ವೀರ ಮಡಿವಾಳ ಸಮುದಾಯದ 80 ಮಂದಿಗೆ ದಿನಸಿ ಕಿಟ್ ವಿತರಣೆ
ಮೈಸೂರು

ವೀರ ಮಡಿವಾಳ ಸಮುದಾಯದ 80 ಮಂದಿಗೆ ದಿನಸಿ ಕಿಟ್ ವಿತರಣೆ

April 23, 2020

ನಂಜನಗೂಡು, ಏ.22(ರವಿ)-ಲಾಕ್ ಡೌನ್ ಹಿನ್ನೆಲೆಯಲ್ಲಿ ವೀರ ಮಡಿವಾಳ ಸಮು ದಾಯದ 80 ಮಂದಿಗೆ ಕಾಂಗ್ರೆಸ್‍ನಿಂದ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ನೇತೃತ್ವದಲ್ಲಿ ದಿನಸಿ ಕಿಟ್, ತರಕಾರಿ ವಿತರಿ ಸಲಾಯಿತು. ಬಳಿಕ ಕೇಶವಮೂರ್ತಿ ಮಾತ ನಾಡಿ, ಲಾಕ್‍ಡೌನ್‍ನಿಂದಾಗಿ ಮಡಿವಾಳ ವರ್ಗದವರು ಕೆಲಸವಿಲ್ಲದೆ ತೊಂದರೆ ಯಲ್ಲಿರುವುದನ್ನು ಅರಿತು ಕಾಂಗ್ರೆಸ್‍ನಿಂದ ಸಹಾಯ ಮಾಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಟಿಎಪಿಎಂಎಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಮಡಿವಾಳ ಸಂಘದ ಅಧ್ಯಕ್ಷ ಹೆಚ್.ಡಿ.ಪ್ರಸನ್ನಕುಮಾರ್, ಉಪಾ ಧ್ಯಕ್ಷ ಶಿವಣ್ಣ, ಪ್ರಧಾನ ಕಾರ್ಯ ದರ್ಶಿ ಕೆ.ಎಂ.ಬಸವರಾಜು, ನಗರಸಭಾ ಸದಸ್ಯ ರಾದ ಮಹೇಶ್, ಶ್ವೇತಾಲಕ್ಷ್ಮಿ, ಸಿದ್ದಿಖ್, ಮಾಜಿ ಸದಸ್ಯರಾದ ಎನ್.ಎಂ.ಮಂಜುನಾಥ್, ಮಾಜಿ ತಾಪಂ ಸದಸ್ಯ ಶಿವಪ್ಪದೇವರು, ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರು, ಕೌಲಂದೆ ನಾಗೇಶ್, ಬ್ಲಾಕ್ ಅಧ್ಯಕ್ಷ ಪಿ.ಶ್ರೀನಿವಾಸ್, ಗಣೇಶ್, ಗೋವಿಂದ್, ಸತೀಶ್‍ಗೌಡ, ಶ್ರೀರಾಂಪುರ ಮಹದೇವು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Translate »