ಮೈಸೂರಲ್ಲಿ ಕೊರೊನಾ ಸೋಂಕು ಮುಕ್ತ ಸ್ವಚ್ಛತಾ ವ್ಯವಸ್ಥೆ!
ಮೈಸೂರು

ಮೈಸೂರಲ್ಲಿ ಕೊರೊನಾ ಸೋಂಕು ಮುಕ್ತ ಸ್ವಚ್ಛತಾ ವ್ಯವಸ್ಥೆ!

May 19, 2020

ಮೈಸೂರು, ಮೇ 18(ಆರ್‍ಕೆ)- ನೋವೆಲ್ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿರುವ ಕೊರೊನಾ ವಾರಿಯರ್ಸ್ ಸ್ವಯಂಸೇವಕರು, ಟ್ಯಾಪ್(ನಲ್ಲಿ) ಬಳಸದೇ ಕೈ ತೊಳೆದುಕೊಳ್ಳುವ ವಿನೂತನ ವ್ಯವಸ್ಥೆಯ ಪ್ರಾತ್ಯಕ್ಷಿಕೆ ನೀಡುತ್ತಿದ್ದಾರೆ.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಆರಂಭವಾದ ಲಾಕ್‍ಡೌನ್ ಸಂದರ್ಭ ಕೊರೊನಾ ವೈರಸ್ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜಾಗೃತಿ ಮೂಡಿಸಲು ಮೈಸೂರಲ್ಲಿ ವಾರ್ತಾ ಮತ್ತು ಪ್ರಸಾರ ಇಲಾಖೆ, ಕಾರ್ಮಿಕ ಇಲಾಖೆಯಿಂದ ಕೊರೊನಾ ವಾರಿಯರ್ಸ್ ತಂಡಗಳನ್ನು ರಚಿಸಲಾಗಿತ್ತು.

ಸುಮಾರು 70 ಮಂದಿ ಯುವಕರ ಪೈಕಿ ತಲಾ 15 ಮಂದಿಯಂತೆ ಒಂದು ತಂಡಗಳನ್ನು ರಚಿಸಲಾಗಿತ್ತು. ಕಳೆದ 2 ತಿಂಗಳಿಂದ ಈ ಯುವಕ ಯುವತಿಯರು ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗ್ರಾಮಾಂ ತರ ಪ್ರದೇಶಗಳಲ್ಲೂ ಅಲ್ಲಲ್ಲಿ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸುತ್ತಾ ಬಂದಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ನೀರಿನ ಟ್ಯಾಪ್‍ಗಳಿಂದ ಕೈ ತೊಳೆಯುವುದನ್ನು ತಪ್ಪಿಸಲು ಕೊರೊನಾ ವಾರಿ ಯರ್ಸ್ ವಿನೂತನ ಪದ್ಧತಿ ಬಳಸುವ ಬಗ್ಗೆಯೂ ಇಂದು ಮೈಸೂರಿನ ದಾಸಪ್ಪ ಸರ್ಕಲ್ ಬಳಿಯ ವಾರ್ತಾ ಮತ್ತು ಪ್ರಸಾರ ಇಲಾಖೆ ಕಚೇರಿ ಆವರಣದಲ್ಲಿ ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು.

