ಕೊರೊನಾ ಸೋಂಕಿತರ ಸಂಪರ್ಕಿತರು ಹೆಸರು ನೋಂದಾಯಿಸಿಕೊಳ್ಳಲು ಜಿಲ್ಲಾಡಳಿತ ಮನವಿ
ಮೈಸೂರು

ಕೊರೊನಾ ಸೋಂಕಿತರ ಸಂಪರ್ಕಿತರು ಹೆಸರು ನೋಂದಾಯಿಸಿಕೊಳ್ಳಲು ಜಿಲ್ಲಾಡಳಿತ ಮನವಿ

July 9, 2020

ಮೈಸೂರು, ಜು.8 (ಎಸ್‍ಪಿಎನ್)- ಕೋವಿಡ್-19 ಸೋಂಕಿತರೊಬ್ಬರು ಮೈಸೂರಿನ ಸಿದ್ಧಾರ್ಥನಗರದ ಬ್ಯಾಂಕ್ ಒಂದಕ್ಕೆ ಜೂ.10 ಮತ್ತು ಜುಲೈ 6ರಂದು ಬೆಳಿಗ್ಗೆ ತೆರಳಿ ಹಣ ಸಂದಾಯ ಮಾಡಿದ್ದಾರೆ. ಈ ವೇಳೆ ಸೋಂಕಿತರ ಸಂಪರ್ಕದಲ್ಲಿದ್ದವ ರೆಲ್ಲರೂ ಹೆಸರು ನೋಂದಾಯಿಸುವಂತೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಮನವಿ ಮಾಡಿದ್ದಾರೆ.

ಸೋಂಕಿತರು ಜು.4ರಂದು ಎನ್.ಆರ್.ಮೊಹಲ್ಲಾ ತಿಬ್ಬಾ ದೇವಿ ಚಿತ್ರಮಂದಿರ ಬಳಿಯ ಕ್ಲಿನಿಕ್‍ಗೆ 12 ಗಂಟೆಗೆ ಭೇಟಿ ನೀಡಿದ್ದವರು ತಮ್ಮ ಹೆಸರು ನೋಂದಾಯಿಸುವಂತೆ ಹಾಗೂ ಮೈಸೂರಿನ ಉದಯಗಿರಿ ಅಬ್ದುಲ್ ರೆಹಮಾನ್ ರಸ್ತೆಯ ರಾಯಲ್ ಎಸ್ಕಾರ್ಟ್ ಪಾಲಿ ಕ್ಲಿನಿಕ್ ವೈದ್ಯರಿಗೆ ಕೊರೊನಾ ಸೋಂಕು ಜು.3ರಂದು ದೃಢಪಟ್ಟಿದೆ. ಸದರಿ ಪಾಲಿಕ್ಲಿನಿಕ್‍ನಲ್ಲಿ ಜೂ.20ರಿಂದ ಜು.2ರವರೆಗೆ ಕ್ಲಿನಿಕ್‍ನಲ್ಲಿ ವೈದ್ಯಕೀಯ ತಪಾಸಣೆಗೆ ಬಂದಿದ್ದಂತಹ ರೋಗಿಗಳು ಹಾಗೂ ಸಾರ್ವಜನಿಕರು ತಮ್ಮ ಹೆಸರು ನೋಂದಾ ಯಿಸಬೇಕು. ಮೈಸೂರು ಫೌಂಟೇನ್ ವೃತ್ತದ ಕೆಪಿಟಿಸಿಎಲ್ ಕಚೇರಿಯ ಸಿಬ್ಬಂದಿ ಯೋರ್ವರಿಗೆ ಜುಲೈ 1ರಂದು ಕೊರೊನಾ ಸೋಂಕು ದೃಢಪಟ್ಟಿದೆ. ಎನ್.ಆರ್. ಮೊಹಲ್ಲಾ ಕೆಇಬಿ ಭವನದಲ್ಲಿ ಕೆಪಿಟಿಸಿಎಲ್ ಕಾರ್ಮಿಕರ ಅಸೋಸಿಯೇಷನ್ ವತಿಯಿಂದ ಜೂನ್ 16ರಂದು ಆಯೋಜಿಸಿದ್ದ ರಕ್ತದಾನ ಶಿಬಿರ ಮತ್ತ ಸಮಾ ರಂಭದಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳನ್ನು ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರೆಂದು ಪರಿಗಣಿಸಿ ಕ್ಯಾರಂಟೈನ್‍ಗೆ ಮಾಡಿ, ವೈದ್ಯಕೀಯ ತಪಾಸಣೆ ಮಾಡಬೇಕಾಗಿರುತ್ತದೆ. ಹಾಗಾಗಿ ಮೇಲಿನ ಸೋಂಕಿತರ ಸಂಪರ್ಕದಲ್ಲಿದ್ದ ಸಾರ್ವಜನಿಕರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ತುರ್ತಾಗಿ ತಮ್ಮ ಹೆಸರನ್ನು ಜಿಲ್ಲಾ ಕಂಟ್ರೋಲ್ ರೂಂ ದೂ.ಸಂ:0821-2423-800ಗೆ ಕರೆ ಮಾಡಿ ತಮ್ಮ ಹೆಸರು ನೋಂದಾಯಿಸುವಂತೆ ಮನವಿ ಮಾಡಿದ್ದಾರೆ.

Translate »