ಪಟ್ಟದ ಆನೆಯಾಗಿ ಧನಂಜಯ
ಮೈಸೂರು

ಪಟ್ಟದ ಆನೆಯಾಗಿ ಧನಂಜಯ

October 6, 2021

ಮೈಸೂರು,ಅ.5(ಎಂಟಿವೈ)- ನವರಾತ್ರಿ ವೇಳೆ ಅರಮನೆಯಲ್ಲಿ ರಾಜವಂಶಸ್ಥರು ನಡೆ ಸುವ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳ ಬೇಕಾಗಿದ್ದ ಪಟ್ಟದ ಆನೆ ವಿಕ್ರಮನಿಗೆ ಮದ ಇಳಿಯದ ಕಾರಣ ಧನಂಜಯನನ್ನು ಈ ಬಾರಿ ಪಟ್ಟದ ಆನೆಯಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಅರಮನೆ ಆವರಣದಲ್ಲಿ ಪತ್ರಕರ್ತರಿಗೆ ಈ ವಿಷಯ ತಿಳಿಸಿದ ಡಿಸಿಎಫ್ ಕರಿಕಾಳನ್, ದಸರಾ ಮಹೋ ತ್ಸವದಲ್ಲಿ ಪಾಲ್ಗೊಳ್ಳಲು ಕರೆತರಲಾಗಿದ್ದ ಪಟ್ಟದ ಆನೆ ವಿಕ್ರಮನಿಗೆ ಇನ್ನೂ ಮದ ಇಳಿ ದಿಲ್ಲ. ಸಾಮಾನ್ಯವಾಗಿ ಆನೆಗೆ ಮದ ಬಂದರೆ 3-4 ತಿಂಗಳು ಮದದ ಅಂಶ ಇರುತ್ತದೆ. ಕೆಲವು ಆನೆಗಳಿಗೆ ಮದ ಬಂದ ಸಮಯದಲ್ಲಿ ಕೋಪ ಇರುತ್ತದೆ. ಕೆಲವು ಆನೆಗಳಿಗೆ ಮದ ಇಳಿಯುವಾಗ ಕೋಪ ಹೆಚ್ಚಾಗಿರುತ್ತದೆ. ವಿಕ್ರಮನಿಗೆ ಮದ ಇಳಿವ ವೇಳೆ ಕೋಪ ಹೆಚ್ಚಾಗಿದೆ. ಆದರೂ ಮಾವುತ ಹಾಗೂ ಕಾವಾಡಿಯ ಮಾತು ಕೇಳುತ್ತಿದೆ. ಪ್ರತಿದಿನ ಕಾಲ್ನಡಿಗೆಯಲ್ಲಿ ಪಾಲ್ಗೊಳ್ಳುತ್ತಿದೆ. ನೀರು ಕುಡಿಯಲು ಮಾವುತರೊಂದಿಗೆ ಹೋಗು ತ್ತಿದೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಸಿಡಿಮದ್ದು ಹಾಗೂ ಭಾರ ಹೊರಿಸುವ ತಾಲೀಮಿನಿಂದ ದೂರ ಇಡಲಾಗಿತ್ತು ಎಂದರು.

ಮದದ ಹಿನ್ನೆಲೆಯಲ್ಲಿ ದೇಹದ ಉಷ್ಣಾಂಶ ಕಡಿಮೆ ಮಾಡಲು ಬಾಳೆ ದಿಂಡು, ಮಜ್ಜಿಗೆ ಸೇರಿದಂತೆ ಕೆಲವು ನೈಸರ್ಗಿಕ ಪದಾರ್ಥ ಗಳನ್ನೇ ನೀಡಲಾಗುತ್ತಿದೆ. ನವರಾತ್ರಿ ಆರಂ ಭಕ್ಕೆ ಒಂದೇ ದಿನ ಬಾಕಿಯಿದ್ದು, ದಸರಾ ದಲ್ಲಿ ಪಟ್ಟದ ಆನೆಯಾಗಿ ಧನಂಜಯನನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಸಂಬಂಧ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರೊಂದಿಗೆ ಚರ್ಚಿಸ ಲಾಗಿದೆ. ಈ ಬಾರಿ ಬಂದಿರುವ ಆನೆಗಳು ಲಕ್ಷಣವಾಗಿದ್ದು, ಯಾವುದೇ ಆನೆಯನ್ನಾ ದರೂ ಕಳುಹಿಸುವಂತೆ ತಿಳಿಸಿದ್ದಾರೆ. ಪಟ್ಟದ ಆನೆಯಾಗಿ ಧನಂಜಯ ಹಾಗೂ ಅದರೊಂದಿಗೆ ಗೋಪಾಲಸ್ವಾಮಿ ಆನೆ ಯನ್ನು ಕಳುಹಿಸುತ್ತಿರುವುದಾಗಿ ತಿಳಿಸಿದರು.

ಶ್ರೀರಂಗಪಟ್ಟಣ ದಸರೆಗೆ ಆನೆಯನ್ನು ಕಳುಹಿಸುವುದಿಲ್ಲ. ಸರ್ಕಾರ ಅರಮನೆ ಆವ ರಣದಿಂದ ಆನೆಗಳನ್ನು ಹೊರಗೆ ಕರೆದು ಕೊಂಡು ಬರಲು ಅವಕಾಶ ನೀಡಿಲ್ಲ. 2 ಆನೆ ಅರಮನೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯದಲ್ಲಿ ಬಳಸಿದರೆ, ಒಂದು ಆನೆಯನ್ನು ಮದದ ಹಿನ್ನೆಲೆ ಯಾವುದೇ ಕಾರ್ಯದಲ್ಲಿ ಬಳಸಿಕೊಳ್ಳುವುದಿಲ್ಲ. ಉಳಿದ 5 ಆನೆಗಳಲ್ಲಿ 2 ಕುಮ್ಕಿ ಆನೆಯಾದರೆ, ಒಂದು ಅಂಬಾರಿ ಹೊರುವ ಆನೆಯಾಗಿದೆ. ಉಳಿದಂತೆ ಹೊಸ ಆನೆ ಅಶ್ವತ್ಥಾಮ, ಲಕ್ಷ್ಮೀ ಆನೆ ಮುಂಬ ರುವ ದಸರೆಗೆ ಸಜ್ಜು ಗೊಳಿಸ ಬೇಕಾಗಿ ರುವುದರಿಂದ ಜಂಬೂಸವಾರಿ ಮೆರವಣಿಗೆಯಲ್ಲಿ ಸಾಲಾನೆಯಾಗಿ ಬಳಸಲಾಗುತ್ತಿದೆ ಎಂದರು.

Translate »