ವಲಸೆ ಕಾರ್ಮಿಕರಿಗೆ ಮೇ 26ರಿಂದ 5 ಕೆಜಿ ಉಚಿತ ಅಕ್ಕಿ ವಿತರಣೆ
ಮೈಸೂರು

ವಲಸೆ ಕಾರ್ಮಿಕರಿಗೆ ಮೇ 26ರಿಂದ 5 ಕೆಜಿ ಉಚಿತ ಅಕ್ಕಿ ವಿತರಣೆ

May 19, 2020

ಬೆಂಗಳೂರು, ಮೇ 18(ಕೆಎಂಶಿ)-ನಾಳೆಯಿಂದ ನಾಲ್ಕನೇ ಹಂತದ ಲಾಕ್‍ಡೌನ್ ಜಾರಿ ಹಿನ್ನೆಲೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾ ಲಯ್ಯ ಆಹಾರ ಇಲಾಖೆಯಿಂದ ಪಡಿತರದಾರರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನಯೋಜನೆ-ಪ್ಯಾಕೇಜ್ 2 ಜಾರಿಯಾಗಿದ್ದು, ವಲಸೆ ಕಾರ್ಮಿಕರಿಗೆ ಇದೇ ತಿಂಗಳ 26ರಿಂದ 31ರವರೆಗೆ ಪ್ರತಿ ವ್ಯಕ್ತಿಗೆ 5 ಕೆ.ಜಿ. ಉಚಿತ ಅಕ್ಕಿ ನೀಡಲಾಗುತ್ತಿದೆ ಎಂದರು. ಜೂನ್ ತಿಂಗಳಿನ 1ರಿಂದ 10ನೇ ತಾರೀಖಿನವರೆಗೆ ಪ್ರತಿ ವ್ಯಕ್ತಿಗೆ 5ಕೆಜಿ ಅಕ್ಕಿ ಮತ್ತು ಪ್ರತಿ ಕುಟುಂಬಕ್ಕೆ 2ಕೆಜಿ ಕಡಲೆಕಾಳು ಉಚಿತವಾಗಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಈಗ ನೀಡುತ್ತಿರುವ ಪಡಿತರದ ಸಂಪೂರ್ಣ ಖರ್ಚು ವೆಚ್ಚ ಕೇಂದ್ರ ಸರ್ಕಾರ ವಹಿಸಿಕೊಂಡಿದೆ ಎಂದರು.

Translate »