎಂದರು.
ಶಾಲೆ ತೆರೆಯುವುದು ಬೇಡ: ಈ ವರ್ಷ ಶಾಲೆ ತೆರೆಯುವುದು ಬೇಡ. ಇದು ನನ್ನ ವೈಯ ಕ್ತಿಕ ಸಲಹೆ. ಈ ವರ್ಷ ಆನ್‍ಲೈನ್ ಕ್ಲಾಸ್ ಮಾಡಿ ಎಲ್ಲರನ್ನೂ ಪಾಸ್ ಮಾಡಲಿ. ರಾಜ್ಯ ಕೊರೊನಾ ದಿಂದ ಪೂರ್ಣ ಮುಕ್ತ ವಾದ ನಂತರ ಶಾಲೆ ಆರಂಭಿಸಬೇಕು. ತರಾ ತುರಿಯಲ್ಲಿ ಶಾಲೆ ತೆರೆಯುವುದು. ಮಕ್ಕಳ ಜೀವದೊಂದಿಗೆ ಆಟ ಆಡುವುದು ಸರಿಯಲ್ಲ. ಈ ವರ್ಷ ಶೈಕ್ಷಣಿಕ ಚಟುವಟಿಕೆ ಆನ್‍ಲೈನ್‍ನಲ್ಲಿಯೇ ನಡೆಸುವುದು ಸೂಕ್ತ. ಈ ವಿಚಾರದಲ್ಲಿ ಸರ್ಕಾರ ಆತುರದ ನಿರ್ಧಾರ ತಾಳದೆ, ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ನಗರ ಪಾಲಿಕೆ ಸದಸ್ಯ ಜೆ.ಗೋಪಿ, ಪಾಲಿಕೆ ಮಾಜಿ ಸದಸ್ಯ ಎಂ.ಶಿವಣ್ಣ, ಮುಖಂಡರಾದ ಸೀತಾರಾಮು ಮತ್ತಿತರರಿದ್ದರು.