ಮಾಸ್ಕ್ ವಿತರಿಸಿ ಝಾನ್ಸಿರಾಣಿ ಲಕ್ಷ್ಮೀಬಾಯಿ ಪುಣ್ಯ ಸ್ಮರಣೆ
ಮೈಸೂರು

ಮಾಸ್ಕ್ ವಿತರಿಸಿ ಝಾನ್ಸಿರಾಣಿ ಲಕ್ಷ್ಮೀಬಾಯಿ ಪುಣ್ಯ ಸ್ಮರಣೆ

June 19, 2020

ಮೈಸೂರು, ಜೂ.18-ಮೈಸೂರಿನ ಸತ್ಯ ಮೇವ ಜಯತೇ ಸಂಘಟನೆ ವತಿಯಿಂದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಮುಂದೆ ಸಾರ್ವಜನಿಕರಿಗೆ ಮಾಸ್ಕ್ ವಿತ ರಿಸುವ ಮೂಲಕ ಝಾನ್ಸಿರಾಣಿ ಲಕ್ಷ್ಮೀ ಬಾಯಿ ಅವರ ಪುಣ್ಯ ಸ್ಮರಣೆ ಮಾಡಲಾಯಿತು. ಮಾಸ್ಕ್ ವಿತರಿಸಿ ಮಾತನಾಡಿದ ಬಿಜೆಪಿ ಮುಖಂಡ ಕೇಬಲ್ ಮಹೇಶ್, ಭಾರ ತೀಯ ಮಹಿಳಾ ಸಮುದಾಯಕ್ಕೆ ಮಾತ್ರ ವಲ್ಲದೆ ಜಗತ್ತಿನ ಮಹಿಳಾ ಸಮುದಾಯಕ್ಕೆ ಗೌರವ ತಂದುಕೊಟ್ಟವರು ಝಾನ್ಸಿರಾಣಿ ಲಕ್ಷ್ಮೀಬಾಯಿ ಎಂದರು. ಮೈಸೂರಿನ ಝಾನ್ಸಿ ರಾಣಿ ಲಕ್ಷ್ಮೀಬಾಯಿ ರಸ್ತೆಯಲ್ಲಿನ ನಾಮ ಫಲಕ ಕಿತ್ತು ಹೋಗಿದ್ದು, ಪಾಲಿಕೆ ತಕ್ಷಣವೇ ಅದನ್ನು ಸರಿಪಡಿಸಬೇಕೆಂದ ಅವರು, ನಾಗರಿಕರು ಆಯಾ ರಸ್ತೆ ಹಾಗೂ ವೃತ್ತ ಗಳ ಸಂಪೂರ್ಣ ಹೆಸರನ್ನು ಬಳಸುವ ಪರಿಪಾಠ ಬೆಳೆಸಿಕೊಳ್ಳಬೇಕೆಂದು ಮನವಿ ಮಾಡಿದರು. ಈ ವೇಳೆ ಸತ್ಯಮೇವ ಜಯತೇ ಸಂಘಟನೆಯ ಅಧ್ಯಕ್ಷ ರಾಕೇಶ್ ಕುಂಚಟಿಗ, ಉದ್ಯಮಿ ಜಯಸಿಂಹ ಶ್ರೀಧರ್, ಮಣಿಕಂಠ, ಮಂಜುನಾಥ್ ಇನ್ನಿತರರು ಉಪಸ್ಥಿತರಿದ್ದರು.

Translate »