ಕೋವಿಡ್‍ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಿದ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ
ಚಾಮರಾಜನಗರ

ಕೋವಿಡ್‍ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಿದ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ

July 15, 2021

ಚಾಮರಾಜನಗರ, ಜು.14(ಎಸ್‍ಎಸ್)- ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟ ವರ ಅಂತ್ಯಕ್ರಿಯೆ ಮಾಡಿ, ಕೊರೊನಾ ಸೋಂಕಿತರು ಹಾಗೂ ಸಂಬಂಧಿಕರಿಗೆ ಆಪತ್ಭಾಂದವರಾಗಿ ಸೇನಾನಿಗಳಾಗಿ ದುಡಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತ ರಿಗೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅಭಿನಂದನೆ ಸಲ್ಲಿಸಿದರು.

ನಗರದ ವಿಶ್ವ ಹಿಂದೂ ಪರಿಷತ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕೊರೊನಾ ಸಂದರ್ಭ ದಲ್ಲಿ ಸೇನಾನಿಗಳಾಗಿ ದುಡಿದ ಪಕ್ಷದ 60 ಜನರಿಗೆ ಪಕ್ಷದ ಶಲ್ಯ ಹಾಕಿ, ಹಣ್ಣಿನ ಬುಟ್ಟಿ ನೀಡಿ, ಅವರ ಮೇಲೆ ಪುಷ್ಪ ಮಳೆಗೈದ ಕಟೀಲ್ ಅವರು ಹೃತ್ಪೂರ್ವಕವಾಗಿ ಅಭಿನಂದಿಸಿದರು.

ನಳಿನ್‍ಕುಮಾರ್ ಕಟೀಲ್ ಮಾತನಾಡಿ, ಕಳೆದ ನಾಲ್ಕೈದು ತಿಂಗಳಿನಿಂದ ದೇಶದೆ ಲ್ಲೆಡೆ ಕೊರೊನಾ ಭಯದ ನೆರಳು ಆವರಿ ಸಿತ್ತು. ಈ ಪರಿಸ್ಥಿತಿ ಚಾಮರಾಜನಗರ ಜಿಲ್ಲೆ ಯಲ್ಲೂ ಇತ್ತು. ಈ ವೇಳೆಯಲ್ಲಿ 350ಕ್ಕೂ ಹೆಚ್ಚು ಶವಸಂಸ್ಕಾರ ಮಾಡಿದ ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಯಾರೂ ಮಾಡದಂತಹ ಸಾಧನೆಗಳನ್ನು ಮಾಡಿ ನಕ್ಷತ್ರಗಳಾಗಿದ್ದಾರೆ. ಈ ಮೂಲಕ ಭಯ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೊರೊನಾ ಸೋಂಕಿನಿಂದ ಮೃತಪಟ್ಟ ವರನ್ನು ಅಂತ್ಯಕ್ರಿಯೆ ಮಾಡಲಾಗಿದ್ದು, ಇದರ ಸಂಖ್ಯೆ ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚಿದೆ. ಕೊರೊನಾ ಸಂದರ್ಭದಲ್ಲಿ ರಾಜ್ಯದ ಎಲ್ಲೆಡೆ ನಮ್ಮ ಪಕ್ಷದ ಕಾರ್ಯಕರ್ತರು, ಕೊರೊನಾ ಸೋಂಕಿತರ ಶವಸಂಸ್ಕಾರ ಕಾರ್ಯ ಮಾಡಿ ದ್ದಾರೆ. ಇತರ ಪಕ್ಷಗಳು ಬೇರೆ ಬೇರೆ ರೀತಿ ಯಲ್ಲಿ ಟೀಕೆಯಲ್ಲಿ ತೊಡಗಿದ್ದರೂ ಸಹ ಇದ್ಯಾ ವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ ಎಂದರು.

ಕೊರೊನಾದಿಂದ ಜನರು ಮೃತಪಟ್ಟಾಗ ಅವರ ಕುಟುಂಬಸ್ಥರು, ಬಂಧುಗಳು, ಸ್ನೇಹಿ ತರು ಶವವನ್ನು ಮುಟ್ಟಲಾಗದಂತಹ ಪರಿಸ್ಥಿತಿ ಇತ್ತು. ಇಂತಹ ಸಂದರ್ಭದಲ್ಲಿ ಅಂತ್ಯ ಕ್ರಿಯೆ ನಡೆಸಿ ಮೋಕ್ಷ ಕೊಡಿಸುವಂತಹ ಕೆಲಸ ಮಾಡಿರುವುದನ್ನು ಪ್ರತಿಯೊಬ್ಬರೂ ಮೆಚ್ಚಲೇಬೇಕು. ಈ ಕಾರ್ಯದಲ್ಲಿ ನಿರತ ರಾದ ಪ್ರತಿಯೊಬ್ಬರನ್ನೂ ಪಕ್ಷ ಗುರುತಿಸ ಲಿದೆ ಎಂದು ಕಟೀಲ್ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಸಂಘ ಟನಾ ಪ್ರಧಾನ ಕಾರ್ಯದರ್ಶಿ ಅರುಣ್, ಜಿಲ್ಲಾ ಅಧ್ಯಕ್ಷ ಆರ್.ಸುಂದರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಶಾಸಕ ಸಿ.ಎಸ್. ನಿರಂಜನ್ ಕುಮಾರ್, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ನಗರ ಸಭೆ ಅಧ್ಯಕ್ಷೆ ಆಶಾ ನಟರಾಜು, ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಿ.ನಾಗಶ್ರೀ ಪ್ರತಾಪ್, ಮಂಗಲ ಶಿವಕುಮಾರ್, ನಾರಾಯಣ ಪ್ರಸಾದ್, ಮುಖಂಡರಾದ ಡಾ.ಬಿ.ಆರ್. ಬಾಬು, ಮಲ್ಲೇಶ್, ಪಿ.ವೃಷಭೇಂದ್ರಪ್ಪ, ನಿಜಗುಣ ರಾಜು, ಪ್ರಣಮ್, ಎಂಆರ್‍ಎಫ್ ಮಹೇಶ್, ದತ್ತೇಶ್ ಕುಮಾರ್, ಬಸವಣ್ಣ ಇತರರಿದ್ದರು.

Translate »