ಭೂ ವಿವಾದಗಳ ಇತ್ಯರ್ಥಕ್ಕೆ ಇಲಾಖಾ ನ್ಯಾಯಾಲಯಗಳ ಅಧಿಕಾರ ವಿಕೇಂದ್ರೀಕರಣÀಂ
News

ಭೂ ವಿವಾದಗಳ ಇತ್ಯರ್ಥಕ್ಕೆ ಇಲಾಖಾ ನ್ಯಾಯಾಲಯಗಳ ಅಧಿಕಾರ ವಿಕೇಂದ್ರೀಕರಣÀಂ

November 1, 2022

ುಬೆಂಗಳೂರು, ಅ. 31 (ಕೆಎಂಶಿ)- ಭೂ ವಿವಾದಗಳು ಸೇರಿದಂತೆ ರಾಜ್ಯಾದ್ಯಂತ ಬಗೆಹರಿಯದೆ ಉಳಿದಿರುವ ಕಂದಾಯ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಸರ್ಕಾರ ಮುಂದಾಗಿದ್ದು, ಇಲಾಖಾ ನ್ಯಾಯಾಲಯಗಳ ಅಧಿಕಾರ ವನ್ನು ವಿಕೇಂದ್ರೀಕರಣಗೊಳಿಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಇಂದಿಲ್ಲಿ ತಿಳಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ವಿಷಯ ತಿಳಿಸಿದರಲ್ಲದೆ, ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷ ಗಳ ಕಾಲ ಕಂದಾಯ ನ್ಯಾಯಾಲಯಗಳ ಕಲಾಪ ಸ್ಥಗಿತ ವಾಗಿತ್ತು. ಇದರಿಂದಾಗಿ ಒಂದು ಲಕ್ಷ ಸಮೀಪ ಪ್ರಕರಣ ಗಳು ವಿಲೇವಾರಿಯಾಗದೇ ಹಾಗೆಯೇ ಉಳಿದಿವೆ.

ಹಳೇ ಪ್ರಕರಣಗಳನ್ನು ಇಂತಿಷ್ಟು ಸಮಯದಲ್ಲಿ ತ್ವರಿತ ವಾಗಿ ಇತ್ಯರ್ಥಗೊಳಿಸುವಂತೆ ಸಂಬಂಧಪಟ್ಟ ಅಧಿ ಕಾರಿಗಳಿಗೆ ಆದೇಶ ಹೊರಡಿಸ ಲಾಗಿದೆ. ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ತಕರಾರು ಗಳನ್ನು ಜಿಲ್ಲಾಧಿಕಾರಿಗಳ ನ್ಯಾಯಾಲಯ, ಉಪವಿಭಾಗಾ ಧಿಕಾರಿಗಳ ನ್ಯಾಯಾಲಯ ಮತ್ತು ತಹಸೀಲ್ದಾರ್‍ಗಳ ನ್ಯಾಯಾಲಯ ವಿಚಾರಣೆ ಮಾಡಿ ಇತ್ಯರ್ಥಗೊಳಿಸುತ್ತದೆ. ತ್ವರಿತ ವಿಚಾರಣೆ ಕೈಗೊಳ್ಳುವ ಉದ್ದೇಶದಿಂದ ಇನ್ನು ಮುಂದೆ ಜಿಲ್ಲಾಧಿಕಾರಿಗಳ ನ್ಯಾಯಾ ಲಯ ಬಗೆಹರಿಸುತ್ತಿದ್ದ ಪ್ರಕರಣಗಳ ಕುರಿತು ಹೆಚ್ಚುವರಿ ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸಿ ಇತ್ಯರ್ಥಗೊಳಿಸು ತ್ತಾರೆ. ಹಾಗೆಯೇ ಉಪವಿಭಾಗಾಧಿಕಾರಿಗಳ ನ್ಯಾಯಾಲ ಯದಲ್ಲಿ ಇತ್ಯರ್ಥವಾಗುತ್ತಿದ್ದ ಪ್ರಕರಣಗಳ ವಿಚಾರಣೆ ಯನ್ನು ಭೂಸ್ವಾಧೀನಾಧಿಕಾರಿಗಳ ಮಟ್ಟದ ಅಧಿಕಾರಿಗಳು ನಡೆಸುತ್ತಾರೆ. ತಹಸೀಲ್ದಾರ್ ನ್ಯಾಯಾಲಯಗಳಲ್ಲಿ ಇತ್ಯರ್ಥ ವಾಗುತ್ತಿದ್ದ ಪ್ರಕರಣಗಳ ವಿಚಾರಣೆಯನ್ನು ಉಪತಹಸೀ ಲ್ದಾರ್ ಕೂಡಾ ಇತ್ಯರ್ಥಪಡಿಸಲಿದ್ದಾರೆ ಎಂದು ವಿವರಿಸಿ ದರು. ಕಂದಾಯ ನ್ಯಾಯಾಲಯಗಳ ಅಧಿಕಾರವನ್ನು ವಿಕೇಂದ್ರೀ ಕರಣಗೊಳಿಸಿರುವ ಪರಿಣಾಮವಾಗಿ ಈಗ ಅವುಗಳ ಮುಂದಿ ರುವ ಲಕ್ಷಾಂತರ ಪ್ರಕರಣಗಳು ತ್ವರಿತವಾಗಿ ಇತ್ಯರ್ಥವಾಗ ಲಿವೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು. ಅಧಿಕಾರವನ್ನು ವಿಕೇಂದ್ರೀಕರಣಗೊಳಿಸುವ ಜತೆಗೆಪ್ರತಿ ತಿಂಗಳು ನಿರ್ದಿಷ್ಟ ಸಂಖ್ಯೆಯ ಪ್ರಕರಣಗಳನ್ನು ಇತ್ಯರ್ಥಪಡಿಸಲೇಬೇಕು ಎಂದು ನಿಗದಿ ಮಾಡುತ್ತಿದ್ದೇವೆ. ಹೀಗಾಗಿ ಕಂದಾಯ ನ್ಯಾಯಾಲಯಗಳ ಮುಂದಿರುವ ಕೇಸುಗಳ ಪರಿಹಾರ ಕಾರ್ಯ ತ್ವರಿತವಾಗಿ ನಡೆಯಲಿದೆ ಎಂದರು. ಈ ಮಧ್ಯೆ ಭೂ ವಿವಾದಗಳೂ ಸೇರಿದಂತೆ ತಮ್ಮ ಮುಂದಿರುವ ಕೆಲ ಪ್ರಕರಣಗಳ ವಿಚಾರಣೆ ನಡೆಸಿ ದರೂ ಅಂತಿಮ ತೀರ್ಪು ಪ್ರಕಟಿಸದೆ ವಿಳಂಬ ಧೋರಣೆ ಮಾಡುತ್ತಿರುವುದು ಲೋಕಾಯುಕ್ತ ತನಿಖೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಇಂತಹ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವುದಾಗಿ ಸ್ಪಷ್ಟ ಪಡಿಸಿದರು.

