ಶಾಸಕ ನಾಗೇಂದ್ರ, ರಾಮಕೃಷ್ಣ ಆಶ್ರಮದಿಂದ ಬಡವರು, ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ
ಮೈಸೂರು

ಶಾಸಕ ನಾಗೇಂದ್ರ, ರಾಮಕೃಷ್ಣ ಆಶ್ರಮದಿಂದ ಬಡವರು, ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ

May 3, 2020

ಮೈಸೂರು,ಮೇ2(ಆರ್‍ಕೆಬಿ)- ಮೈಸೂರು ನಗರಪಾಲಿಕೆಯ 18ನೇ ವಾರ್ಡ್ ವ್ಯಾಪ್ತಿಯ ಮೇದರ ಬ್ಲಾಕ್‍ನಲ್ಲಿ 500 ಬಡ ಕುಟುಂಬ ಗಳಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವರಣದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಶನಿವಾರ ದಿನಸಿ ಪದಾರ್ಥಗಳಿರುವ ಕಿಟ್‍ಗಳನ್ನು ವಿತರಿಸಿದರು. ಮಂಜುನಾಥಪುರ ಪ್ರದೇ ಶದ 768 ಬಡವರು ಹಾಗೂ ಕೂಲಿ ಕಾರ್ಮಿಕರ ಕುಟುಂಬಗಳಿಗೆ ರಾಮಕೃಷ್ಣ ಆಶ್ರಮದ ವತಿಯಿಂದ ನೀಡಲಾದ ದಿನಸಿ ಕಿಟ್‍ಗಳನ್ನು ಆಶ್ರಮದ ಶ್ರೀ ಮುಕ್ತಿದಾ ನಂದ ಸ್ವಾಮೀಜಿ ವಿತರಿಸಿದರು. ಪಾಲಿಕೆ ಸದಸ್ಯ ರವೀಂದ್ರ ಧವಸ ಧಾನ್ಯ ಹಾಗೂ ತರಕಾರಿ ಕಿಟ್‍ಗಳನ್ನು ವಿತರಿಸಿದರು. ಬಿಜೆಪಿ ಚಾಮರಾಜ ಕ್ಷೇತ್ರ ಅಧ್ಯಕ್ಷ ಸೋಮಶೇಖರರಾಜು, ನಗರಪಾಲಿಕೆ ಮಾಜಿ ಸದಸ್ಯ ಗುರುವಿನಾಯಕ, ಮುಖಂಡರಾದ ಷಣ್ಮುಗಂ, ಮಹೇಶ್, ರೂಪಾ, ಮಹಿಳಾ ಮೋರ್ಚಾ ಅಧ್ಯಕ್ಷೆ ತನುಜಾ ಇನ್ನಿತರರು ಉಪಸ್ಥಿತರಿದ್ದರು.

Translate »