ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6061ಕ್ಕೆ ಇಳಿಕೆ
ಮೈಸೂರು

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6061ಕ್ಕೆ ಇಳಿಕೆ

January 30, 2021

ಮೈಸೂರು,ಜ.29(ವೈಡಿಎಸ್)-ರಾಜ್ಯದಲ್ಲಿ ಶುಕ್ರವಾರ ಕೊರೊನಾ ಸೋಂಕಿಗೆ ಒಳಗಾದವರಿಗಿಂತ ಸೋಂಕಿನಿಂದ ಗುಣವಾದವರ ಸಂಖ್ಯೆಯೇ ಹೆಚ್ಚಿತ್ತು.  ಬಾಗಲ ಕೋಟೆ, ಕೊಪ್ಪಳ, ರಾಮನಗರ, ಯಾದಗಿರಿ ಜಿಲ್ಲೆಗಳಲ್ಲಿ ಇಂದು ಒಂದೂ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ರಾಜ್ಯದಲ್ಲಿಂದು ಕೊರೊನಾದಿಂದ ಇಬ್ಬರಷ್ಟೇ ಸಾವನ್ನಪ್ಪಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಶುಕ್ರವಾರ 30 ಮಂದಿಗೆ ಸೋಂಕು ತಗುಲಿದ್ದು, 29 ಸೋಂಕಿ ತರು ಗುಣಮುಖರಾಗಿದ್ದಾರೆ. ಒಂದೂ ಸಾವಿನ ಪ್ರಕರಣ ವರದಿಯಾಗಿಲ್ಲ. ಇದರೊಂ ದಿಗೆ ಜಿಲ್ಲೆಯಲ್ಲಿನ ಸೋಂಕಿತರ ಸಂಖ್ಯೆ 53, 348ಕ್ಕೆ ಏರಿಕೆಯಾಗಿದೆ. ಈವರೆಗೆ 52,109 ಮಂದಿಗೆ ಗುಣ ವಾಗಿದೆ. ಈವರೆಗೆ 1,026 ಮಂದಿ ಸಾವನ್ನಪ್ಪಿದಂತಾಗಿದೆ. ಇನ್ನೂ 213 ಸಕ್ರಿಯ ಪ್ರಕರಣಗಳಿವೆ. ಇವರಲ್ಲಿ 69 ಮಂದಿ ಸೋಂಕಿ ತರು ಮನೆಯಲ್ಲೇ ಶುಶ್ರೂಷೆ ಪಡೆಯುತ್ತಿದ್ದರೆ, ಸರ್ಕಾರಿ ಆಸ್ಪತ್ರೆ ಹಾಗೂ ನಿಗಾ ಕೇಂದ್ರಗಳಲ್ಲಿ 38, ಖಾಸಗಿ ಆಸ್ಪತ್ರೆಗಳು ಹಾಗೂ ನಿಗಾ ಕೇಂದ್ರಗಳಲ್ಲಿ 106 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಖಾಸಗಿ ಲ್ಯಾಬ್‍ಗಳಲ್ಲಿ ಪರೀಕ್ಷೆ ಮಾಡಿಸಿಕೊಂಡಿರುವ 60,249 ಮಂದಿ ಸೇರಿ, ಈವರೆಗೆ ಒಟ್ಟು 7,99,528 ಮಂದಿಗೆ ಕೋವಿಡ್ ಪರೀಕ್ಷೆ ಮಾಡಿದಂತಾಗಿದೆ.

ರಾಜ್ಯದ ವಿವರ: ಬಳ್ಳಾರಿ 3, ಬೆಳಗಾವಿ 3, ಬೆಂಗಳೂರು ಗ್ರಾಮಾಂತರ 9, ಬೆಂಗಳೂರು ನಗರ 264, ಬೀದರ್ 1, ಚಾಮರಾಜನಗರ 4, ಚಿಕ್ಕಬಳ್ಳಾ ಪುರ 6, ಚಿಕ್ಕಮಗಳೂರು 1, ಚಿತ್ರದುರ್ಗ 20, ದಕ್ಷಿಣಕನ್ನಡ 26, ದಾವಣಗೆರೆ 8, ಧಾರ ವಾಡ 13, ಗದಗ್ 3, ಹಾಸನ 7, ಹಾವೇರಿ 1, ಕಲಬುರಗಿ 12, ಕೊಡಗು 7, ಕೋಲಾರ 1, ಮಂಡ್ಯ 1, ಮೈಸೂರು 30, ರಾಯಚೂರು 2, ಶಿವಮೊಗ್ಗ 4, ತುಮಕೂರು 30, ಉಡುಪಿ 5, ಉತ್ತರ ಕನ್ನಡ 6, ವಿಜಯಪುರದಲ್ಲಿ ಒಬ್ಬರು ಸೇರಿದಂತೆ ರಾಜ್ಯದಲ್ಲಿ ಶುಕ್ರವಾರ 468 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 9,38,401ಕ್ಕೆ ಏರಿಕೆಯಾಗಿದೆ.

ಇಂದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ 607 ಮಂದಿ ಸೇರಿದಂತೆ ಇದುವರೆಗೆ 9,20,110 ಸೋಂಕಿತರು ಗುಣ ಕಂಡಿದ್ದಾರೆ. ಇಂದು ವರದಿಯಾದ 2 ಸಾವಿನ ಪ್ರಕರಣ ಸೇರಿ ಈವರೆಗೆ ರಾಜ್ಯದಲ್ಲಿ 12,211 ಮಂದಿ ಕೋವಿಡ್-19 ಸೋಂಕಿನಿಂದ ಮೃತಪಟ್ಟಂತಾಗಿದೆ. ಇನ್ನೂ 6,061 ಮಂದಿಯಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.

ಲಸಿಕೆ ಅಭಿಯಾನ: 10ನೇ ಸ್ಥಾನದಲ್ಲಿ ಕರ್ನಾಟಕ, ಬೀದರ್‍ಗೆ ಮೊದಲ ಸ್ಥಾನ

ಬೆಂಗಳೂರು, ಜ. 29- ಆರೋಗ್ಯ ಸೇವಾ ಕಾರ್ಯಕರ್ತರ ಮೇಲೆ ಕೋವಿಡ್-19 ಲಸಿಕೆ ಹಾಕಿಸಿಕೊಂಡ ರಾಜ್ಯಗಳಲ್ಲಿ ಕರ್ನಾ ಟಕ 10ನೇ ಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶ ತಿಳಿಸಿದೆ. ಭಾರತದಲ್ಲಿ ಕೋವಿಡ್-19 ಲಸಿಕೆ ಹಾಕಿಸಿ ಕೊಂಡವರು ನಿನ್ನೆಯ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ 25 ಲಕ್ಷದ 7 ಸಾವಿರದ 556 ಆಗಿದೆ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ. ದೇಶದಲ್ಲಿ ಲಕ್ಷದ್ವೀಪ (ಶೇ.83.4), ಒಡಿಶಾ (ಶೇ.50.7), ಹರಿಯಾಣ (ಶೇ.50), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (ಶೇ.48.3), ರಾಜಸ್ಥಾನ (ಶೇ.46.8), ತ್ರಿಪುರ (ಶೇ.45.6), ಮಿಜೋರಾಂ (ಶೇ.40.5), ತೆಲಂಗಾಣ (ಶೇ 40.3), ಆಂಧ್ರ ಪ್ರದೇಶ (ಶೇ.38.1), ಕರ್ನಾಟಕ (ಶೇ.35.6) ಮತ್ತು ಮಧ್ಯಪ್ರದೇಶ (ಶೇ.35.5) ಆರೋಗ್ಯ ಕಾರ್ಯಕರ್ತರಲ್ಲಿ ಶೇ.35ರಷ್ಟು ಲಸಿಕೆ ಹಾಕಲಾಗಿದೆ ಎಂದರು. ಮತ್ತೊಂ ದೆಡೆ, ತಮಿಳುನಾಡು (ಶೇ.15.7), ದೆಹಲಿ (ಶೇ.15.7), ಜಾರ್ಖಂಡ್ (ಶೇ.14.7), ಉತ್ತರಾಖಂಡ (ಶೇ.17.1), ಚತ್ತೀಸ್‍ಗಢ (ಶೇ.20.6) ಮತ್ತು ಮಹಾರಾಷ್ಟ್ರ (ಶೇ.20.7) ಶೇ.21ಕ್ಕಿಂತ ಕಡಿಮೆ ಲಸಿಕೆ ಹಾಕಲಾಗಿದೆ ಎಂದು ರಾಜೇಶ್ ಭೂಷಣ್ ತಿಳಿಸಿದರು. ಆರೋಗ್ಯ ಸೇವೆ ವಲಯದಲ್ಲಿ ಕೆಲಸ ಮಾಡುವ ಕಾರ್ಯಕರ್ತರು, ವೈದ್ಯರು, ದಾದಿ ಯರು ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳುವಂತೆ ಸರ್ಕಾರ ಒತ್ತಾಯಿಸುತ್ತಿದೆ.

 

 

 

 

 

Translate »