ಯಾವುದೇ ಪ್ರಕರಣದ ವಿಚಾರಣೆ ಪೂರ್ಣಗೊಂಡರೆ ನಿರ್ದಿಷ್ಟ ಕಾಲಾವಧಿ ಯೊಳಗಾಗಿ ಅಂತಿಮ ತೀರ್ಪು ನೀಡಲೇಬೇಕು ಎಂದು ಗಡುವು ವಿಧಿಸಲಾಗುವುದು ಎಂದರು. ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮತ್ತು ಆ ಗ್ರಾಮಗಳಿಗೆ ಹೆಸರು ಕೊಡುವ ಕಾರ್ಯ ನವೆಂಬರ್ ಅಂತ್ಯ ಇಲ್ಲವೇ ಡಿಸೆಂಬರ್ ಮೊದಲ ವಾರ ಯಾದಗಿರಿಯಲ್ಲಿ ನಡೆಯಲಿದೆ ಎಂದರು. ಮೊದಲ ಹಂತದಲ್ಲಿ ರಾಜ್ಯದ ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿ ಈ ಕಾರ್ಯ ನಡೆಯಲಿದೆ ಎಂದ ಅವರು, ರಾಜ್ಯದಲ್ಲಿ ಒಟ್ಟು ಆರು ಲಕ್ಷ ಲಂಬಾಣಿ ಕುಟುಂಬಗಳಿದ್ದು ಅವರಿಗೆ ಜಾಗ,ಗುರುತು ನೀಡುವ ಕೆಲಸ ಮಾಡುತ್ತಿದ್ದೇವೆ ಎಂದರು. ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ,ಅವುಗಳಿಗೆ ಹೆಸರು ನೀಡಿ,ಫಲಾನುಭವಿಗಳಿಗೆ ಜಾಗದ ಕ್ರಯ ಪತ್ರ ನೀಡುವ ಸರ್ಕಾರದ ಕ್ರಮ ಸುಮಾರು ಎರಡು ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವರ್ಗಾಯಿಸುವುದೇ ಆಗಿದೆ ಎಂದರು.

Translate »