ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶತಮಾನೋತ್ಸವ ಕಟ್ಟಡಕ್ಕೆ ಶಂಕುಸ್ಥಾಪನೆ
ಕೊಡಗು

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶತಮಾನೋತ್ಸವ ಕಟ್ಟಡಕ್ಕೆ ಶಂಕುಸ್ಥಾಪನೆ

August 21, 2021

ಮಡಿಕೇರಿ, ಆ.20- ಸಹಕಾರಿ ಸಂಸ್ಥೆಗಳು ಆರೋಗ್ಯ ಪೂರ್ಣವಾಗಿ ಇರಬೇಕಾದಲ್ಲಿ ಠೇವಣಿದಾರರ ಹಿತ ಕಾಯುವುದು ಅತ್ಯವಶ್ಯವೆಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಸಹಾಕಾರ ಕೇಂದ್ರ ಬ್ಯಾಂಕ್‍ನ ನಗರದ ಕೇಂದ್ರ ಕಚೇರಿಯ ಆವರಣದಲ್ಲಿ 7 ಕೋಟಿ ರೂ. ವೆಚ್ಚದ ‘ಶತಮಾನೋತ್ಸವ ಕಟ್ಟಡ’ಕ್ಕೆ ಶಂಕುಸ್ಥಾಪನೆ ಮತ್ತು ಶತಮಾನೋ ತ್ಸವ ಸಮಾರಂಭ ನಗರದಲ್ಲಿ ನಡೆಯಿತು.

ಶತಮಾನೋತ್ಸವ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಆಯೋಜಿತ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಸಹಕಾರಿ ಸಚಿವ ಎಸ್.ಟಿ. ಸೋಮ ಶೇಖರ್, ಕರ್ನಾಟಕ ರಾಜ್ಯದ ಇಪ್ಪತ್ತೊಂದು ಜಿಲ್ಲಾ ಸಹಕಾರಿ ಬ್ಯಾಂಕ್‍ಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯ ವ್ಯಾಪಿ 270ರಿಂದ 280 ಸಹಕಾರಿ ಬ್ಯಾಂಕ್‍ಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ ಬೆರಳೆಣಿಕೆಯ ಕೆಲ ಬ್ಯಾಂಕ್‍ಗಳಲ್ಲಿ ಭ್ರಷ್ಟಾಚಾರದಂತಹ ಘಟನೆಗಳು ನಡೆದಲಿ,್ಲ ಎಲ್ಲಾ ಸಹಕಾರಿ ಸಂಸ್ಥೆಗಳನ್ನು ಒಟ್ಟಾಗಿ ಭ್ರಷ್ಟಾಚಾರದ ವಿಚಾರಕ್ಕೆ ಗುರಿ ಮಾಡುವುದು ತರವಲ್ಲ. ಹೀಗಿದ್ದೂ, ಸಹಕಾರಿ ಸಂಸ್ಥೆಗಳ ಉಳಿವಿಗಾಗಿ ಕಾನೂನು ಗಳನ್ನು ಬಿಗಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು. ಸಹಕಾರಿ ಕ್ಷೇತ್ರದ ಕಾನೂನುಗಳನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನವನ್ನು ವಿಧಾನ ಸಭೆಯಲ್ಲಿ ಮಾಡ ಲಾಗುತ್ತದೆ. ಕಠಿಣ ಕಾನೂನು ಕ್ರಮಗಳಿಂದಷ್ಟೆ ಸಹಕಾರಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಸಾಧ್ಯವೆಂದು ತಿಳಸಿದರು.

8 ಸಾವಿರ ಕೋಟಿ ಸಾಲ: ಕರ್ನಾಟಕ ರಾಜ್ಯ ಸರ್ಕಾರ ಸಹಕಾರಿ ಸಂಸ್ಥೆಗಳ ಮೂಲಕ 20,810 ಕೋಟಿ ರೂ.ಗಳ ಸಾಲ ವಿತರ ಣೆಯ ಗುರಿ ಹೊಂದಿದೆ. ಮೊದಲ ಹಂತದಲ್ಲಿ 8 ಸಾವಿರ ಕೋಟಿ ರೂ. ಸಾಲವನ್ನು 30 ಲಕ್ಷ ಜನರಿಗೆ ವಿತರಿಸಲಾಗುತ್ತದೆ, ಶೀಘ್ರದಲ್ಲೆ ಕೊಡಗಿನಲ್ಲೂ ಸಾಲ ವಿತರಣೆಗೆ ಚಾಲನೆ ದೊರಕಲಿದೆ ಎಂದರು.

ಹಸ್ತಕ್ಷೇಪ ನಿಲ್ಲಲಿ: ಹಿರಿಯ ಸಹಕಾರಿ, ಮಾಜಿ ಸಚಿವ ಎಂ.ಸಿ. ನಾಣಯ್ಯ ಮಾತ ನಾಡಿ, ಸಹಕಾರಿ ಕ್ಷೇತ್ರದಲ್ಲಿನ ರಾಜಕೀಯ ಹಸ್ತಕ್ಷೇಪವನ್ನು ಸಂಪೂರ್ಣವಾಗಿ ನಿಲ್ಲಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳು ನಡೆಯಬೇಕೆಂದು ಅಭಿಪ್ರಾಯಿಸಿದರು.

