ಕೂಲಿಕಾರ್ಮಿಕರಿಗೆ ಮೇಯರ್‍ರಿಂದ ಪಡಿತರ ಕಿಟ್ ವಿತರಣೆ
ಮೈಸೂರು

ಕೂಲಿಕಾರ್ಮಿಕರಿಗೆ ಮೇಯರ್‍ರಿಂದ ಪಡಿತರ ಕಿಟ್ ವಿತರಣೆ

April 10, 2020

ಮೈಸೂರು, ಏ.9(ಆರ್‍ಕೆಬಿ)- ಕೊರೊನಾ ವೈರಸ್ ತಡೆಗಾಗಿ ಲಾಕ್‍ಡೌನ್ ಜಾರಿಯಾಗಿ ರುವ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ, ಕೂಲಿ ಹಣವೂ ಇಲ್ಲದೇ ಪರಿತಪಿಸುತ್ತಿರುವ ತಮ್ಮ ವಾರ್ಡ್‍ನ ಜನರಿಗೆ ನಗರಪಾಲಿಕೆ ಸದಸ್ಯ ಮಾ.ವಿ.ರಾಮ್‍ಪ್ರಸಾದ್ ಪಡಿತರ ಕಿಟ್ ವಿತರಿಸಿ ನೆರವಾಗಿದ್ದಾರೆ.

ಬಡವರು, ಕೂಲಿ ಕಾರ್ಮಿಕರೇ ಹೆಚ್ಚು ಇರುವ 55ನೇ ವಾರ್ಡ್‍ನ ಜನರಿಗೆ ಅಕ್ಕಿ, ಬೇಳೆಕಾಳು, ರವೆ, ಸಕ್ಕರೆ ಇರುವ ಪಡಿತರ ಕಿಟ್‍ಗಳನ್ನು ಗುರುವಾರ ಮೇಯರ್ ತಸ್ನೀಂ ಜತೆಗೂಡಿ ವಿತರಿಸಿದ್ದಾರೆ.

ಈ ವೇಳೆ ಮಾತನಾಡಿದ ಮೇಯರ್ ತಸ್ನೀಂ, ಕೋವಿಡ್-19 ವೈರಸ್ ಹಾವಳಿ ಯಿಂದಾಗಿ ಇಡೀ ದೇಶ ಲಾಕ್‍ಡೌನ್ ಆಗಿದೆ. ಇದರಿಂದ ಅಂದಂದಿನ ದುಡಿಮೆಯನ್ನೇ ನಂಬಿ ಬದುಕುವ ಜನರಿಗೆ ಕಷ್ಟವಾಗಿದೆ. ಇವರಿಗೆ ವಾರ್ಡ್ ಸದಸ್ಯ ರಾಮ್‍ಪ್ರಸಾದ್ ಸ್ವಂತ ಹಣದಲ್ಲಿ ಪಡಿತರ ಕಿಟ್‍ಗಳನ್ನು ವಿತ ರಿಸಿ ನೆರವಾಗಿದ್ದಾರೆ ಎಂದು ಪ್ರಶಂಸಿಸಿ ದರು. ಲಾಕ್‍ಡೌನ್ ಮುಗಿಯುವವರೆಗೂ ಜನರು ಮನೆಯಲ್ಲೇ ಉಳಿದು, ನಿಮ್ಮ ಆರೋಗ್ಯ ರಕ್ಷಣೆಯ ಜೊತೆಗೆ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವಂತೆ ಮನವಿ ಮಾಡಿದರು.

ರಾಮ್‍ಪ್ರಸಾದ್ ಮಾತನಾಡಿ, ಬಡ ವರು, ಕೂಲಿಕಾರ್ಮಿಕರನ್ನು ಗುರ್ತಿಸಿ ಪಡಿ ತರ ಕಿಟ್ ನೀಡಲಾಗುತ್ತಿದೆ. ಉಳಿದವರಿಗೆ ನಂತರ ನೀಡಲಾಗುವುದು. ಲಾಕ್‍ಡೌನ್ ಸಂದರ್ಭ ತೊಂದರೆಗೊಳಗಾಗಿರುವ ಜನ ರಿಗೆ ಉಳ್ಳವರು ನೆರವಾಗಬೇಕು ಎಂದರು.

ಮುಖಂಡರಾದ ಸಿ.ಸಂದೀಪ್, ಧರ್ಮೇಂದ್ರ, ವಿ.ಮಂಜುನಾಥ್, ಪುನೀತ್, ಚೇತನ್, ಶಿವು, ರೇಣು, ಸಂತೋಷ್, ಭಾಸ್ಕರ್, ಬಸವರಾಜು ಉಪಸ್ಥಿತರಿದ್ದರು.

Translate »