ವಿಧಾನ ಪರಿಷತ್‍ಗೆ ವಿಶ್ವನಾಥ್ ನಾಮ ನಿರ್ದೇಶನಕ್ಕೆ ಆಗ್ರಹ
ಮೈಸೂರು

ವಿಧಾನ ಪರಿಷತ್‍ಗೆ ವಿಶ್ವನಾಥ್ ನಾಮ ನಿರ್ದೇಶನಕ್ಕೆ ಆಗ್ರಹ

June 23, 2020

ಮೈಸೂರು, ಜೂ.22(ಆರ್‍ಕೆಬಿ)-ಮಾಜಿ ಸಚಿವ ಅಡಗೂರು ಹೆಚ್.ವಿಶ್ವನಾಥ್ ಅವರಿಗೆ ಸಾಹಿತ್ಯ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡುವಂತೆ ಹಳೆಬೇರು ಹೊಸಚಿಗುರು ಗಾಯಕರ ಗೆಳೆಯರ ಬಳಗ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಬಳಗದ ಕಾರ್ಯದರ್ಶಿ ರೇವಣ್ಣ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಕೀಯ ಧೃವೀಕರಣದಲ್ಲಿ 17 ಬಂಡಾಯ ಶಾಸಕರು, ಮಂತ್ರಿಗಳ ನಾಯಕತ್ವ ವಹಿಸಿ ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಎ.ಹೆಚ್.ವಿಶ್ವನಾಥ್ ಅವರಿಗೆ ಸಾಹಿತ್ಯ ಕ್ಷೇತ್ರದ ಕೋಟಾದಡಿ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡಬೇಕು. ಈಗಾಗಲೇ ವಿಶ್ವನಾಥ್ ಅವರಿಗೆ ಎಂಎಲ್ಸಿ ಸ್ಥಾನ ಕೈ ತಪ್ಪಿದೆ. ಈಗಲಾದರೂ ಅವರನ್ನು ಪರಿಷತ್ತಿಗೆ ನಾಮ ನಿರ್ದೇಶನ ಮಾಡು ವಂತೆ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಾಹಿತಿ ಬನ್ನೂರು ರಾಜು, ಕನ್ನಡಪರ ಹೋರಾಟಗಾರ ದೇಶಹಳ್ಳಿ ರಾಮಚಂದ್ರ ಆಚಾರ್, ವಕೀಲ ಟಿ.ನಾಗರಾಜ್ ಇದ್ದರು.

Translate »