ಸಾಲದ ಕಂತು ಮುಂದೂಡಿಕೆ ಅವಧಿ ವಿಸ್ತರಣೆ ಸಾಧ್ಯವಿಲ್ಲ: ಸುಪ್ರೀಂಗೆ ಆರ್‍ಬಿಐ ಸ್ಪಷ್ಟನೆ
ಮೈಸೂರು

ಸಾಲದ ಕಂತು ಮುಂದೂಡಿಕೆ ಅವಧಿ ವಿಸ್ತರಣೆ ಸಾಧ್ಯವಿಲ್ಲ: ಸುಪ್ರೀಂಗೆ ಆರ್‍ಬಿಐ ಸ್ಪಷ್ಟನೆ

October 11, 2020

ನವದೆಹಲಿ, ಅ.10-ಸಾಲದ ಕಂತು ಮುಂದೂಡಿಕೆ ಅವಧಿಯನ್ನು ವಿಸ್ತರಿ ಸಲು ಸಾಧ್ಯವಿಲ್ಲ ಎಂದು ಆರ್‍ಬಿಐ ಸುಪ್ರೀಂಕೋರ್ಟ್‍ಗೆ ತಿಳಿಸಿದೆ. ಸಾಲದ ಕಂತು ಪಾವತಿ ಅವಧಿಯನ್ನು ವಿಸ್ತರಿಸಿ ದರೆ ಆರ್ಥಿಕತೆಯಲ್ಲಿ ಸಾಲದ ಸೃಷ್ಟಿ ಹೆಚ್ಚಾಗುವಂತೆ ಆಗಲಿದೆ ಎಂದು ಆರ್‍ಬಿಐ ಸುಪ್ರೀಂಕೋರ್ಟ್‍ಗೆ ನೀಡಿರುವ ಪ್ರಮಾಣ ಪತ್ರದಲ್ಲಿ ಕಾರಣ ತಿಳಿಸಿದೆ.

ಆ.6ರಂದು ರೆಸೆಲ್ಯೂಷನ್ ಫ್ರೇಮ್ ವರ್ಕ್‍ನ್ನು ರಿಸರ್ವ್ ಬ್ಯಾಂಕ್ ಘೋಷಿ ಸಿದ್ದು, ಕೋವಿಡ್-19ನಿಂದಾಗಿ ಆರ್ಥಿಕ ವಾಗಿ ಕುಸಿದಿರುವ ರಿಯಲ್ ಸೆಕ್ಟರ್ ಆಕ್ಟಿವಿಟೀಸ್‍ನ ಉತ್ತೇಜನದೆಡೆಗೆ ಗುರಿ ಹೊಂದಿದೆ ಹಾಗೂ ಅಂತಿಮವಾಗಿ ಸಾಲ ಪಡೆಯುವವರಿಗೆ ಉಂಟಾಗುವ ಪರಿ ಣಾಮಗಳನ್ನು ತಗ್ಗಿಸುವುದಾಗಿದೆ. ಈ ನಿಟ್ಟಿನಲ್ಲಿ ಅಂತಹ ಸಾಲಗಾರರ ಖಾತೆಗಳು ಮಾತ್ರ ರೆಸಲ್ಯೂಷನ್‍ಗೆ ಅರ್ಹರಾಗಿರುತ್ತಾರೆ, ಆದರೆ 30 ದಿನಗಳಿಗೂ ಮೀರಿದ ಸುಸ್ತಿದಾರರಿಗೆ ಈ ನಿಯಮಗಳು ಅನ್ವಯವಾಗುವುದಿಲ್ಲ ಎಂದು ಆರ್‍ಬಿಐ ತಿಳಿಸಿದೆ. ಸಂಬಂಧಿಸಿದ ಕ್ಷೇತ್ರಗಳ ಉದ್ಯಮಿಗಳಿಗೆ ಸಾಲ ನೀಡುವಾಗ ಈ ಸಾಲ ಪುನರ್‍ರಚನೆ ಮಾರ್ಗಸೂಚಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಬ್ಯಾಂಕುಗಳಿಗೆ ಸಮಿತಿ ಶಿಫಾರಸುಗಳನ್ನು ಪರಿಗಣಿಸಲಾಗುವುದು ಎಂದೂ ಆರ್‍ಬಿಐ ಪ್ರಮಾಣಪತ್ರದಲ್ಲಿ ಹೇಳಿದೆ. ಕೋವಿಡ್-19 ಬಿಕ್ಕಟ್ಟಿನಿಂದ ಭಾರತದ ಆರ್ಥಿಕತೆ ಕ್ಷೀಣಿಸುತ್ತಿದೆ. ಹೀಗಾಗಿ ಯಾವುದೇ ಬ್ಯಾಂಕುಗಳು ಆರ್ಥಿಕತೆ ಒತ್ತಡಕ್ಕೆ ಸಿಲುಕಬಾರದು ಎಂದು ಆರ್‍ಬಿಐ ರೆಸಲ್ಯೂಷನ್ ವೊಂದನ್ನು ಸಿದ್ದಪಡಿಸಿದೆ. ಈ ರೆಸಲ್ಯೂಷನ್ ಫ್ರೇಮ್ ವರ್ಕ್ ಮಾಡುವ ಜವಾಬ್ದಾರಿಯನ್ನು ದೇಶದ ಹಿರಿಯ ಬ್ಯಾಂಕಿಂಗ್ ಉದ್ಯಮಿ ಕೆ.ವಿ. ಕಾಮತ್ ನೇತೃತ್ವದ ತಜ್ಞರ ಸಮಿತಿಗೆ ಹೊರಿಸಲಾಗಿತ್ತು. ಇದರ ಭಾಗವಾಗಿ ಕೆ.ವಿ. ಕಾಮತ್ ನೇತೃತ್ವದ ತಜ್ಞರ ಸಮಿತಿಯೂ 26 ಕ್ಷೇತ್ರಗಳ ಸಾಲ ಪುನರ್‍ರಚನೆ ಮಾಡಲು ಆಯ್ಕೆ ಮಾಡಿಕೊಂಡಿದೆ.

Translate »