ಕೊರೊನಾ ನಿಯಂತ್ರಣದಲ್ಲಿದೆ;  ಆತಂಕಪಡುವ ಅಗತ್ಯವಿಲ್ಲ
News

ಕೊರೊನಾ ನಿಯಂತ್ರಣದಲ್ಲಿದೆ; ಆತಂಕಪಡುವ ಅಗತ್ಯವಿಲ್ಲ

June 7, 2022

ಬೆಂಗಳೂರು, ಜೂ.6(ಕೆಎಂಶಿ)- ಕೋವಿಡ್ ಸಂಪೂರ್ಣ ನಿಯಂತ್ರಣದಲ್ಲಿದ್ದು, ಅನಗತ್ಯವಾಗಿ ಯಾರೂ ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಪ್ರಕ ರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಹಿನ್ನೆಲೆ ಯಲ್ಲಿ ಕೋವಿಡ್ ನಿರ್ವಹಣೆ ಬಗ್ಗೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಸಿ, ಜಿಲ್ಲೆಗಳಲ್ಲಿನ ಪರಿಸ್ಥಿತಿಯ ಬಗ್ಗೆ ವರದಿ ಸಲ್ಲಿಸಲಿದ್ದಾರೆ. ಅದರ ಆಧಾರದ ಮೇಲೆ 2-3 ದಿನಗಳಲ್ಲಿ ತೀರ್ಮಾನಿಸಲಾಗುವುದು ಎಂದರು.

ಗೊಂದಲ ಸೃಷ್ಟಿ:ಪಠ್ಯ ಪರಿಷ್ಕರಣೆ ಸಮಿತಿ ವಿಸರ್ಜನೆ ಮೊದಲ ಬಾರಿ ಆಗುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲದರಲ್ಲೂ ರಾಜಕಾರಣ ಮಾಡುತ್ತಾರೆ. ರಾಜ್ಯದಲ್ಲಿ ಈ ಬಗ್ಗೆ ಹಲವಾರು ಬಾರಿ ಬದಲಾವಣೆಗಳಾಗಿವೆ. ಅವರ ಕಾಲದಲ್ಲಿಯೂ ಹೀಗೆ ಆಗಿದೆ. ಆಗೇನು ಅವರು ಪಠ್ಯ ಪುಸ್ತಕ ಪರಿಷ್ಕರಣೆ ಹಿಂತೆಗೆದುಕೊಂಡರೆ? ಸುಮ್ಮನೆ ಗೊಂದಲ ಸೃಷ್ಟಿ ಮಾಡಬಾರದು. ನಾವು ಈ ಬಗ್ಗೆ ಮುಕ್ತವಾಗಿದ್ದೇವೆ. ತಪ್ಪುಗಳನ್ನು ಸರಿಪಡಿಸಲು ಸಿದ್ಧರಿದ್ದೇವೆ. ಅದ್ಯಾವುದರ ಬಗ್ಗೆಯೇ ಆಗಲಿ ಸರಿಪಡಿಸಿ ಮರುಮುದ್ರಣ ಮಾಡಲಾಗುವುದು. ಪೀರ್ ಪಾಷಾ ದರ್ಗಾ ಕುರಿತು ಸಂಶೋಧನೆ ಮಾಡಿಸುವಂತೆ ಸ್ವಾಮೀಜಿಗಳು ಮನವಿ ನೀಡಿದ್ದಾರೆ. ಪುರಾತತ್ವ ಇಲಾಖೆ ಪರಿಶೀಲನೆ ನಡೆಸಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ತಲಾ 5 ಲಕ್ಷ ರೂ.ಗಳ ಪರಿಹಾರ: ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು ಮೂವರು ಸಾವಿಗೀಡಾಗಿರುವವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 5 ಲಕ್ಷ ರೂ.ಗಳ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ತಿಳಿಸಿದರು.

ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ಸಂಪೂರ್ಣ ತನಿಖೆ ಮಾಡಿ ತಾಂತ್ರಿಕ ವರದಿ ಸಲ್ಲಿಸುವಂತೆ ಕೆ. ಡಬ್ಲ್ಯೂ. ಎಸ್.ಎಸ್.ಬಿ ಮುಖ್ಯ ಇಂಜಿನಿಯರ್‍ಗೆ ಸೂಚಿಸಲಾಗಿದೆ. ರಾಯಚೂರಿನ ಎಲ್ಲಾ ವಾರ್ಡ್‍ಗಳ ನೀರಿನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಬೇಕು. ಕುಡಿಯುವ ನೀರಿನ ಸುರಕ್ಷತೆಯ ಬಗ್ಗೆ ಪ್ರಮಾಣೀಕರಣವಾಗಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಅಧಿಕಾರಿಗಳ ಲೋಪದೋಷವಿದೆಯೇ ಎಂಬ ಬಗ್ಗೆಯೂ ಅಲ್ಲಿಯ ಡಿವೈಎಸ್ಪಿ ನೇತೃತ್ವದಲ್ಲಿ ಪೆÇಲೀಸ್ ತನಿಖೆಯನ್ನು ಕೂಡ ಕೈಗೊಳ್ಳಲಾಗುವುದು. ತಪ್ಪಿತಸ್ಥರಿದ್ದರೆ ಅವರ ಮೇಲೆ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

 

Translate »