ಪ್ರಸ್ತುತ ಸಹಕಾರಿ ಸದಸ್ಯರುಗಳಿಗೆ ನೀಡುತ್ತಿರುವ ಶೂನ್ಯ ಬಡ್ಡಿ ದರದ ಸಾಲದ ವಿತರಣೆಗೆ ಸಂಬಂಧಿಸಿದಂತೆ ಕುಟುಂಬದ ಒಬ್ಬರಿಗೆ ಮಾತ್ರ ಸಾಲ ಸೌಲಭ್ಯ ಮೊದಲಾದ ಎಲ್ಲಾ ನಿರ್ಬಂಧ ಗಳನ್ನು ತೆಗೆಯಲಾಗಿದೆ. ಈ ನಿರ್ಬಂಧಗಳ ಸಡಿಲಿಕೆ ಕೇವಲ ಒಂದು ವರ್ಷಕ್ಕೆ ಸೀಮಿತವಾಗಿಸದೆ, ನಿರಂತರವಾಗಿರುವಂತೆ ನೋಡಿಕೊಳ್ಳುವಂತೆ ಮನವಿ ಮಾಡಿದರು.

‘ಸಹಕಾರ ಸಿರಿ’ ಅನಾವರಣ: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶತಮಾನೋತ್ಸವ ಹಿನ್ನೆಲೆಯಲ್ಲಿ ಹೊರತರಲಾದ ‘ಸಹಕಾರ ಸಿರಿ’ಸ್ಮರಣ ಸಂಚಿಕೆಯನ್ನು ಶಾಸಕ ಕೆ.ಜಿ. ಬೋಪಯ್ಯ ಅನಾವರಣ ಗೊಳಿಸಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರವು ಪ್ರಾಮಾಣಿಕ ಕಾರ್ಯ ನಿರ್ವಹಣೆಯ ಮೂಲಕ ವಿಶಾಲವಾಗಿ ಬೆಳೆದು ನಿಂತಿದೆಯೆಂದು ಮೆಚ್ಚುಗೆಯ ನುಡಿಗಳ್ನಾಡಿದರು.

ಸಮಾರಂಭವನ್ನು ಉದ್ಘಾಟಿಸಿದ ಶಾಸಕ ಅಪ್ಪಚ್ಚು ರಂಜನ್, ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗದ ಹೊಂದಾಣಿಕೆಯ ಪ್ರಾಮಾಣಿಕ ಕಾರ್ಯನಿರ್ವಹಣೆಯಿಂದ ಕೆಡಿಸಿಸಿ ಬ್ಯಾಂಕ್ ಬೆಳೆದು ನಿಂತಿದ್ದು, ಜಿಲ್ಲೆಯ ಗ್ರಾಮೀಣ ಭಾಗಗಳಿಗೂ ಬ್ಯಾಂಕಿಂಗ್ ಸೇವೆ ತಲುಪಿಸಿದ ಕೀರ್ತಿ ಕೆಡಿಸಿಸಿ ಬ್ಯಾಂಕಿಗೆ ಸಲುತ್ತದೆಂದರು.

ಸನ್ಮಾನ-ನೆನಪಿನ ಕಾಣಿಕೆ: ಇದೇ ಸಂದರ್ಭ ಕೆಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನ ಸನ್ಮಾನಿಸಿ ಗೌರವಿಸಲಾಯಿತ ಲ್ಲದೆ, ಶತಮಾನೋತ್ಸವ ಪ್ರಯುಕ್ತ ಸಹಕಾರಿ ಸಂಘಗಳಿಗೆ ಸಾಂಕೇತಿಕ ವಾಗಿ ಕಿರುಕಾಣಿಕೆಯಾಗಿ ಕಂಪ್ಯೂಟರ್‍ಗಳನ್ನು ವಿತರಿಸಲಾಯಿತು.

ಸಂಚಾರಿ ಬ್ಯಾಂಕ್‍ಗೆ ಚಾಲನೆ: ಆರಂಭದಲ್ಲಿ ಕೆಡಿಸಿಸಿ ಬ್ಯಾಂಕಿನ ಸಂಚಾರಿ ಸಹಕಾರ ಬ್ಯಾಂಕಿನ ವಾಹನವನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೊಡಂದೇರ ಪಿ.ಗಣಪತಿ ವಹಿಸಿದ್ದರು. ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ರವಿ ಕುಶಾಲಪ್ಪ, ಸಹಕಾರ ಸಂಘಟಗಳ ಅಪರ ನಿಬಂಧಕರಾದ ಎ.ಸಿ.ದಿವಾಕರ್, ಸಹಕಾರ ಸಂಘಗಳ ಜಂಟಿ ನಿಬಂಧಕ ರಾದ ಪ್ರಕಾಶ್ ರಾವ್, ಕೆಡಿಸಿಸಿ ಬ್ಯಾಂಕ್ ನಿರ್ದೇಶಕರು, ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

Translate »