ಎರಡು ಬದಿಯಲ್ಲಿ ಮರದ ಕಂಬಗಳನ್ನು 4 ಅಡಿ ಎತ್ತರಕ್ಕೆ ನೆಟ್ಟು ಅದರ ಮೇಲೆ ಮತ್ತೊಂದು ಮರದ ಕಂಬ ಅಳವಡಿಸಿ(ಬಾಕ್ಸ್ ಆಕಾರದ ತೋರಣದಂತೆ) ಅದರ ಮಧ್ಯ ಭಾಗಕ್ಕೆ ಪ್ಲಾಸ್ಟಿಕ್ ಆಯಿಲ್ ಡಬ್ಬವನ್ನು ನೇತು ಹಾಕಲಾಗುತ್ತದೆ. ಅದರ ಮುಂದಿನ ಭಾಗದಲ್ಲಿ ಸಣ್ಣರಂದ್ರ ಮಾಡಿ ನೀರನ್ನು ತುಂಬಲಾಗುತ್ತದೆ. ಡಬ್ಬದ ಒಂದು ಭಾಗಕ್ಕೆ ಪ್ಲಾಸ್ಟಿಕ್ ದಾರದಿಂದ ಕಟ್ಟಿ ಅದೇ ದಾರದಿಂದ ಸಣ್ಣ ಕಡ್ಡಿ(ಕೋಲು)ಯನ್ನು ಕಟ್ಟಿ ಬಲ ಭಾಗದ ಮರದ ಕಂಬದ ಬಳಿ ಬಿಡಬೇಕು, ಡಬ್ಬದ್ದ ಎಡಬದಿ ಒಂದು ಸೋಪ ಅನ್ನೂ ಕಟ್ಟಿ ನೇತು ಹಾಕ ಲಾಗುತ್ತದೆ. ಕೈ ತೊಳೆದುಕೊಳ್ಳಲು ಬಲಭಾಗದಲ್ಲಿನ ಕೋಲನ್ನು ಬಲಗಾಲಿನಿಂದ ಅದುಮಿದರೆ ದಾರ ದಿಂದ ಕಟ್ಟಿರುವ ನೀರಿನ ಡಬ್ಬ ಮುಂದಕ್ಕೆ ಭಾಗಿ ಅದರಲ್ಲಿರುವ ನೀರು ರಂಧ್ರದಿಂದ ಸುರಿಯುತ್ತದೆ. ಅದರಲ್ಲಿ ಕೈತೊಳೆದುಕೊಂಡು ಎಡಭಾಗದಲ್ಲಿ ನೇತು ಹಾಕಿರುವ ಸೋಪು ಬಳಸಿ ನಂತರವೂ ನೀರಿನಿಂದ ಮತ್ತೆ ಕೈತೊಳೆದುಕೊಳ್ಳಬಹುದಾಗಿದೆ.

ಶಾಲಾ-ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಈ ಸರಳ ವಿಧಾನ ಅಳವಡಿಸಿಕೊಂಡರೆ, ನೀರಿನ ಟ್ಯಾಪ್ ಅನ್ನು ಮುಟ್ಟಿ, ಈ ಮೂಲಕವೂ ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟಬಹುದಾಗಿದೆ. ಅಲ್ಲದೆ ಕಡಿಮೆ ನೀರು ಬಳಸುವುದರಿಂದ ನೀರಿನ ಉಳಿತಾಯ ವಾಗಲಿದೆ. ಕೈ ತೊಳೆಯುವ ನೀರನ್ನು ಗಿಡಗಂಟಿ ಗಳಿಗೂ ಬಳಸಬಹುದು ಎಂಬುದನ್ನು ಕೊರೊನಾ ವಾರಿಯರ್ಸ್ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.

ಈ ಸಂದರ್ಭ ಆರೋಗ್ಯ ಇಲಾಖೆಯ ಜಿಲ್ಲಾ ವೈದ್ಯಕೀಯ ಶಿಕ್ಷಣ ಅಧಿಕಾರಿ ಡಾ. ಪ್ರಕಾಶ, ವಾರ್ತಾ ಮತ್ತು ಪ್ರಸಾರ ಇಲಾಖೆ ಸಹಾಯಕ ನಿರ್ದೇಶಕ ಆರ್. ರಾಜು ಹಾಜರಿದ್ದು, ಕೊರೊನಾ ವೈರಸ್ ಮಾರ ಣಾಂತಿಕ ಸೋಂಕು ತಡೆಯಲು ಕಬ್ಬಿಣ ಅಥವಾ ಸ್ಟೀಲ್ ಟ್ಯಾಪ್‍ಗಳನ್ನು ಬಳಸುವುದನ್ನು ತಪ್ಪಿಸಲು ಮರ ಬಳಸಿದ ಈ ವಿನೂತನ ವ್ಯವಸ್ಥೆಯನ್ನು ಬಳಸಿಕೊಳ್ಳು ವುದು ಉತ್ತಮ ಎಂದು ಸಲಹೆ ನೀಡಿದರು.

Translate »