ಚಾಮರಾಜನಗರ,ಮಾ.23(ಎಸ್‍ಎಸ್)- ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಕೆಎಸ್ ಆರ್‍ಟಿಸಿ ತನ್ನ ಸಂಚಾರವನ್ನು ಪೂರ್ಣವಾಗಿ ಸ್ಥಗಿತಗೊಳಿ ಸಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು.
ಜಿಲ್ಲೆಯ ನೆರೆ ಜಿಲ್ಲೆಗಳಾದ ಮೈಸೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕು ಇರು ವುದು ದೃಢಪಟ್ಟ ಹಿನ್ನೆಲೆಯಲ್ಲಿ ಆ ಜಿಲ್ಲೆಗಳು ಲಾಕ್ ಡೌನ್ ಆಗಿವೆ. ಹೀಗಾಗಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಕೆಎಸ್‍ಆರ್‍ಟಿಸಿ ತನ್ನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತ್ತು. ಹೀಗಾಗಿ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಪ್ರಯಾ ಣಿಕರು ಪರದಾಡುತ್ತಿದ್ದ ದೃಶ್ಯ ಸರ್ವೇ ಸಾಮಾನ್ಯ ವಾಗಿತ್ತು. ಖಾಸಗಿ ಬಸ್‍ಗಳು ಬೆರಳೆಣಿಕೆಯಷ್ಟು ಸಂಚರಿಸಿದವು. ಈ ಬಸ್‍ಗಳು ಮೈಸೂರು ಸೇರಿದಂತೆ ಇತರ ಜಿಲ್ಲೆಗಳಿಗೆ ಸಂಚರಿಸಲಿಲ್ಲ. ಮೈಸೂರು ಜಿಲ್ಲೆಗೆ ಒಳಪಡುವ ನಂಜನಗೂಡು ಹಾಗೂ ಟಿ.ನರಸೀಪು ರಕ್ಕೆ ಖಾಸಗಿ ಬಸ್‍ಗಳು ಸಂಚರಿಸಲಿಲ್ಲ. ಜಿಲ್ಲೆಯ ಕೊಳ್ಳೇಗಾಲ, ಯಳಂದೂರು, ಹನೂರು ಗುಂಡ್ಲುಪೇ ಟೆಗೆ ಮಾತ್ರ ಬಸ್‍ಗಳು ಸಂಚರಿಸಿದವು. ಇದರಿಂದ ಜಿಲ್ಲೆ ನೆರೆ ಜಿಲ್ಲೆಗಳ ಸಂಪರ್ಕವನ್ನು ಕಡಿದುಕೊಂಡಂತಾಗಿದೆ.ಮೈಸೂರಿನಿಂದ ಚಾಮರಾಜನಗರಕ್ಕೆ ಬಸ್ ಸಂಚಾರ ಹಾಗೂ ರೈಲು ಸಂಚಾರ ಸ್ಥಗಿತಗೊಂಡಿತ್ತು.
ಹೀಗಾಗಿ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ನೌಕರರು, ನಾಗರೀಕರು ಪರದಾಡು ವಂತಾಯಿತು. ಕೆಲವು ಅಧಿಕಾರಿಗಳು ಸ್ವಂತ ವಾಹನ ದಲ್ಲಿ ಆಗಮಿಸಿದ್ದು ಕಂಡುಬಂತು. ಎಲ್ಲಾ ಅಧಿಕಾರಿಗಳು ಹಾಗೂ ನೌಕರರು ಬಾರದೆ ಇದ್ದುದ್ದರಿಂದ ಜಿಲ್ಲಾಡಳಿತ ಭವನದಲ್ಲಿ ಹಾಜರಾತಿ ಕಡಿಮೆ ಇದ್ದುದ್ದು ಕಂಡುಬಂತು.
ಭಾನುವಾರ ಜನತಾ ಕಫ್ರ್ಯೂ ಆಚರಿಸಿದ್ದ ಜನ ಸೋಮವಾರ ಮನೆಯಿಂದ ಹೊರಬಂದರು. ಬುಧವಾರ ಯುಗಾದಿ ಹಬ್ಬ ಇರುವುದರಿಂದ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದುದು ಕಂಡುಬಂತು.
ಮುಂದುವರೆದ ತಪಾಸಣೆ: ಜಿಲ್ಲೆಯ ಗಡಿ ಭಾಗ ಗಳಲ್ಲಿ ತಪಾಸಣಾ ಕಾರ್ಯ ಈಗಲೂ ಮುಂದು ವರೆದಿದೆ. ಜಿಲ್ಲೆಗೆ ಬರುವ ಎಲ್ಲರನ್ನೂ ತಪಾಸಣೆ ನಡೆಸಲಾಗುತ್ತಿದೆ.
ಬೀದಿ ಬದಿ ಮಾರಾಟ ನಿಷೇಧ: ಜಿಲ್ಲಾ ಕೇಂದ್ರವಾದ ಚಾಮರಾಜನಗರದಲ್ಲಿ ಬೀದಿ ಬದಿಗಳಲ್ಲಿ ತಳ್ಳುಗಾಡಿ ಗಳಲ್ಲಿ ಆಹಾರ ಪದಾರ್ಥ ಮಾರಾಟವನ್ನು ನಗರಸಭೆ ನಿಷೇಧಿಸಿದೆ. ಶನಿವಾರ ರಾತ್ರಿಯಿಂದಲೇ ಈ ನಿಷೇಧ ಜಾರಿಗೊಂಡಿದೆ. ಈ ವಿಷಯವನ್ನು ನಗರಸಭೆ ಅಧಿಕಾರಿಗಳು ಮತ್ತು ನೌಕರರು ರಸ್ತೆ ಬದಿಯಲ್ಲಿ ಆಹಾರ ಪದಾರ್ಥ ಮಾರಾಟ ಮಾಡುವವರಿಗೆ ತಿಳಿಸಿದೆ. ಹೀಗಾಗಿ ಪಾನೀಪುರಿ, ಚುರುಮುರಿ, ಗೋಬಿಮಂಚೂರಿ, ಫಾಸ್ಟ್‍ಫುಡ್ ಸೇರಿದಂತೆ ಇನ್ನಿತರ ಬೀದಿ ಬದಿ ವ್ಯಾಪಾರ ಸ್ಥಗಿತಗೊಂಡಿದೆ.
ಸಭೆ, ಸಮಾರಂಭ ರದ್ದು: ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಾರ್ಚ್ 31ರವರೆಗೆ ನಿಗಧಿ ಆಗಿದ್ದ ಎಲ್ಲಾ ಸಭೆ, ಸಮಾರಂಭಗಳನ್ನು ರದ್ದುಗೊಳಿಸಲಾಗಿದೆ. ಹಾಗೂ ಜಿಲ್ಲಾ ಕಾರ್ಯಾಲಯಕ್ಕೆ ರಜೆ ಘೋಷಿಸಲಾಗಿದೆ ಎಂದು ಪಕ್ಷದ ಜಿಲ್ಲಾ ಅಧ್ಯಕ್ಷ ಆರ್.ಸುಂದರ್ ತಿಳಿಸಿದ್ದಾರೆ.