ಅರ್ಹರಿಗೆ ನರ್ಮ್ ಯೋಜನೆಯಡಿ ಮನೆ ಕಲ್ಪಿಸಲು ಆಗ್ರಹಿಸಿ ಧರಣಿ
ಮೈಸೂರು

ಅರ್ಹರಿಗೆ ನರ್ಮ್ ಯೋಜನೆಯಡಿ ಮನೆ ಕಲ್ಪಿಸಲು ಆಗ್ರಹಿಸಿ ಧರಣಿ

January 28, 2020

ಮೈಸೂರು: ನರ್ಮ್ ಮನೆಗಳ ಫಲಾನುಭವಿಗಳ ಆಯ್ಕೆ ಪಟ್ಟಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಏಕಲವ್ಯ ನಗ ರದ ನರ್ಮ್ ಮನೆ ವಂಚಿತರು ಅನಿರ್ದಿಷ್ಟಾ ವಧಿ ಪ್ರತಿಭಟನಾ ಧರಣಿ ಆರಂಭಿದರು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ ಪ್ರತಿ ಭಟನಾಕಾರರು ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರಿನ ವಿವಿಧೆಡೆ ನರ್ಮ್ ಯೋಜನೆ ಯಡಿ ನಿರ್ಮಿಸಿರುವ ವಸತಿ ಸಮುಚ್ಛಯ ಗಳಲ್ಲಿ ಮನೆ ಮಂಜೂರು ಮಾಡುವ ವೇಳೆ ಫಲಾನುಭವಿಗಳ ಆಯ್ಕೆಯಲ್ಲಿ ಗೋಲ್ ಮಾಲ್ ನಡೆದಿದೆ. ಬೇರೆ ಬೇರೆ ಬಡಾವಣೆ ಗಳಲ್ಲಿ ಮನೆ ಹೊಂದಿರುವವರು, ಶ್ರೀಮಂ ತರು, ಹಣವಂತರು, ರಾಜಕೀಯ ಪ್ರಭಾವ ಉಳ್ಳವರು, ಕೊಳಚೆ ಪ್ರದೇಶದಲ್ಲಿ ವಾಸಿ ಸದೆ ಇರುವ 1040 ಮಂದಿಯನ್ನು ಫಲಾ ನುಭವಿಗಳನ್ನಾಗಿ ಆಯ್ಕೆ ಮಾಡಿ, ಪಟ್ಟಿ ಅಂತಿಮಗೊಳಿಸಲಾಗಿದೆ ಎಂದು ಪ್ರತಿಭಟ ನಾಕಾರರು ಆರೋಪಿಸಿದರು.

ಹಲವು ವರ್ಷಗಳಿಂದ ಏಕಲವ್ಯ ನಗರ ದಲ್ಲಿ ವಾಸಿಸುತ್ತಿದ್ದ ನಿರ್ಗತಿಕರನ್ನು ನರ್ಮ್ ಮನೆಗಳ ಆಯ್ಕೆ ಪಟ್ಟಿಯಿಂದ ಕೈ ಬಿಡ ಲಾಗಿದೆ. ನಿರ್ಗತಿಕ ಅಲೆಮಾರಿ ಕುಟುಂಬ, ಎಲ್ಲಾ ಜಾತಿಯ ಬಡ ಕುಟುಂಬಗಳು ಮನೆ ಇಲ್ಲದೆ ಪರದಾಡುತ್ತಿದ್ದಾರೆ. ಇವರನ್ನು ಆಯ್ಕೆ ಪಟ್ಟಿಗೆ ಸೇರಿಸಿ ಮನೆ ಮಂಜೂರು ಮಾಡಿಕೊಡುವಂತೆ ಒತ್ತಾಯಿಸಿದರು.

ಆಯ್ಕೆ ಪಟ್ಟಿಯಲ್ಲಿ ಅನರ್ಹ ಫಲಾನು ಭವಿಗಳ ಹೆಸರನ್ನು ತೆಗೆದು ಹಾಕಬೇಕು. ಕೈ ಬಿಟ್ಟಿರುವ ಏಕಲವ್ಯ ನಗರದ ನೂರಾರು ನಿರ್ಗತಿಕ ಅಲೆಮಾರಿ, ಎಲ್ಲಾ ಜಾತಿಯ ಬಡ ಕುಟುಂಬಗಳಿಗೆ ಆ ಮನೆಗಳನ್ನು ಮಂಜೂರು ಮಾಡಬೇಕು. ಏಕಲವ್ಯ ನಗರದಲ್ಲಿ ನರ್ಮ್ ಮನೆಗಳ ಕಾಮಗಾರಿಗಳಿಗೆ ಕೋಟ್ಯಾಂತರ ರೂ. ಮಂಜೂರಾಗಿದ್ದು, ಈ ಕಾಮಗಾರಿ ತುಂಬಾ ಕಳಪೆ ಮಟ್ಟದಿಂದ ಕೂಡಿದೆ. ನರ್ಮ್ ಮನೆಗಳ ಆಯ್ಕೆ ಪಟ್ಟಿಯಲ್ಲೂ ಮೈಸೂರು ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದಾರೆ. ಕೂಡಲೇ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಏಕಲವ್ಯನಗರದ ನಿವಾಸಿ ಗಳಾದ ವೆಂಕಟೇಶ, ಶ್ರೀಧರ, ಗೋಕಾಕ್ ಮಂಜಪ್ಪ, ರಂಗಮ್ಮ, ಚಂದ್ರ, ಮಹಾದೇವ, ಉದಯ, ಸ್ವಾಮಿ, ಲೋಕೇಶ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Translate »