ಕೋವಿಡ್ ಬಿಕ್ಕಟ್ಟು: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ ತಡೆ
ಮೈಸೂರು

ಕೋವಿಡ್ ಬಿಕ್ಕಟ್ಟು: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ ತಡೆ

April 24, 2020

ನವದೆಹಲಿ: ಕೊರೊನಾ ವೈರಸ್ ಲಾಕ್ ಡೌನ್ ಸಮಯದಲ್ಲಿ ತೆರಿಗೆ ಸಂಗ್ರಹಕ್ಕೆ ಸಮಸ್ಯೆ ಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ನೌಕರರ ಹೆಚ್ಚುವರಿ ತುಟ್ಟಿಭತ್ಯೆ (ಡಿಎ ಮತ್ತು ಡಿಆರ್) ಹೆಚ್ಚಳ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಯನ್ನು ಶೇ.12ರಿಂದ 17ಕ್ಕೆ ಹೆಚ್ಚಿಸಬೇಕೆಂದು ಈ ಹಿಂದೆ ತೆಗೆದುಕೊಂಡಿದ್ದ ನಿರ್ಧಾರವನ್ನು ತಡೆಹಿಡಿಯಲು ಸರ್ಕಾರ ತೀರ್ಮಾನಿಸಿದೆ. ಕೇಂದ್ರದ ಈ ಕ್ರಮವು ಸುಮಾರು 50 ಲಕ್ಷ ಸರ್ಕಾರಿ ನೌಕರರು ಮತ್ತು 65 ಲಕ್ಷ ಪಿಂಚಣಿ ದಾರರ ಮೇಲೆ ಪರಿಣಾಮ ಬೀರಲಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಪಾವತಿಸಬೇ ಕಾದ ಹೆಚ್ಚುವರಿ ಭತ್ಯೆ ಮತ್ತು ಕೇಂದ್ರ ಸರ್ಕಾರಿ ಪಿಂಚಣಿದಾರರಿಗೆ ಸಂದಾಯವಾಗುವ ಡಿಎಗಳನ್ನು 2020ರ ಜನವರಿ 1ರಿಂದ ಅನ್ವಯಿ ಸುವಂತೆ ಪಾವತಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಹಿಂದೆ ಮಾರ್ಚ್ 13ರಂದು ಕೇಂದ್ರ ನೌಕರರ ಡಿಎಯನ್ನು ಶೇಕಡಾ 5ರಷ್ಟು ಹೆಚ್ಚಿಸಲು ಕ್ಯಾಬಿನೆಟ್ ಒಪ್ಪಿಗೆ ನೀಡಿತ್ತು. ಇದು ಕೇಂದ್ರ ಬೊಕ್ಕಸಕ್ಕೆ ಹೆಚ್ಚುವರಿ 14,510 ಕೋಟಿ ರೂ. ಹೊರೆಯನ್ನು ತಂದಿತ್ತು. ಆದರೆ ಇದೀಗ ಕೊರೊನಾ ವಿರುದ್ಧ ಹೋರಾ ಡಲು ದೇಶ 40 ದಿನಗಳ ರಾಷ್ಟ್ರವ್ಯಾಪಿ ಲಾಕ್ ಡೌನ್‍ನಲ್ಲಿದೆ. ಹಾಗಾಗಿ ಮಾರ್ಚ್ 24ರಿಂದ ಹೆಚ್ಚಿನ ವ್ಯಾಪಾರ ಚಟುವಟಿಕೆಗಳನ್ನು ಸ್ಥಗಿತ ಗೊಳಿಸುವುದರಿಂದ ಸರ್ಕಾರವು ಹಣದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದು ಭಾರತೀಯ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರು ತ್ತಿದೆ. ಹೆಚ್ಚಿನ ಇಲಾಖೆಗಳ ಬಜೆಟ್ ಹಂಚಿಕೆ ಯನ್ನು ಶೇ.40ರಷ್ಟು ಕಡಿತಗೊಳಿಸುವುದು ಸೇರಿದಂತೆ ವೆಚ್ಚ ಕಡಿತ ಕ್ರಮಗಳ ಸರಣಿ ಯನ್ನು ಸರ್ಕಾರ ಇತ್ತೀಚೆಗೆ ಘೋಷಿಸಿತು.

Translate »