ಸ್ಪರ್ಧಾತ್ಮಕ ಪರೀಕ್ಷೆ: ಪ್ರಮತಿ ಹಿಲ್ ವ್ಯೂನ ಫಯಾಜ್ ಅಹಮದ್‍ಗೆ 30ನೇ ರ್ಯಾಂಕ್
ಮೈಸೂರು

ಸ್ಪರ್ಧಾತ್ಮಕ ಪರೀಕ್ಷೆ: ಪ್ರಮತಿ ಹಿಲ್ ವ್ಯೂನ ಫಯಾಜ್ ಅಹಮದ್‍ಗೆ 30ನೇ ರ್ಯಾಂಕ್

September 29, 2018

ಮೈಸೂರು: ಮೈಸೂರಿನ ಪ್ರಮತಿ ಹಿಲ್ ವ್ಯೂ ಅಕಾಡೆಮಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಫಯಾಜ್ ಅಹಮದ್ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ ಸಾಧನೆ ಮಾಡುವ ಮೂಲಕ ಶಾಲೆ ಮತ್ತು ಮೈಸೂರು ನಗರಕ್ಕೆ ಕೀರ್ತಿ ತಂದಿದ್ದಾರೆಂದು ಶಾಲೆಯ ಕಾರ್ಯದರ್ಶಿ ಹೆಚ್.ವಿ.ರಾಜೀವ್ ಇಂದಿಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಡೆಸುತ್ತಿರುವ ಈ ಕ್ಲಿಷ್ಟ್ಟಕರ ಪರೀಕ್ಷೆಯಲ್ಲಿ ಈತ 30ನೇ ರ್ಯಾಂಕ್ ಪಡೆದಿದ್ದಾರೆ ಎಂದು ತಿಳಿಸಿದರು.
ಮೈಸೂರು ಜಿಲ್ಲೆಯಿಂದ ಪರೀಕ್ಷೆ ಎದುರಿಸಿದ್ದ 5486 ವಿದ್ಯಾರ್ಥಿಗಳ ಪೈಕಿ ಮೈಸೂರು ನಗರದಿಂದ ಮೂವರು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈತ ಸಾಮಾನ್ಯ ಬುದ್ಧಿ ಸಾಮಥ್ರ್ಯ, ವ್ಯಾಸಂಗ ಪ್ರವೃತ್ತಿ ವಿಭಾಗದಲ್ಲಿ ತನ್ನ ಸಾಮಥ್ರ್ಯ ಪ್ರದರ್ಶಿಸಿ, ಪಿಹೆಚ್‍ಡಿವೆರೆಗೆ ಮಾಸಿಕ ಎರಡು ಸಾವಿರ ರೂ. ವಿದ್ಯಾರ್ಥಿವೇತನ ಮುಂತಾದ ಸೌಲಭ್ಯಗಳಿಗೆ ಆಯ್ಕೆಯಾಗಿದ್ದಾರೆಂದು ಸಂತಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಲೆಯ ಪ್ರಾಚಾರ್ಯ ಶರತ್, ಸುದರ್ಶನ್, ಫಣಿರಾಜ್ ಉಪಸ್ಥಿತರಿದ್ದರು. ಪ್ರಾ ಚಾರ್ಯ ಶರತ್, ಸುದರ್ಶನ್, ಫಣಿರಾಜ್ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

Translate »