ಬೆಂಗಳೂರು, ಮೇ 24-ರಾಜ್ಯದಲ್ಲಿ ಮಹಾರಾಷ್ಟ್ರ ಜಾಡ್ಯ ಮುಂದುವರೆದಿದ್ದು, ಭಾನುವಾರ ಪತ್ತೆಯಾದ 130 ಪ್ರಕರಣ ಗಳ ಪೈಕಿ 100 ಮಂದಿ ಮಹಾರಾಷ್ಟ್ರ ದಿಂದ ಬಂದವರಾಗಿದ್ದಾರೆ. ಕೊರೊನಾ ಸೋಂಕು 2 ಸಾವಿರ ಗಡಿ ದಾಟಿದ್ದು, ಸೋಂಕಿನ ಸಂಖ್ಯೆ 2089ಕ್ಕೆ ಏರಿದೆ.
ಕೊಡಗಿನಲ್ಲಿ ಮಹಾರಾಷ್ಟ್ರದಿಂದ ಬಂದ 26 ವರ್ಷದ ಯುವಕನಿಗೆ ಸೋಂಕು ಪತ್ತೆ ಯಾಗಿದ್ದು, ಅಲ್ಲಿ ಸೋಂಕಿತರ ಸಂಖ್ಯೆ 3ಕ್ಕೆ ಏರಿದೆ. ಈಗಾಗಲೇ ಓರ್ವ ಸೋಂಕಿತ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದು, ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಡ್ಯದಲ್ಲಿ ಇಂದು 15 ಮಂದಿಗೆ ಸೋಂಕು ತಗುಲಿದ್ದು, ಇವರಲ್ಲಿ 12 ಮಂದಿ ಮಹಾರಾಷ್ಟ್ರದಿಂದ ಬಂದವರು. ಈ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 252ಕ್ಕೆ ಏರಿದ್ದು, ಈಗಾಗಲೇ 26 ಮಂದಿ ಗುಣ ಮುಖರಾಗಿದ್ದು, 226 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಸನದಲ್ಲಿ ಇಂದು 14 ಮಂದಿಗೆ ಸೋಂಕು ಪತ್ತೆಯಾಗಿದ್ದು, ಆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 98ಕ್ಕೆ ಏರಿದೆ. ಚಿಕ್ಕಬಳ್ಳಾಪುರದಲ್ಲಿ 27 ಮಂದಿಗೆ ಸೋಂಕು ತಗುಲಿದ್ದರೆ, ಯಾದಗಿರಿ ಯಲ್ಲಿ 24, ಉಡುಪಿಯಲ್ಲಿ 23, ಬೀದರ್ ಮತ್ತು ಕಲಬುರಗಿಯಲ್ಲಿ ತಲಾ 6, ದಾವಣಗೆರೆ ಯಲ್ಲಿ 4, ಉತ್ತರ ಕನ್ನಡ, ಶಿವಮೊಗ್ಗ ಮತ್ತು ತುಮಕೂರಿನಲ್ಲಿ ತಲಾ 2, ಬೆಂಗಳೂರು, ವಿಜಯಪುರ ಮತ್ತು ದಕ್ಷಿಣ ಕನ್ನಡದಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ.
ರಾಜ್ಯದಲ್ಲಿ ಈಗಾಗಲೇ 654 ಮಂದಿ ಗುಣಮುಖರಾಗಿದ್ದು, 42 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇಂದು ಪತ್ತೆಯಾದ ಸೋಂಕಿತರ ಪೈಕಿ ಇಬ್ಬರು ವಿದೇಶದಿಂದ ಬಂದವ ರಾದರೆ, 105 ಮಂದಿ ಹೊರ ರಾಜ್ಯದವರು. ರಾಜ್ಯದ ವಿವಿಧ ಜಿಲ್ಲೆಗಳ ಕೋವಿಡ್ ಆಸ್ಪತ್ರೆ ಗಳಲ್ಲಿ 1391 ಮಂದಿ ಚಿಕಿತ್ಸೆ ಪಡೆಯು ತ್ತಿದ್ದಾರೆ. ಸೋಂಕಿತರ ಪ್ರಥಮ ಸಂಪರ್ಕದಲ್ಲಿದ್ದ 12,802 ಮತ್ತು ದ್ವಿತೀಯ ಸಂಪರ್ಕದ 13,341 ಮಂದಿಯನ್ನು ಕ್ವಾರಂಟೈನ್‍ನಲ್ಲಿಡ ಲಾಗಿದೆ. ಜಕಾರ್ತ, ಸಿಂಗಪೂರ್, ಆಸ್ಟ್ರೇಲಿಯಾ ಮತ್ತು ಯುಎಇ ಯಿಂದ ಕ್ರಮವಾಗಿ 214, 148, 307 ಮತ್ತು 108 ಮಂದಿ ಸೇರಿದಂತೆ ಒಟ್ಟು 777 ಮಂದಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಅವರೆಲ್ಲರನ್ನೂ ಕ್ವಾರಂಟೈನ್‍ನಲ್ಲಿಡಲಾಗಿದೆ.
