ಕೊರೊನಾಗೆ ಮೈಸೂರಲ್ಲಿ ಇಬ್ಬರು ಔಷಧಿ ವ್ಯಾಪಾರಿಗಳ ಸಾವು
ಮೈಸೂರು

ಕೊರೊನಾಗೆ ಮೈಸೂರಲ್ಲಿ ಇಬ್ಬರು ಔಷಧಿ ವ್ಯಾಪಾರಿಗಳ ಸಾವು

August 19, 2020

ಮೈಸೂರು, ಆ.18(ಎಸ್‍ಪಿಎನ್)-ಕೊರೊನಾ ಸೋಂಕು ಮತ್ತು ಇನ್ನಿತರೆ ಕಾಯಿಲೆಯಿಂದ ಮೈಸೂರು ಜಿಲ್ಲೆಯ ಮೂವರು ಚಿಲ್ಲರೆ ಔಷಧಿ ವ್ಯಾಪಾರಿಗಳು ಸಾವನ್ನಪ್ಪಿದ್ದು, ಇದು ತೀವ್ರ ಆತಂಕ ಪಡುವ ವಿಷಯವಾಗಿದೆ ಎಂದು ಮೈಸೂರು ಜಿಲ್ಲೆಯ ಉಪಔಷಧ ನಿಯಂತ್ರಣಾ ಧಿಕಾರಿ ಬಿ.ಎನ್.ಅರುಣ್ ತಿಳಿಸಿದರು.

ಮೈಸೂರು ಆನಂದನಗರದ ವೀರವನಿತೆ ರಾಣಿ ಚೆನ್ನಮ್ಮ ಸ್ವಯಂ ಸಂಘದ ಕಚೇರಿ ಆವರಣದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಚಿಲ್ಲರೆ ಔಷಧಿ ವ್ಯಾಪಾರಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಇತ್ತೀಚೆಗೆ ನಿಧನರಾದ ಔಷಧಿ ವ್ಯಾಪಾರಿ ಗಳಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ತಿಂಗಳಿಂದ ಔಷಧಿ ವ್ಯಾಪಾರಿಗಳಾದ ಎಂ. ನಿರಂಜನ್‍ಮೂರ್ತಿ ಕ್ಯಾನ್ಸರ್‍ಗೆ ಬಲಿಯಾದರೆ, ಪ್ರಸನ್ನಕುಮಾರ್, ಝಕಾವುಲ್ಲಾ ಕೊರೊನಾಗೆ ಸಾವನ್ನಪ್ಪಿ ರುವುದು ತೀವ್ರ ಆತಂಕದ ವಿಷಯ. ಹಾಗಾಗಿ ಅಗತ್ಯ ವಸ್ತುಗಳ ಸೇವೆಯಡಿಯಲ್ಲಿ ವೈದ್ಯ ಕೀಯ ಕ್ಷೇತ್ರದ ಸೇವೆಯನ್ನು ರಾಜ್ಯ ಸರ್ಕಾರ ಸೇರಿಸಿದ್ದರೂ ಚಿಲ್ಲರೆ ಔಷಧಿ ವ್ಯಾಪಾರ ಕ್ಷೇತ್ರವನ್ನು ಹೊರಗಿಡಲಾಗಿದೆ. ಆದರೂ ಔಷಧಿ ವ್ಯಾಪಾರಿಗಳು ಆತಂಕ ಸನ್ನಿವೇಶದಲ್ಲೂ ಜನರ ಸೇವೆಯಲ್ಲಿ ತೊಡಗಿ ರುವುದು ಸ್ತುತ್ಯಾರ್ಹ ಎಂದು ತಿಳಿಸಿದರು.

ಕೊರೊನಾ ಕಾಣಿಸಿಕೊಂಡ ದಿನ ದಿಂದಲೂ ಚಿಲ್ಲರೆ ಔಷಧಿ ವ್ಯಾಪಾರಿಗಳು, ರೋಗಿಗಳಿಗೆ ಒಂದು ದಿನವೂ ಬಿಡು ವಿಲ್ಲದೇ ಔಷಧಿಗಳನ್ನು ವಿತರಿಸಿ, ಜನರ ಆರೋಗ್ಯ ಸುಧಾ ರಣೆಯತ್ತ ಶ್ರಮಿಸುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಕೊರೊನಾ ನಡುವೆ ಕಾರ್ಯ ನಿರ್ವಹಿಸುತ್ತಿದ್ದರೂ ವ್ಯಾಪಾರಿಗಳಲ್ಲಿ ಇಷ್ಟೊಂದು ಭಯದ ವಾತಾವರಣವಿರ ಲಿಲ್ಲ. ಆದರೆ, ಕೊರೊನಾ ಸೋಂಕು ವ್ಯಾಪಾರಿಗಳಲ್ಲಿ ಕಾಣಿಸಿಕೊಳ್ಳುತ್ತಿರುವುದ ರಿಂದ ಭಯದ ವಾತಾವರಣ ನಿರ್ಮಾಣ ವಾಗಿದೆ. ಈ ವಲಯವನ್ನೂ ಕೊರೊನಾ ವಾರಿಯರ್ಸ್ ತಂಡದ ವ್ಯಾಪ್ತಿಗೆ ತರುವ ಅವಶ್ಯಕತೆ ಇದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

ಶ್ರದ್ಧಾಂಜಲಿ ಸಭೆಯಲ್ಲಿ ಸಹಾಯಕ ಔಷಧ ನಿಯಂತ್ರಣಾಧಿಕಾರಿ ಎನ್.ನಾಗರಾಜು, ಔಷಧ ಪರಿವೀಕ್ಷಕರಾದ ಆಶಾಲತಾ, ರಮೇಶ್, ವಾಸೀಂ ಷರೀಫ್, ರಾಜ್ಯ ಫಾರ್ಮಸಿ ಕೌನ್ಸಿಲ್ ಅಧ್ಯಕ್ಷ ಕೌಶಿಕ್, ಮೈಸೂರು ನಗರ ಮತ್ತು ಜಿಲ್ಲಾ ಚಿಲ್ಲರೆ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಂ.ರಾಜು, ಪದಾಧಿಕಾರಿ ಗಳಾದ ಕೆ.ಎಂ.ರಾಜೇಶ್, ಸಿ.ಕೆ.ಅರುಣ್, ಮನ್ಸೂರ್ ಅಹ್ಮದ್‍ಖಾನ್, ಹೆಚ್.ಕೆ. ಮಂಜು ನಾಥ್, ಹೆಚ್.ಕೆ.ಮಂಜುನಾಥ್. ರೋ. ಎ.ಪಿ.ವಿರೂಪಾಕ್ಷ ಸೇರಿದಂತೆ ಇತರರಿ ದ್ದರು. ಇತ್ತೀಚೆಗೆ ನಿಧನರಾದ ಔಷಧಿ ವ್ಯಾಪಾರಿ ಗಳಿಗೆ ಒಂದು ನಿಮಿಷ ಮೌನಾಚರಣೆ ಹಾಗೂ ನುಡಿನಮನ ಸಲ್ಲಿಸಲಾಯಿತು.

Translate »