ನಿರ್ದಿಷ್ಟ ಗುರಿಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ
ಮೈಸೂರು

ನಿರ್ದಿಷ್ಟ ಗುರಿಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ

October 21, 2021

ಮೈಸೂರು, ಅ.20(ವೈಡಿಎಸ್)- ಎಲ್ಲಾ ಕ್ಷೇತ್ರಗಳಲ್ಲೂ ವಿಫುಲ ಅವಕಾಶಗಳಿದ್ದು, ನಿರ್ದಿಷ್ಟ ಗುರಿಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆ ಗಳನ್ನು ಎದುರಿಸಬೇಕು. ಏಕಕಾಲದಲ್ಲಿ ಎಲ್ಲಾ ಕೆಲಸಗಳನ್ನು ಮಾಡುತ್ತೇವೆ ಎಂದು ಗೊಂದಲ ಮಾಡಿಕೊಳ್ಳಬಾರದು ಎಂದು ಕರ್ನಾಟಕ ಪೊಲೀಸ್ ಅಕಾಡೆಮಿ ಉಪ ನಿರ್ದೇಶಕರಾದ ಡಾ.ಸುಮನ್ ಡಿ.ಪೆನ್ನೇ ಕರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಲಕ್ಷ್ಮೀಪುರಂನ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಆವರಣದಲ್ಲಿ ಜ್ಞಾನಬುತ್ತಿ ಸಂಸ್ಥೆಯು ಬುಧವಾರ ಆಯೋ ಜಿಸಿದ್ದ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಮತ್ತು ಪೊಲೀಸ್ ಕಾನ್ಸ್‍ಟೇಬಲ್ ಪರೀಕ್ಷಾ ಉಚಿತ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ಇದು ಸ್ಪರ್ಧಾತ್ಮಕ ಯುಗವಾಗಿದ್ದು, ಎಲ್ಲ ಕ್ಷೇತ್ರದಲ್ಲೂ ಹೆಚ್ಚು ಅವಕಾಶಗಳು ಇರುವುದರಿಂದ ವಿದ್ಯಾರ್ಥಿಗಳು ಎಲ್ಲಾ ರೀತಿಯ ಸ್ಪಧಾತ್ಮಕ ಪರೀಕ್ಷೆಗಳನ್ನು ಎದು ರಿಸಲು ಮುಂದಾಗುತ್ತಿದ್ದಾರೆ. ಆದ್ದರಿಂದ ನಮ್ಮ ಗುರಿ ನಿರ್ದಿಷ್ಟವಾಗಿರಬೇಕು. ಒಂದು ಪರೀಕ್ಷೆ ತೆಗೆದುಕೊಂಡರೆ ಆ ವಿಷಯದ ಕಡೆಗೆ ಹೆಚ್ಚಿನ ಗಮನಹರಿಸಿ, ಆಸಕ್ತಿಯಿಂದ ಅಭ್ಯಾಸಿಸಿ ಯಶಸ್ಸು ಗಳಿಸಬೇಕು. ಗುರಿ ತಲುಪಿದ ಮೇಲೆ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಮತ್ತೊಂದು ಪರೀಕ್ಷೆಗೆ ಸಿದ್ಧತೆ: ಪೊಲೀಸ್ ಪರೀಕ್ಷೆ ಬರೆದು ಅಕಾಡೆಮಿಗೆ ಆಯ್ಕೆ ಯಾದ ನಂತರವೂ ಹಲವು ಮಂದಿ ಅಭ್ಯರ್ಥಿ ಗಳು ಮತ್ತೊಂದು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುತ್ತಾರೆ. ಇದರಿಂದ ಪ್ರಾಯೋ ಗಿಕ ತರಬೇತಿ ಕಳೆದುಕೊಳ್ಳುತ್ತಾರೆ. ಇಂಥ ವರನ್ನು ಕರ್ತವ್ಯಕ್ಕೆ ನಿಯೋಜಿಸಿದಾಗ ಹೇಗೆ ಕೆಲಸ ಮಾಡುತ್ತಾರೆ? ಎಂದು ಪ್ರಶ್ನಿಸಿದ ಅವರು, ನಮ್ಮ ಗುರಿ ನಿರ್ದಿಷ್ಟ ವಾಗಿರಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪಿಎಸ್‍ಐ ಹಾಗೂ ಪೊಲೀಸ್ ಪೇದೆಗಳ ಪರೀಕ್ಷೆಯ ಅಧ್ಯ ಯನ ಪುಸ್ತಕ ಬಿಡುಗಡೆಗೊಳಿಸಲಾಯಿತು.
ಸಾಹಿತಿ ಪ್ರೊ.ಎಂ.ಕೃಷ್ಣೇಗೌಡ, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ, ಮೈವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ, ಎಂ.ಪುನೀತ್, ಡಾ.ಶಿವಪ್ರಸಾದ್, ಪ್ರೊ.ಹೊನ್ನಯ್ಯ, ಪ್ರೊ. ವಿ.ಜಯಪ್ರಕಾಶ್, ರೋಹನ್ ರವಿ ಕುಮಾರ್, ಡಾ.ಬಿ.ಟಿ.ರಘು, ಕೆ.ಆರ್. ವಿಭಾವಸು, ಡಿ.ನವೀನ್ ಪ್ರಸಾದ್, ಜ್ಞಾನ ಬುತ್ತಿ ಕಾರ್ಯದರ್ಶಿ ಹೆಚ್.ಬಾಲಕೃಷ್ಣ, ಕೆಎಸ್‍ಒಯು ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ಸಂಚಾಲಕ ಜೈನಹಳ್ಳಿ ಸತ್ಯ ನಾರಾಯಣಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Translate »