ಹಾಸನದ ಪೆÇಲೀಸ್ ಪೇದೆಯಲ್ಲಿ ವೈರಸ್: 2 ಏರಿಯಾ ಸೀಲ್‍ಡೌನ್, 100ಕ್ಕೂ ಹೆಚ್ಚು ಪೆÇಲೀಸರು ಕ್ವಾರಂಟೈನ್
ಹಾಸನ, ಮೇ 24- ಪೆÇಲೀಸ್ ಪೇದೆ ಯೊಬ್ಬರಲ್ಲಿ ಮಹಾಮಾರಿ ಕೊರೊನಾ ವೈರಸ್ ಇರುವುದು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಹಾಸನದ 2 ಏರಿಯಾ ಗಳನ್ನು ಸೀಲ್‍ಡೌನ್ ಮಾಡಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಪೆÇಲೀಸ್ ಪೇದೆ ಹಾಗೂ ಅರಳಿಕಟ್ಟೆ ಪಕ್ಕದ ರಸ್ತೆಯ ನಿವಾಸಿ ಸೇರಿದಂತೆ ಈವ ರೆಗೂ ಹಾಸನದಲ್ಲಿ 14 ಕೊರೊನಾ ಪಾಸಿ ಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಯಲ್ಲಿ ಹಾಸನದ ಉತ್ತರ ಬಡಾವಣೆ ಹಾಗೂ ಇಂದಿರಾನಗರವನ್ನು ಸೀಲ್‍ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕೊರೊನಾ ದೃಢಪಟ್ಟಿರುವ ಪೆÇಲೀಸ್ ಪೇದೆ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವ ಹಿಸಿ ಹಾಸನಕ್ಕೆ ತೆರಳಿದ್ದರು ಎಂದು ಹೇಳ ಲಾಗುತ್ತಿದೆ. ಅಲ್ಲದೆ ಜಿಲ್ಲೆಯ ಪೆÇಲೀಸ್ ತರಬೇತಿ ಶಾಲೆಗೂ ಇವರು ಭೇಟಿ ನೀಡಿದ್ದು, ಇದೀಗ ನೂರಕ್ಕೂ ಹೆಚ್ಚು ಪೆÇಲೀಸರನ್ನು ಕ್ವಾರಂಟೈನ್‍ನಲ್ಲಿರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರವಾಗಿ ಮಾಹಿತಿ ನೀಡಿರುವ ಜಿಲ್ಲಾಧಿಕಾರಿಗಳು 2 ಏರಿಯಾಗಳನ್ನು ಕಂಟೈನ್‍ಮೆಂಟ್ ಝೋನ್ ಎಂದು ಘೋಷಣೆ ಮಾಡಿ ದ್ದಾರೆ. ಇಂದಿನಿಂದ 28 ದಿನಗಳ ಕಾಲ ಈ ರಸ್ತೆಗಳನ್ನು ಸೀಲ್‍ಡೌನ್ ಮಾಡಲಾ ಗಿದೆ. ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತವೇ ಪೂರೈಕೆ ಮಾಡಲಿದ್ದು, ಜನರು ಬಹಳ ಎಚ್ಚರದಿಂದ ಇರಬೇಕೆಂದು ಹೇಳಿದ್ದಾರೆ.
