ಬೆಂಗಳೂರು, ಮೇ 17- ಕೊರೊನಾದಿಂದಾಗಿ ಚುನಾವಣೆ ನಡೆಸಲು ಸಾಧ್ಯವಾಗದ ಕಾರಣ ಗ್ರಾಮ ಪಂಚಾಯಿತಿಗಳಿಗೆ ಮುಂದಿನ ಆರು ತಿಂಗಳ ಅವಧಿಗೆ ಆಡಳಿತ ಸಮಿತಿ ನೇಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತ ನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, `ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿದ್ದೇವೆ’ ಎಂದರು.
`ಹಾಲಿ ಇರುವ ಸಮಿತಿಯನ್ನೇ ಮುಂದುವರಿಸಬೇಕೇ, ಆಡಳಿತಾಧಿಕಾರಿ ನೇಮಕ ಸೂಕ್ತವೇ ಅಥವಾ ಆಡಳಿತ ಸಮಿತಿ ನೇಮಿಸುವುದೇ ಎಂಬ ಮೂರು ಆಯ್ಕೆಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಿತು. ಅಂತಿಮವಾಗಿ ಆಡಳಿತ ಸಮಿತಿ ನೇಮಿಸಲು ಕಾನೂನುಬದ್ಧವಾಗಿ ಅವಕಾಶ ಇರುವುದರಿಂದ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ’ ಎಂದೂ ಈಶ್ವರಪ್ಪ ಅವರು ಸ್ಪಷ್ಟಪಡಿಸಿದರು.
`ರಾಜ್ಯದ 6,018 ಗ್ರಾಮ ಪಂಚಾಯಿತಿಯಲ್ಲಿ 96 ಸಾವಿರ ಸದಸ್ಯರಿದ್ದಾರೆ. ಗ್ರಾಮ ಪಂಚಾಯಿತಿಗೆ ಸದಸ್ಯರಾಗಲು ಎಲ್ಲಾ ಅರ್ಹತೆ ಇರುವವರನ್ನು ಆಯಾ ಜಿಲ್ಲಾಧಿಕಾರಿಗಳು ಆಡಳಿತ ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಿದ್ದಾರೆ. ಈ ಸಮಿತಿ 6 ತಿಂಗಳವರೆಗೆ ಅಸ್ತಿತ್ವದಲ್ಲಿ ಇರಲಿದ್ದು, ಆರು ತಿಂಗಳು ಪೂರ್ಣಗೊಳ್ಳುವ ಮೊದಲೇ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಸಚಿವರು ಹೇಳಿದರು.
`ಆಡಳಿತ ಸಮಿತಿಗೆ ಅಧಿಕಾರಿಯೇ ಅಧ್ಯಕ್ಷರಾಗಿರುತ್ತಾರೆ. ರೋಸ್ಟರ್ ಪ್ರಕಾರವೇ ಸಮಿತಿ ಇರಲಿದೆ. ಈ ಸಮಿತಿಗೆ ಗ್ರೂಪ್ `ಎ’ ಅಥವಾ ಗ್ರೂಪ್ `ಬಿ’ ಶ್ರೇಣಿಯ ಅಧಿಕಾರಿಯನ್ನು ಅಧ್ಯಕ್ಷರಾಗಿ ನೇಮಿಸಿ, ಆರ್ಥಿಕ ಪ್ರತ್ಯೋಜನೆಯ ಅಧಿಕಾರ ನೀಡಲಾಗುತ್ತದೆ. ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ತೀರ್ಮಾನಗಳನ್ನು ಸಮಿತಿ ತೆಗೆದುಕೊಳ್ಳಲಿದೆ. ಸಮಿತಿಯ ಸಲಹೆಗಳನ್ನು ಕಾನೂನಡಿ ಅವಕಾಶವಿದೆಯೇ ಎಂದು ಪರಿಶೀಲಿಸಿ ಅನುಷ್ಠಾನಗೊಳಿ ಸಲು ಅಧಿಕಾರಿ ಒಪ್ಪಿಗೆ ನೀಡಲಿದ್ದಾರೆ’ ಎಂದೂ ಈಶ್ವರಪ್ಪ ವಿವರಿಸಿದರು. ಕಾನೂನು ಇಲಾಖೆ ಕಾರ್ಯದರ್ಶಿ, ಅಡ್ವೊಕೇಟ್ ಜನರಲ್ ಅವರು ನೀಡಿದ ಅಭಿಪ್ರಾಯದಂತೆ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದೂ ಗೊತ್ತಾಗಿದೆ.ಕಟ್ಟಡ ಕಾರ್ಮಿಕರು: ಬಿಹಾರ, ಉತ್ತರಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಿಂದ ಮೈಸೂರಿಗೆ ಬಂದಿರುವ ಕಾರ್ಮಿಕರಲ್ಲಿ ಬಹುಪಾಲು ನೌಕರರು ಕಟ್ಟಡ ಕಾರ್ಮಿಕ ವೃತ್ತಿಯನ್ನೇ ಅವಲಂಬಿಸಿದ್ದರು. ಬಹುಮಹಡಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಈ ರಾಜ್ಯದ ವಲಸೆ ಕಾರ್ಮಿಕರು ನೈಪುಣ್ಯತೆ ಪಡೆದಿದ್ದಾರೆ. ಅದರಲ್ಲಿಯೂ ಟೈಲ್ಸ್ ಜೋಡಣೆ, ಪಾಲಿಷ್ ಹಾಕುವುದು, ಮರಗೆತ್ತನೆ, ಇಂಟೀರಿಯಲ್ ಡಿಸೈನ್, ಎಲೆಕ್ಟ್ರಿಕಲ್ ವರ್ಕ್ ಸೇರಿದಂತೆ ಇನ್ನಿತರ ಕೆಲಸದಲ್ಲಿ ನೈಪುಣ್ಯತೆ ಹೊಂದಿರುವುದರಿಂದ ಈ ನೌಕರರು ಕಟ್ಟಡ ಕಾರ್ಮಿಕ ಕೆಲಸದಲ್ಲಿ ಮಗ್ನರಾಗಿದ್ದರು. ರಾಜಾಸ್ತಾನ, ಗುಜರಾತ್, ಮಣಿಪುರ, ಪಾಂಡಿಚೇರಿ, ಕೇರಳ ಸೇರಿದಂತೆ ಇನ್ನಿತರ ರಾಜ್ಯಗಳಿಂದ ಆಗಮಿಸಿದ್ದ ನೌಕರರು ಹೋಟೆಲ್ ಗಳಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೇ ವಿವಿಧೆಡೆ ಪಾನೀಪುರಿ, ಬೇಲ್‍ಪುರಿ, ಸೋಡಾ, ಮೇವಾಡ್ ಐಸ್‍ಕ್ರೀಂ ಸೇರಿದಂತೆ ಚಾಟ್ ಸೆಂಟರ್‍ಗಳನ್ನು ನಡೆಸುತ್ತಿದ್ದರು. ಆದರೆ ಈಗ ಲಾಕ್‍ಡೌನ್‍ನಿಂದ ಎಲ್ಲಾ ಚಟುವಟಿಕೆ ಸ್ಥಗಿತಗೊಂಡಿದ್ದರಿಂದ ಮರಳಿ ತವರೂರಿನತ್ತ ಹೆಜ್ಜೆ ಹಾಕಲು ನಿರ್ಧರಿಸಿ ಇದೀಗ ತವರಿನ ಹಾದಿಯನ್ನು ಎದುರು ನೋಡುತ್ತಿದ್ದಾರೆ.