3 ನಿಮಿಷದಲ್ಲಿ ಭಗವದ್ಗೀತೆಯನ್ನು ಸೃಷ್ಟಿಸಿದ ಸೈಕಲ್ ಪ್ಯೂರ್ ಅಗರಬತ್ತಿ
ಮೈಸೂರು

3 ನಿಮಿಷದಲ್ಲಿ ಭಗವದ್ಗೀತೆಯನ್ನು ಸೃಷ್ಟಿಸಿದ ಸೈಕಲ್ ಪ್ಯೂರ್ ಅಗರಬತ್ತಿ

August 31, 2021

ಮೈಸೂರು, ಆ.೩೦- ಆಗಸ್ಟ್ ೨೯, ೨೦೨೧- ಭಾರತದಲ್ಲಿ ಅತ್ಯಂತ ನೆಚ್ಚಿನ ಮನೆಪೂಜೆ ಬ್ರಾಂಡ್ ಆದ ಸೈಕಲ್ ಪ್ಯೂರ್ ಅಗರ್‌ಬತ್ತಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ `೩ ನಿಮಿಷದಲ್ಲಿ ಭಗವದ್ಗೀತೆ'(ಭಗವದ್ಗೀತಾ ಇನ್ ೩ ಮಿನಿಟ್ಸ್)ಯನ್ನು ಪರಿಚಯಿಸಿದೆ. ಅಧ್ಯಾಯಗಳನ್ನು ೧೮ ವಾಕ್ಯ ಗಳಾಗಿ ವಿಂಗಡಿಸಿ ಭಗವದ್ಗೀತೆಯ ತತ್ವವನ್ನು ವಿವರಿಸುವುದ ರೊಂದಿಗೆ, ಕೇಳುಗರಿಗೆ ಶಿಕ್ಷಣ ನೀಡಲು ಈ ಬ್ರಾಂಡ್ ಡಿಜಿಟಲ್ ಮಾರ್ಗವನ್ನು ಬಳಸುತ್ತಿದೆ. ಒತ್ತಡ, ಗೊಂದಲ, ಏಕಾಗ್ರತೆಯ ಕೊರತೆ ಮತ್ತು ಪ್ರೇರೇಪಣೆ ಕುರಿತಂತೆ ಯುವ ಜನತೆಯ ಪ್ರಾಥಮಿಕ ಸಮಸ್ಯೆಗಳನ್ನು ನಿಭಾಯಿಸುವಲ್ಲಿ, ಗೀತೆಯ ಗಹನ ವಾದ ಆದರೂ ವಾಸ್ತವವಾದ ಬೋಧನೆಗಳು ಸಹಾಯಕವಾಗಲಿವೆ.

ಈ ಕುರಿತು ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗ ಮಾತನಾಡಿ, ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ ನಮ್ಮ ಅಭಿಯಾನದ ಜೊತೆಗೆ ಗೀತೆಯಲ್ಲಿನ ಸಮಯಾತೀತ ಬೋಧನೆಗಳನ್ನು ಪ್ರಸಕ್ತ ಮತ್ತು ಭವಿಷ್ಯದ ಪೀಳಿಗೆಗಳಿಗೆ ಪರಿಚಯಿಸಲು ನಾವು ಇಚ್ಛಿಸಿದ್ದೆವು. ಗೀತೆಯಲ್ಲಿ ಪ್ರತಿ ಅಧ್ಯಾಯವನ್ನು ೮-೧೦ ಸೆಕೆಂಡುಗಳಲ್ಲಿ ಓದಬಹುದು. ಎಲ್ಲಾ ೧೮ ಅಧ್ಯಾಯಗಳ ಪ್ರಮುಖ ಪಾಠಗಳನ್ನು ಕೇವಲ ೩ ನಿಮಿಷದಲ್ಲಿ ಕಲಿಯಬಹುದು. ಪ್ರತಿ ಅಧ್ಯಾಯದ ಟಿಪ್ಪಣ ಯನ್ನು ಪಂಡಿತರು ಕ್ರಮಬದ್ಧಗೊಳಿಸಿರು ತ್ತಾರೆ ಎಂದರು. ಪುಸ್ತಕದಲ್ಲಿ ೧೦ ಬೇರೆ ಬೇರೆ ಭಾರತೀಯ ಶಾಸ್ತಿçÃಯ ಕಲಾ ಪ್ರಕಾರಗಳಾದ ತಂಜಾವೂರು, ಕಲಂಕಾರಿ, ಪಿಚ್ವಾಯ್, ಕೇರಳ ಮುರಲ್, ಮಧುಬನಿ, ಮಿಥಿಲಾ, ರಾಜಸ್ಥಾನಿ ಸೂಕ್ಷö್ಮಕಲೆ, ಕೈಘಾಟ್, ಫಡ್ ಮುಂತಾದವುಗಳನ್ನು ಕಥಾ ಚಿತ್ರಣಕ್ಕಾಗಿ ಬಳಸಲಾಗಿದೆ. ದೇವ ಶ್ರೀಕೃಷ್ಣನನ್ನು ಚಿತ್ರಿಸಲು ಹಲವು ಪ್ರದೇಶಗಳಲ್ಲಿ ಈ ಕಲಾ ಪ್ರಕಾರಗಳನ್ನು ಸಾಂಪ್ರದಾಯಿಕವಾಗಿ ಬಳಸಲಾಗಿದೆ. ಗೀತೆ ದೃಶ್ಯ ಪೂರ್ವಕವಾಗಿ ವೀಕ್ಷಕರನ್ನು ಹಿಡಿದಿಡುವುದನ್ನು, ಆಧ್ಯಾತ್ಮಿಕವಾಗಿ ಸಮೃದ್ಧವಾಗು ವುದನ್ನು ಈ ವೈವಿಧ್ಯಪೂರ್ಣ ಅಭಿವ್ಯಕ್ತಿ ಸಾಧ್ಯವಾಗಿಸುತ್ತದೆ. ಈ ಸಮಯಾತೀತ ಜ್ಞಾನವನ್ನು ಉಚಿತವಾಗಿ ಡೌನ್‌ಲೋಡ್ ಮಾಡಿ, ಶೇರ್ ಮಾಡಿ. ಈ ಬುಕ್‌ಅನ್ನು ೮ ಭಾರತೀಯ ಭಾಷೆಗಳಲ್ಲಿ ಮತ್ತು ೬ ವಿದೇಶಿ ಭಾಷೆಗಳಲ್ಲಿ https://l.cycle.in/gita ದಿಂದ ಡೌನ್‌ಲೋಡ್ ಮಾಡಬಹುದು.

Translate »