4 ಕೊರೊನಾ ಲಸಿಕೆ ಭಾರತದಲ್ಲಿ ಶೀಘ್ರವೇ ಕ್ಲಿನಿಕಲ್ ಟ್ರೈಲ್ ಹಂತಕ್ಕೆ
ನವದೆಹಲಿ: 4 ಕೊರೊನಾ ಲಸಿಕೆಗೆ ಭಾರತ ದಲ್ಲಿ ಶೀಘ್ರವೇ ಕ್ಲಿನಿಕಲ್ ಟ್ರೈಲ್ ಹಂತಕ್ಕೆ ತಲುಪಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ. ಕೊರೊನಾ ತಡೆಗಾಗಿ ಸಿದ್ಧಪಡಿಸಲಾಗಿ ರುವ 14 ಲಸಿಕೆಗಳ ಪೈಕಿ 4 ಲಸಿಕೆಗಳು ಶೀಘ್ರವೇ ಕ್ಲಿನಿಕಲ್ ಟ್ರೈಲ್‍ಗೆ ಹಂತಕ್ಕೆ ಹೋಗಲಿವೆ ಎಂದು ಬಿಜೆಪಿ ನಾಯಕ ಜಿವಿಎಲ್ ನರಸಿಂಹರಾವ್ ಜೊತೆಗೆ ನಡೆಸಿದ ಸಾಮಾಜಿಕ ಜಾಲತಾಣ ಸಂವಹನದಲ್ಲಿ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ. ಆರೋಗ್ಯ ಸಚಿವರೊಂದಿಗೆ ನಡೆದ ಮಾತುಕತೆಯಲ್ಲಿ ಬಿಜೆಪಿ ನಾಯಕ ನರಸಿಂಹರಾವ್, ದೇಶದಲ್ಲಿ ಕೊರೊನಾ ತಡೆಗೆ ಸಿದ್ಧವಾಗುತ್ತಿರುವ ಲಸಿಕೆಗಳ ಬಗ್ಗೆ ಕೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹರ್ಷವರ್ಧನ್, 100ಕ್ಕೂ ಹೆಚ್ಚಿನ ಲಸಿಕೆಗಳು ವಿವಿಧ ಹಂತಗಳ ಪ್ರಯೋಗಗಳಲ್ಲಿವೆ. ವಿಶ್ವ ಆರೋಗ್ಯ ಸಂಸ್ಥೆ ಈ ಪ್ರಯತ್ನಗಳಿಗೆ ಸಹಕರಿಸುತ್ತಿದೆ. ಭಾರತವೂ ಸಕ್ರಿಯವಾಗಿ ಇದಕ್ಕೆ ಕೊಡುಗೆ ನೀಡುತ್ತಿದೆ. ಈಗಲೇ ಈ ಕೊರೋನಾ ರೋಗಕ್ಕೆ ಲಸಿಕೆ ಮದ್ದು ಸಿಗುತ್ತದೆ ಎಂಬುದು ಖಾತ್ರಿ ಇಲ್ಲ. ಕೊರೋನಾಗೆ ಲಸಿಕೆ ಕಂಡುಹಿಡಿಯುವುದು ದೀರ್ಘಕಾಲಿಕ ಕೆಲಸ ಎಂದು ಹರ್ಷವರ್ಧನ್ ಹೇಳಿದ್ದಾರೆ.
ವಿಶ್ವದಲ್ಲಿ 3.42 ಲಕ್ಷ ಮಂದಿ ಬಲಿ, 54 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ
ಮಾಸ್ಕೋ,ಮೇ24-ವಿಶ್ವಾದ್ಯಂತ ಕೊರೊನಾಗೆ ಈವ ರೆಗೂ 3.42 ಲಕ್ಷ ಮಂದಿ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 54 ಲಕ್ಷಕ್ಕೆ ಏರಿಕೆಯಾಗಿದೆ. ವಿವಿಧ ರಾಷ್ಟ್ರಗಳಲ್ಲಿ ಒಟ್ಟು 53,09,698 ಮಂದಿಗೆ ಸೋಂಕು ತಗುಲಿದ್ದು, 3,42,078 ಜನರು ಮೃತಪಟ್ಟಿದ್ದಾರೆಂದು ಜಾನ್ಸ್ ಹಾಪ್ಕಿನ್ಸ್ ವಿವಿ ವರದಿ ತಿಳಿಸಿದೆ. 51,03,006 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು 3,33,401 ಜನರು ಸಾವನ್ನಪ್ಪಿದ್ದಾರೆ.