ಮೈಸೂರು, ನ.22(ಪಿಎಂ)- ಕೆ.ಎಂ. ಪ್ರವೀಣ್‍ಕುಮಾರ್ (ಕೆಎಂಪಿಕೆ) ಚಾರಿ ಟಬಲ್ ಟ್ರಸ್ಟ್ ವತಿಯಿಂದ ವಿಶ್ವ ಆಯು ರ್ವೇದ ದಿನಾಚರಣೆ ಅಂಗವಾಗಿ ಸಾರ್ವ ಜನಿಕರಿಗೆ ಉಚಿತವಾಗಿ ವಿವಿಧ ಜಾತಿಯ ಆಯುರ್ವೇದ ಸಸಿಗಳನ್ನು ನೀಡುವ ಮೂಲಕ ಆಯುರ್ವೇದ ಸಸ್ಯದಿಂ ದಾಗುವ ಉಪಯೋಗಗಳ ಬಗ್ಗೆ ಭಾನು ವಾರ ಅರಿವು ಮೂಡಿಸಲಾಯಿತು.
ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿ ರುವ ಶ್ರೀಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನದ ಎದುರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಶಾಸಕ ಎಲ್.ನಾಗೇಂದ್ರ ಸಸಿಗಳನ್ನು ವಿತರಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಆಯು ರ್ವೇದ ಬಹುತೇಕ ಎಲ್ಲಾ ರೀತಿಯ ಅನಾ ರೋಗ್ಯಕ್ಕೂ ಉತ್ತಮ ಮದ್ದು. ಹಳ್ಳಿಗಳಲ್ಲಿ ಇಂದಿಗೂ ಆಯುರ್ವೇದ ಸಸ್ಯಗಳನ್ನು ಮನೆ ಮದ್ದಾಗಿ ಬಳಸಿಕೊಳ್ಳುವುದನ್ನು ಕಾಣ ಬಹುದು. ಇದು ನಮ್ಮ ಪುರಾತನ ಕಾಲದ ಉತ್ತಮ ಚಿಕಿತ್ಸಾ ವಿಧಾನ. ಆಯುರ್ವೇದ ವಿಷಯದಲ್ಲಿ ಅಧ್ಯಯನ ಮಾಡುವವರು ಹೆಚ್ಚು ಸಂಶೋಧನೆಗಳಲ್ಲಿ ತೊಡಗಿಸಿ ಕೊಳ್ಳಬೇಕು. ಆ ಮೂಲಕ ಆರೋಗ್ಯ ವಂತ ಸಮಾಜ ಕಟ್ಟಲು ಆಯುರ್ವೇದ ಮಹತ್ವದ ಅಂಶಗಳನ್ನು ಬೆಳಕಿಗೆ ತರ ಬೇಕು ಎಂದು ತಿಳಿಸಿದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತ ನಾಡಿ, ಆಯುರ್ವೇದದ ಸಮರ್ಪಕ ಬಳಕೆ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ. ಅಡ್ಡ ಪರಿಣಾಮ ಉಂಟು ಮಾಡದ ಅತ್ಯುತ್ತಮ ಔಷಧ ಇದಾಗಿದೆ. ಹೀಗಾಗಿಯೇ ಇದಕ್ಕೀಗ ಅಂತಾರಾಷ್ಟ್ರೀಯ ಮನ್ನಣೆ ದೊರಕಿದೆ ಎಂದರು.
ಮುಖಂಡ ಎನ್.ಎಂ.ನವೀನ್ ಕುಮಾರ್ ಮಾತನಾಡಿ, ಆಯುರ್ವೇದ ಸಸ್ಯಗಳ ಬಳಕೆ ಮೂಲಕ ದೀರ್ಘಾವಧಿ ಕಾಯಿಲೆಗಳಿಗೆ ತುತ್ತಾಗುವುದನ್ನು ತಡೆಯ ಬಹುದು. ಹೀಗಾಗಿ ಜನಸಾಮಾನ್ಯರಿಗೆ ದಿನ ನಿತ್ಯ ಉಪಯೋಗಕ್ಕೆ ಬರುವ ಗಿಡಮೂಲಿಕೆ ಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಕಾರ್ಯಕ್ರಮಗಳು ಅಗತ್ಯ ಎಂದು ತಿಳಿಸಿದರು.
ಆಯುರ್ವೇದ ಸಸ್ಯಗಳಾದ ಅಮೃತ ಬಳ್ಳಿ, ಕೃಷ್ಣ ತುಳಸಿ, ರಾಮ ತುಳಸಿ, ಬೆಟ್ಟದ ನೆಲ್ಲಿಕಾಯಿ, ದೊಡ್ಡಿಪತ್ರೆ, ಅಗಸೆ ಗಿಡ, ನೇರಳೆ ಗಿಡ, ಬೇವಿನ ಗಿಡ, ಅರಿ ಶಿನ ಗಿಡ ಸೇರಿದಂತೆ ಇನ್ನಿತರ ಗಿಡ ಗಳನ್ನು ವಿತರಣೆ ಮಾಡಲಾಯಿತು. ನಗರ ಪಾಲಿಕೆ ಸದಸ್ಯ ಎಸ್.ಬಿ.ಎಂ.ಮಂಜು, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಮುಖಂಡರಾದ ಅಜಯ್‍ಶಾಸ್ತ್ರಿ, ವಿನಯ್ ಕಣಗಾಲ್, ಎನ್.ಮಧು, ಶಿವಪ್ರಕಾಶ್, ಸುಚೀಂದ್ರ, ಚಕ್ರಪಾಣಿ, ಶ್ರೀಕಾಂತ್ ಕಶ್ಯಪ್, ರಾಜೇಶ್, ಪೈ.ಸುನೀಲ್ ಮತ್ತಿತರರು ಹಾಜರಿದ್ದರು.