ಕೊರೊನಾ ತಡೆಗೆ ರಾಜ್ಯ ಸರ್ಕಾರದಿಂದ ಮುನ್ನೆಚ್ಚರಿಕೆ: ಬೋಪಯ್ಯ
ಕೊಡಗು

ಕೊರೊನಾ ತಡೆಗೆ ರಾಜ್ಯ ಸರ್ಕಾರದಿಂದ ಮುನ್ನೆಚ್ಚರಿಕೆ: ಬೋಪಯ್ಯ

March 17, 2020

ವಿರಾಜಪೇಟೆ,ಮಾ.16-ರಾಜ್ಯದಲ್ಲಿ ಈಗಾಗಲೇ ಕೊರೊನಾ ವೈರಸ್ ಸೋಂ ಕು ತಡೆಗೆ ಸರ್ಕಾರ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದರು.

ಇಲ್ಲಿನ ಪಪಂ ಪುರಭವನದಲ್ಲಿ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಪಪಂ, ತಾಲೂಕು ಕಚೇರಿ, ಸ್ಥಳೀಯ ಮುಖ್ಯ ವೈದ್ಯರು ಹಾಗೂ ನಾಗರಿಕರ ಸಭೆಯಲ್ಲಿ ಮಾತನಾಡಿದ ಅವರು, ವಿಶ್ವ ದಾದ್ಯಂತ ವ್ಯಾಪಿಸಿರುವ ಈ ಕೊರೊನಾ ವೈರಸ್ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಈಗಾಗಲೇ ರಾಜ್ಯ ಸರ್ಕಾರ ಕೊರೊನಾ ತಡೆಗೆ ಸೂಕ್ತ ಕ್ರಮ ಕೈಗೊಂಡಿದೆ ಎಂದರು.

ತಾಲೂಕು ವೈದ್ಯಾಧಿಕಾರಿ ಯತಿರಾಜ್ ಮಾತನಾಡಿ, ಕೊರೊನಾ ವೈರಸ್‍ನಿಂದ ನಿಮ್ಮನ್ನು ನೀವೆ ರಕ್ಷಿಸಿಕೊಳ್ಳಬೇಕು. ಕೆಮ್ಮು, ಜ್ವರ ಹಾಗೂ ಉಸಿರಾಟದ ತೊಂದರೆ ಇದ್ದಲ್ಲಿ ತುರ್ತಾಗಿ ವೈದ್ಯರ ಸಲಹೆ ಪಡೆ ಯುವಂತೆ ತಿಳಿಸಿದ ಅವರು, ವಿದೇಶ ದಿಂದ ಜಿಲ್ಲೆಗೆ ಆಗಮಿಸುವ ಭಾರತೀ ಯರು ಹಾಗೂ ವಿದೇಶಿಗರನ್ನು ರೋಗದ ಲಕ್ಷಣವಿರುವ ಬಗ್ಗೆ ತಪಾಸಣೆ ನಡೆಸ ಲಾಗುವುದು. ಈ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸಲಾಗುವುದು ಎಂದರು.
ತಾಲೂಕು ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ ಮಾತನಾಡಿ, 2019ರ ಡಿ.31ರಂದು ಚೀನಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕೊರೊನಾ ಇದೀಗ ವಿಶ್ವದ ಎಲ್ಲಾ ದೇಶಗಳಿಗೂ ವ್ಯಾಪಿಸಿದೆ. ಹೀಗಾಗಿ ಕೊರೊನಾ ವೈರಸ್ ಹರಡ ದಂತೆ ತಡೆಯಲು ಆಗಾಗ್ಗೆ ಸಾಬೂನಿಂದ ಕೈ ತೊಳೆಯಬೇಕು. ಕೈ ಸ್ವಚ್ಛವಾಗಿದ್ದರೂ ಮತ್ತೆ ಮತ್ತೆ ತೊಳೆದುಕೊಳ್ಳಬೇಕು. ಕೆಮ್ಮು ಬಂದಾಗ ಮತ್ತು ಸೀನುವಾಗ ಮುಗು ಮತ್ತು ಬಾಯಿ ಮುಚ್ಚಿಕೊಳ್ಳಬೇಕು.

ರೋಗದ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು. ಇದಕ್ಕಾಗಿ ಸರ್ಕಾರಿ ಆಸ್ಪತ್ರೆಯಲ್ಲಿ 5 ಕೊಠಡಿಗಳನ್ನು ಮಿಸಲಿರಿಸಲಾಗಿದೆ ಎಂದರು.

ಪಶುವೈದ್ಯಾಧಿಕಾರಿ ಡಾ.ಲತಾ ಮಾತ ನಾಡಿ, ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿ ಕೊಂಡಿದ್ದು, ಈ ಸಂಬಂಧ ಕೊಡಗಿನ ಗಡಿಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.

ಹಿರಿಯ ವೈದ್ಯ ಡಾ.ಕಾರ್ಯಪ್ಪ, ಡಾ. ಫಾತೀಮ ಕಾರ್ಯಪ್ಪ, ಡಾ.ನರಸಿಂಹನ್, ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಸುಬ್ರ ಮಣಿ, ಸಿಪಿಐ ಕ್ಯಾತೇಗೌಡ ಸಭೆಯನ್ನು ದ್ದೇಶಿಸಿ ಮಾತನಾಡಿದರು.

ಸಭೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್, ಸದಸ್ಯ ರಾದ ಎಂ.ಕೆ.ದೇಚಮ್ಮ, ಸಿ.ಕೆ.ಪೃಥ್ವಿನಾಥ್, ಡಿ.ಪಿ.ರಾಜೇಶ್, ಮಹಮದ್ ರಫಿ, ರಂಜಿ ಪುಣಚ್ಚ, ಕೊಲತಂಡ ಬೋಪಯ್ಯ, ಎಂ.ಎಂ.ಶಶಿಧರನ್, ಏಜಾಜ್ ಅಹ್ಮದ್, ಠಾಣಾಧಿಕಾರಿ ಮರಿಸ್ವಾಮಿ, ಸೆಸ್ಕಾಂನ ಶಿವನೇಗೌಡ ಪಾಟೀಲ್, ಲೋಕೋಪ ಯೋಗಿ ಇಲಾಖೆ ಸಹಾಯಕ ಅಭಿಯಂ ತರ ಎಂ.ಇ.ಸುರೇಶ್, ದಲಿತ ಸಮಿತಿ ವೀರಭದ್ರಯ್ಯ, ಪಳನಿ ಪ್ರಕಾಶ್ ಮುಂತಾ ದವರಿದ್ದರು.

Translate »