ಲಾಕ್‍ಡೌನ್ ಇದ್ದರೂ ಸಂತೆ ಆರಂಭ
ಕೊಡಗು

ಲಾಕ್‍ಡೌನ್ ಇದ್ದರೂ ಸಂತೆ ಆರಂಭ

March 24, 2020

ಸೋಮವಾರಪೇಟೆ,ಮಾ.23-ಕೊರೊನಾ ವೈರಸ್ ಹರಡುವುದನ್ನು ತಡೆಯಲು ಜಿಲ್ಲೆಯಲ್ಲಿ ಲಾಕ್‍ಡೌನ್ ಆದೇಶವಿದ್ದರೂ ಸಂತೆದಿನ ವಾದ ಸೋಮವಾರ ಪಟ್ಟಣದಲ್ಲಿ ಬೆಳಿಗ್ಗೆ ಯಿಂದಲೇ ಜನರು ಸೇರಲು ಪ್ರಾರಂಭಿ ಸಿದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಪರದಾಡುವಂತಾಯಿತು.

ಮಾ.23 ಹಾಗೂ 30ರ ಸಂತೆಯನ್ನು ನಿಷೇಧಿಸಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದ್ದರೂ, ಸೋಮವಾರ ಬೆಳಿಗ್ಗೆ ಖಾಸಗಿ ಬಸ್ ನಿಲ್ದಾಣದಲ್ಲಿ ಸಂತೆ ಪ್ರಾರಂಭ ವಾಗಿತ್ತು. ತರಕಾರಿ, ದಿನಸಿಗಳ ವ್ಯಾಪಾರ ಸಾಗಿತ್ತು. ಜನರು ಸಂದಣಿಯೂ ಜಾಸ್ತಿ ಯಾಗಿತ್ತು. ತರಕಾರಿ ಬೆಲೆಗಳು ಗಗನಕ್ಕೇ ರಿದವು. ಕಳೆದ ವಾರ 20 ರೂ.ಗಳಿದ್ದ ಟೊಮೆಟೋ 40. ಬೀನ್ಸ್ 80, ಆಲೂಗೆಡ್ಡೆ 60 ರೂ.ಗಳಿಗೆ ನಿಗದಿಯಾಗಿದ್ದವು.

ಕೂಡಲೆ ಕಾರ್ಯಪ್ರವೃತ್ತರಾದ ತಹಸೀ ಲ್ದಾರ್ ಗೋವಿಂದರಾಜು, ಪಪಂ ಮುಖ್ಯಾ ಧಿಕಾರಿ ರಮೇಶ್ ಅವರು, ಪೊಲೀಸರ ಸಹಕಾರದೊಂದಿಗೆ ವ್ಯಾಪಾರದಲ್ಲಿ ತೊಡ ಗಿದ್ದವರನ್ನು ಖಾಲಿ ಮಾಡಿಸಲು ಹರ ಸಾಹಸ ಪಟ್ಟರು. ನಂತರ ಧ್ವನಿವರ್ಧಕದ ಮೂಲಕ ಪ್ರತಿ ಅಂಗಡಿಗಳನ್ನು ಮುಚ್ಚುವಂತೆ ಸೂಚಿಸ ಲಾಯಿತು. ಮಧ್ಯಾಹ್ನದ ಹೊತ್ತಿಗೆ ಸಂಪೂರ್ಣ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾ ಯಿತು. ನಂತರ ಜನಸಂಖ್ಯೆಯೂ ವಿರಳವಾಯಿತು.

ತರಕಾರಿಯನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೇ ಸೂಕ್ತ ಕ್ರಮಕೈಗೊಳ್ಳ ಲಾಗುವುದು. ನಿಯಮ ಮೀರಿ ಅಂಗಡಿ ಗಳನ್ನು ತೆರೆದು ಜನ ಸೇರುವಂತೆ ಮಾಡಿದರೆ, ಅಲ್ಲದೆ ದಿನಸಿಗೆ ಅಧಿಕ ಬೆಲೆಯನ್ನು ಪಡೆ ದರೆ, ಅಂತಹ ಅಂಗಡಿಗಳ ಪರವಾನಗಿ ರದ್ದುಪಡಿಸಲಾಗುವುದು, ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್ ಎಚ್ಚರಿಸಿದ್ದಾರೆ.

Translate »